ಸೇನೆಗೆ ಮತ್ತಷ್ಟು ಬಲ ಕೊಟ್ಟ ಬಜೆಟ್, ಸತತ 7 ವರ್ಷ ರಕ್ಷಣಾ ವಲಯಕ್ಕೆ ಹೆಚ್ಚಿದ ಅನುದಾನ!

By Suvarna News  |  First Published Feb 1, 2021, 3:29 PM IST

ಸತತ 7 ವರ್ಷ ರಕ್ಷಣಾ ವಲಯಕ್ಕೆ ಹೆಚ್ಚಿದ ಅನುದಾನ| ಸೇನೆಗೆ ಮತ್ತಷ್ಟು ಬಲ ತುಂಬಿದ ಬಜೆಟ್| ನಿರ್ಮಲಾ ಸೀತಾರಾಮನ್‌ ಧನ್ಯವಾದ ಎಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್


ನವದೆಹಲಿ(ಫೆ.01): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಬಹುನಿರೀಕ್ಷಿತ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಹಣಕಾಸು ಸಚಿವರು ಎಕ್ಷಣಾ ವಲಯಕ್ಕೆ 4,78,195.62 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದಾರೆ. ಇದರಲ್ಲಿ 1,15,850 ಲಕ್ಷ ರೂಪಾಯಿ ಪಿಂಚಣಿಯೂ ಸೇರಿದೆ. ಸತತ ಏಳನೇ ವರ್ಷ ರಕ್ಷಣಾ ಬಜೆಟ್ ಮತ್ತಷ್ಟು ವೃದ್ಧಿಸಿದೆ. 2020 ರಲ್ಲಿ ರಕ್ಷಣಾ ಬಜೆಟ್ 4.71 ಲಕ್ಷ ಕೋಟಿ ಇತ್ತು.

"

I specially thank PM& FM for increasing the defence budget to 4.78 lakh cr for FY21-22 which includes capital expenditure worth Rs 1.35 lakh crore. It is nearly19 percent increase in Defence capital expenditure. This is highest ever increase in capital outlay for defence in 15yrs

— Rajnath Singh (@rajnathsingh)

Tap to resize

Latest Videos

undefined

ರಕ್ಷಣಾ ವಲಯಕ್ಕೆ ಮೀಸಲಿಟ್ಟ ಅನುದಾನದಲ್ಲಿ ಪಿಂಚಣಿ ಮೊತ್ತವನ್ನು ತೆಗೆದರೆ ಸುಮಾರು  3.63 ಲಕ್ಷ ಕೋಟಿಯಾಗುತ್ತದೆ. 2020 ರಲ್ಲಿ ಈ ಮೊತ್ತ 3.37 ಲಕ್ಷ ಕೋಟಿ ಇತ್ತು. ಇನ್ನು 2019ರಲ್ಲಿ ಮೋದಿ ಸರ್ಕಾರ ರಕ್ಷಣಾ ವಲಯಕ್ಕೆ 3.18 ಲಕ್ಷ ಕೋಟಿ ರೂಪಾಯಿ ಜಾರಿಗೊಳಿಸಿತ್ತು.

ಹಣಕಾಸು ಸಚಿವರಿಗೆ ರಕ್ಷಣಾ ಸಚಿವರಿಂದ ಧನ್ಯವಾದ

ಇನ್ನು ಬಜೆಟ್ ಮಂಡನೆ ಬೆನ್ನಲ್ಲೇ ಟ್ವೀಟ್ ಮಾಡಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಜೆಟ್‌ನಲ್ಲಿ ಅನುದಾನ ಹೆಚ್ಚಿಸಿರುವುದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪಿಎಂ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಕಳೆದ ಹದಿನೈದು ವರ್ಷದಲ್ಲಿ ದಾಖಲೆಯ ಪ್ರಮಾಣದಲ್ಲಿ ಅನುದಾನ ಹೆಚ್ಚಿಸಿದ್ದು, ಇದು ರಕ್ಷಣಾ ಬಂಡವಾಳ ವೆಚ್ಚದಲ್ಲಿ ಶೇ 19ರಷ್ಟು ಹೆಚ್ಚು ಎಂದಿದ್ದಾರೆ.

ರಕ್ಷಣಾ ಬಜೆಟ್‌ ವಿಚಾರದಲ್ಲಿ ಭಾರತ ಯಾವ ಸ್ಥಾನದಲ್ಲಿದೆ?

SIPRI ಇಡೀ ವಿಶ್ವದ ಎಲ್ಲಾ ರಾಷ್ಟ್ರಗಳ ರಕ್ಷಣಾ ಬಜೆಟ್‌ ಮೇಲೆ ಕಣ್ಣಿಟ್ಟಿದೆ. SIPRI ಅನ್ವಯ 201ರಲ್ಲಿ ಇಡೀ ವಿಶ್ವದ ರಕ್ಷಣಾ ಬಜೆಟ್ 1917 ಬಿಲಿಯನ್ ಡಾಲರ್ ಆಗಿತ್ತು. ಜೊತೆಗೆ ರಕ್ಷಣಾ ವಲಯಕ್ಕೆ ಅತೀ ಹೆಚ್ಚು ಮೊತ್ತ ವಿನಿಯೋಗಿಸುವ ಟಾಪ್ 5 ರಾ‍fಟ್ರಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆದಿತ್ತು.

ಯಾರಿಗೆ ಯಾವ ಸ್ಥಾನ?

ಈ ಪಟ್ಟಿಯಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ನೆರೆ ರಾಷ್ಟ್ರ ಚೀನಾ ಎರಡನೇ ಸ್ಥಾನದಲ್ಲಿದೆ. ಈ ರೇಸ್‌ನಲ್ಲಿ ಭಾರತ ಮೂರನೇ ಸ್ಥಾನ ಹಾಘೂ ರಷ್ಯಾ ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನ ಸೌದಿ ಅರೇಬಿಯಾ ಪಡೆದಿದೆ. 

click me!