ಯುವ ಉದ್ಯಮಿ ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಮುಕ್ತವಾಗಿ ಮಾತನಾಡಿದ್ದಾರೆ. ಇದೇ ವೇಳೆ ಭಾರತೀಯ ಉದ್ಯಮಿಗಳಿಗೆ ಭರ್ಜರಿ ಆಫರ್ ಒಂದನ್ನು ನೀಡಿದ್ದಾರೆ. ನ್ಯೂಜಿಲೆಂಡ್ ಪ್ರಧಾನಿ ನೀಡಿದ ಆಫರ್ ಏನು?
ನವದೆಹಲಿ(ಏ.06) ಭಾರತದಲ್ಲಿ ಉದ್ಯಮ ಅದರಲ್ಲೂ ಪ್ರಮುಖವಾಗಿ ಸ್ಟಾರ್ಟ್ಅಪ್ ಕಲ್ಚರ್ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಉತ್ತೇಜನ ನೀಡಿದೆ. ಈ ಮೂಲಕ ಭಾರತ ಸ್ಟಾರ್ಟ್ಅಪ್ ಹಬ್ ಆಗಿ ಮಾಡಲು ಪ್ರಯತ್ನಿಸುತ್ತಿದೆ. ಇದರ ನಡುವೆ ಭಾರತೀಯ ಉದ್ಯಮಿಗಳಿಗೆ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಭರ್ಜರಿ ಆಫರ್ ನೀಡಿದ್ದಾರೆ. ಇದು ವಿಶೇಷವಾಗಿ ಭಾರತೀಯ ಉದ್ಯಮಿಗಳಿಗೆ ನೀಡಿದ ಆಫರ್. ಹೌದು, ನ್ಯೂಜಿಲೆಂಡ್‌ನಲ್ಲಿ ಭಾರತೀಯ ಉದ್ಯಮಿಗಳು ಹೂಡಿಕೆ ಮಾಡಬೇಕು ಎಂದಿದ್ದಾರೆ. ಈ ಮೂಲಕ ನ್ಯೂಜಿಲೆಂಡ್‌ನಲ್ಲಿ ಹೂಡಿಕೆ ಮಾಡಲು ಭಾರತೀಯ ಉದ್ಯಮಿಗಳನ್ನು ಆಹ್ವಾನಿಸಿದ್ದಾರೆ.
ಭಾರತದ ಯುವ ಉದ್ಯಮಿ ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಈ ಕುರಿತು ಮಾತನಾಡಿದ್ದಾರೆ. ನ್ಯೂಜಿಲೆಂಡ್ ದೇಶವನ್ನು ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಉತ್ತಮ ತಾಣವಾಗಿ ಮಾಡಲು ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ. ನ್ಯೂಜಿಲೆಂಡ್ ಅತೀ ಹೆಚ್ಚಿನ ವಿದೇಶಿ ಬಂಡವಾಳವನ್ನು ಆಕರ್ಷಿಸುತ್ತಿದೆ ಎಂದಿದ್ದಾರೆ.
ಬೆಂಗಳೂರಿನ ಸಮಸ್ಯೆ ಪರಿಹಾರಕ್ಕೆ ನಿಮ್ಮಲ್ಲಿ ಐಡಿಯಾ ಇದ್ಯಾ, ನಿಖಿಲ್ ಕಾಮತ್ ನೀಡ್ತಿದ್ದಾರೆ ನಿಮಗೆ ಚಾನ್ಸ್!
ನ್ಯೂಜಿಲೆಂಡ್ ಪ್ರಜೆಗಳು ಜನ ಜೀವನ ಮಟ್ಟ ಮತ್ತಷ್ಟು ಸುಧಾರಣೆಯಾಗಿದೆ. ಉತ್ತಮ ಜೀವನ ಹಾಗೂ ನೆಮ್ಮದಿಗಾಗಿ ನ್ಯೂಜಿಲೆಂಡ್ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಇದೀಗ ನ್ಯೂಜಿಲೆಂಡ್ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ನ್ಯೂಜಿಲೆಂಡ್ ಪ್ರಮುಖವಾಗಿ ವ್ಯಾಪಾರ ಹಾಗೂ ವಹಿವಾಟು ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಎದುರು ನೋಡುತ್ತಿದೆ ಎಂದಿದ್ದಾರೆ.
ನ್ಯೂಜಿಲೆಂಡ್ ಕೇವಲ ವಿದೇಶಿ ಬಂಡವಾಳವನ್ನು ಮಾತ್ರ ಎದುರುನೋಡುತ್ತಿಲ್ಲ. ಇದರ ಜೊತೆಗೆ ಉತ್ತಮ ಜ್ಞಾನ, ನುರಿತ ತಂತ್ರಜ್ಞರು, ಪರಿಣಿತರು, ಪ್ರತಿಭಾನ್ವಿತರನ್ನು ಎದುರು ನೋಡುತ್ತಿದೆ. ಇದು ನ್ಯೂಜಿಲೆಂಡ್ ವ್ಯಾಪಾರ ಮಾರುಕಟ್ಟೆಯನ್ನು ಮೇಲ್ದರ್ಜೆಗೆ ಏರಿಸಲು ಸಹಾಯ ಮಾಡಲಿದೆ. ಇಷ್ಟೇ ಅಲ್ಲ ದೇಶದ ಒಟ್ಟಾರೆ ಸ್ಕಿಲ್ಸ್ ಲೇಬರ್ ಮಟ್ಟ ಹೆಚ್ಚಿಸಲಿದೆ. ಯುವ ಸಮೂಹಕ್ಕೆ ಕಲಿಕಾ ಕೇಂದ್ರವಾಗಲಿದೆ. ಇದರಿಂದ ಭವಿಷ್ಯದಲ್ಲಿ ಉದ್ಯೋಗಕ್ಕೆ ಕೌಶಲ್ಯ ಇರುವ ನೌಕರರ ಕೊರತೆ ಎದುರಾಗುವುದಿಲ್ಲ ಎಂದಿದ್ದಾರೆ.
ಕ್ರಿಸ್ಟೋಫರ್ ಲಕ್ಸನ್ ಇತ್ತೀಚೆಗೆ ನ್ಯೂಜಿಲೆಂಡ್‌ನಲ್ಲಿ ಆ್ಯಕ್ಚೀವ್ ಇನ್‌ವೆಸ್ಟರ್ ವೀಸಾ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಮೂಲಕ ನ್ಯೂಜಿಲೆಂಡ್‌ನಲ್ಲಿ ಹೂಡಿಕೆ ಮಾಡುವ ಉದ್ಯಮಿಗಳಿಗೆ ವೀಸಾದಲ್ಲಿ ವಿಶೇಷ ಪರಿಗಣನೆ ನೀಡಲು ಮುಂದಾಗಿದೆ. ಈ ವೀಸಾದಿಂದ ಹೂಡಿಕೆದಾರರು 3 ವರ್ಷಗಳ ಕಾಲ ಯಾವುದೇ ಅಡೆ ತಡೆ ಇಲ್ಲದೆ ನ್ಯೂಜಿಲೆಂಡ್‌ನಲ್ಲಿ ಉಳಿದುಕೊಂಡು ವ್ಯವಾಹರ ನಡೆಸಲು ಅನುವು ಮಾಡಿಕೊಡಲಾಗುತ್ತದೆ. ಇದರಿಂದ ಸಂಪರ್ಕ ಹೆಚ್ಚಾಗಲಿದೆ. ಇತರ ದೇಶಗಳೊಂದಿಗೆ ನಿಕಟ ಸಂಪರ್ಕ ಬೆಳೆಯಲಿದೆ ಎಂದು ಕ್ರಿಸ್ಟೋಫರ್ ಲಕ್ಸನ್ ಹೇಳಿದ್ದಾರೆ.
ಹೂಡಿಕೆ ವೇಳೆ ಹಲವು ಉದ್ಯಮಿಗಳು ನ್ಯೂಜಿಲೆಂಡ್ ಅತೀ ದೂರದ ಪ್ರದೇಶ, ಭೌಗೋಳಿಕವಾಗಿ ನ್ಯೂಜಿಲೆಂಡ್ ದೂರದಲ್ಲಿದೆ ಎಂದು ಹೇಳತ್ತಾರೆ. ಆದರೆ ನ್ಯೂಜಿಲೆಂಡ್‌ನ್ನು ಉದ್ಯಮದ ಮೂಲಕ, ಇತರ ವ್ಯವಹಾರಗಳ ಮೂಲಕ ಹಿತ್ತರವಾಗಿಸುವ ಹೂಡಿಕೆದಾರರ ಅವಶ್ಯಕತೆ ಇದೆ ಎಂದಿದ್ದಾರೆ.
ಪರ್ಪ್ಲೆಕ್ಸಿಟಿ AIನಲ್ಲಿ ಇಂಟರ್ನ್‌ಶಿಪ್ ಮಾಡ್ತೀನಿ ಅಂದ ಉದ್ಯಮಿ ನಿಖಿಲ್ ಕಾಮತ್! CEO ಶಾಕ್