New wage code: ಜುಲೈ 1 ರಿಂದ ಜಾರಿಯಾಗುವ ಹೊಸ ವೇತನ ಸಂಹಿತೆ ಏನು?

By Suvarna News  |  First Published Jun 17, 2022, 5:22 PM IST

ಉದ್ಯೋಗಿಗಳ ಕೆಲಸದ ಅವಧಿ, ವೇತನ, ರಜೆ, ಪಿಎಫ್ ಗಳಲ್ಲಿ ಮಹತ್ವದ ಬದಲಾವಣೆ ತರುವ ಹೊಸ ವೇತನ ಸಂಹಿತೆ ಜುಲೈ 1ರಿಂದ ಜಾರಿಯಾಗುತ್ತೆ ಎಂಬ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಆದ್ರೆ ಈ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅಷ್ಟಕ್ಕೂ ಹೊಸ ವೇತನ ಸಂಹಿತೆಯಲ್ಲಿ ಏನಿದೆ? ಇಲ್ಲಿದೆ ಮಾಹಿತಿ.
 


ನವದೆಹಲಿ (ಜೂ.17): ಜುಲೈ 1ರಿಂದ ಹೊಸ ವೇತನ ಸಂಹಿತೆ ಜಾರಿಯಾಗುತ್ತಾ ಎಂಬ ಬಗ್ಗೆ ಸದ್ಯ ಚರ್ಚೆ ಹುಟ್ಟಿಕೊಂಡಿದೆ. ಇದು ಜಾರಿಯಾದ್ರೆ ವಾರದಲ್ಲಿ ನಾಲ್ಕೇ ದಿನ ಕೆಲಸ ಸೇರಿದಂತೆ ವೇತನ (Salary),ಕೆಲಸದ ಅವಧಿ (Working hours) ಹಾಗೂ ಪಿಎಫ್ ಗೆ(PF) ಸಂಬಂಧಿಸಿ ಬದಲಾವಣೆಗಳಾಗೋ ಸಾಧ್ಯತೆಯಿದೆ. ಜೊತೆಗೆ ಸಂಬಳದ ರಚನೆಯಲ್ಲಿ ಕೂಡ ಮಾರ್ಪಾಡುಗಳಾಗಲಿವೆ ಎಂದು ಹೇಳಲಾಗಿದೆ. ಹೊಸ ವೇತನ ಸಂಹಿತೆ ಜುಲೈ 1ರಿಂದ ಜಾರಿಯಾಗೋ ಬಗ್ಗೆ ಅನೇಕ ವರದಿಗಳು ಪ್ರಕಟವಾಗಿವೆ. ಆದ್ರೆ ಈ ಕುರಿತು  ಸರ್ಕಾರ ಈ ತನಕ ಅಧಿಕೃತ ಮಾಹಿತಿ ನೀಡಿಲ್ಲ. ಹಾಗಾದ್ರೆ ಹೊಸ ವೇತನ ಸಂಹಿತೆಯಲ್ಲಿ ಏನಿದೆ? ಇದ್ರಿಂದ ಏನೆಲ್ಲ ಬದಲಾವಣೆಗಳಾಗಲಿವೆ? ಇಲ್ಲಿದೆ ಮಾಹಿತಿ.

ಕೇಂದ್ರ ಸರ್ಕಾರ 2021ರ ಏಪ್ರಿಲ್ ನಿಂದಲೇ ಹೊಸ ಕಾರ್ಮಿಕ ನೀತಿ ಸಂಹಿತೆಯನ್ನು (labour codes) ಅನುಷ್ಠಾನಗೊಳಿಸೋ ಉದ್ದೇಶ ಹೊಂದಿತ್ತು. ಆದ್ರೆ ಕಾರ್ಮಿಕರು ಸಹವರ್ತಿ ಪಟ್ಟಿಯಲ್ಲಿ ಬರೋ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಈ ನಾಲ್ಕು ನೀತಿ ಸಂಹಿತೆಗಳ ಅಡಿಯಲ್ಲಿ ರೂಪಿಸಿರೋ ನಿಯಮಗಳ ಬಗ್ಗೆ ಅಧಿಸೂಚನೆ ಹೊರಡಿಸಬೇಕಿದೆ. ಈ ತನಕ 23 ರಾಜ್ಯಗಳು ಈ ಕಾನೂನಿಗೆ ಸಂಬಂಧಿಸಿ ಕರಡು ನಿಯಮಗಳನ್ನು ಮರುಪ್ರಕಟಿಸಿವೆ. ಕೇಂದ್ರ ಸರ್ಕಾರ 2021ರ ಫೆಬ್ರವರಿಯಲ್ಲೇ ಕರಡು ನಿಯಮಗಳನ್ನು ಅಂತಿಮಗೊಳಿಸೋ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. 

Tap to resize

Latest Videos

Edible Oil Price:ಗೃಹಿಣಿಯರಿಗೆ ಸಿಹಿ ಸುದ್ದಿ; ಅಡುಗೆ ಎಣ್ಣೆ ಬೆಲೆ ಲೀಟರ್ ಗೆ 15ರೂ. ಇಳಿಕೆ

ವೇತನ(Salary), ಸಾಮಾಜಿಕ ಭದ್ರತೆ(Social security), ಕೈಗಾರಿಕಾ ಸಂಬಂಧ (industrial relations) ಹಾಗೂ ವೃತ್ತಿ ಸುರಕ್ಷತೆ(occupation safety), ಆರೋಗ್ಯ ಹಾಗೂ ಕಾರ್ಯನಿರ್ವಹಣೆ ಪರಿಸ್ಥಿತಿಗಳಿಗೆ (health and working conditions) ಸಂಬಂಧಿಸಿ ನಾಲ್ಕು ಹೊಸ ಕಾರ್ಮಿಕ ನೀತಿ ಸಂಹಿತೆಗಳನ್ನು(labour codes) ಕೇಂದ್ರ ರೂಪಿಸಿದೆ.

ಏನೆಲ್ಲ ಬದಲಾವಣೆಯಾಗಲಿದೆ?
1.ಟೇಕ್ ಹೋಮ್ ವೇತನ ಇಳಿಕೆ
ವೇತನ ಸಂಹಿತೆ 2019ಕ್ಕೆ ಸಂಬಂಧಿಸಿದ ಸರ್ಕಾರದ ಅಧಿಸೂಚನೆಯಲ್ಲಿ 'ವೇತನದ' ಅರ್ಥ ಬದಲಾಯಿಸಲಾಗಿದೆ. ಇದರ ಅನ್ವಯ ಉದ್ಯೋಗಿಯ ಟೇಕ್ ಹೋಮ್ ವೇತನ ಇಳಿಕೆಯಾಗಲಿದೆ. ಆದ್ರೆ ಪಿಎಫ್ ಹಾಗೂ ಗ್ರ್ಯಾಚ್ಯುಟಿಗೆ ಉದ್ಯೋಗದಾತರ ಕೊಡುಗೆ ಹೆಚ್ಚಲಿದೆ. ಹೊಸ ನಿಯಮಗಳ ಅನ್ವಯ ಮೂಲ ವೇತನ ತಿಂಗಳ ಒಟ್ಟು ಸಂಬಳದ ಶೇ.50ರಷ್ಟು ಇರಬೇಕು. ಇದ್ರಿಂದ ಎಚ್ ಆರ್ ಎ, ವಿಶೇಷ ಭತ್ಯೆ, ಫೋನ್ ಬಿಲ್ ಇತ್ಯಾದಿ ಭತ್ಯೆಗಳು ತಗ್ಗಲಿವೆ. 

2.ವಾರದಲ್ಲಿ ನಾಲ್ಕೇ ದಿನ ಕೆಲಸ
ಪ್ರಸ್ತುತ ಬಹುತೇಕ ಉದ್ಯೋಗಿಗಳಿಗೆ ವಾರದಲ್ಲಿ ಐದು ದಿನ ಕಾರ್ಯನಿರ್ವಹಿಸೋ ವ್ಯವಸ್ಥೆ ಜಾರಿಯಲ್ಲಿದೆ. ಹೊಸ ಕಾರ್ಮಿಕ ನೀತಿ ಸಂಹಿತೆ ಅನುಷ್ಠಾನಗೊಂಡ ಬಳಿಕ ವಾರದಲ್ಲಿ ನಾಲ್ಕು ದಿನ ಕಾರ್ಯನಿರ್ವಹಿಸೋ ವ್ಯವಸ್ಥೆ ಜಾರಿಗೆ ಬರೋ ನಿರೀಕ್ಷೆಯಿದೆ. ಆದ್ರೆ ಈ ನಾಲ್ಕು ದಿನಗಳಲ್ಲಿ ಪ್ರತಿದಿನ 12 ಗಂಟೆ ಕಾರ್ಯನಿರ್ವಹಿಸಬೇಕು. ಅಂದ್ರೆ ವಾರಕ್ಕೆ 48 ಗಂಟೆಗಳು. ವಾರಕ್ಕೆ 48 ಗಂಟೆಗಳು ಕಾರ್ಯನಿರ್ವಹಿಸೋದು ಅಗತ್ಯ ಎಂದು ಕಾರ್ಮಿಕ ಸಚಿವಾಲಯ ಸ್ಪಷ್ಟಪಡಿಸಿದೆ.

3.ಪಿಎಫ್ ಏರಿಕೆ
ಪಿಎಫ್ ಲೆಕ್ಕ ಹಾಕುವಾಗ ಮೂಲವೇತನದ ಶೇಕಡಾವಾರು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮೂಲವೇತನ ಹೆಚ್ಚಳದಿಂದ ಪಿಎಫ್ ಕೂಡ ಏರಿಕೆಯಾಗಲಿದೆ. 

4.ತೆರಿಗೆ ಹೊರೆ ಹೆಚ್ಚಳ
ಸದ್ಯ ಮೂಲವೇತನ, ಎಚ್ ಆರ್ ಎ, ಬೋನಸ್ ಸೇರಿದಂತೆ ಕೆಲವು ಭಾಗಗಳನ್ನು ಹೊರತುಪಡಿಸಿದ್ರೆ ಭತ್ಯೆಗಳು ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ. ಆದ್ರೆ ಈಗ ಮೂಲ ವೇತನ ಹೆಚ್ಚಳಗೊಂಡು ಭತ್ಯೆಗಳು ತಗ್ಗುವ ಕಾರಣ ತೆರಿಗೆಗಳು ಕೂಡ ಹೆಚ್ಚಲಿವೆ.

Personal Finance: ಉಳಿತಾಯ ಖಾತೆ ಹೊಂದಿದ್ರೆ ಈ ವಿಷ್ಯ ಗಮನದಲ್ಲಿರಲಿ

5.ಗಳಿಕೆ ರಜೆ ನಿಯಮದಲ್ಲಿ ಬದಲಾವಣೆ
ಹೊಸ ವೇತನ ಸಂಹಿತೆ ಜಾರಿಯಿಂದ ಗಳಿಕೆ ರಜೆಯಲ್ಲಿ ದೊಡ್ಡ ಬದಲಾವಣೆಗಳಾಗಲಿವೆ. ಪ್ರಸ್ತುತ ಸರ್ಕಾರಿ ಇಲಾಖೆಗಳು ಒಂದು ವರ್ಷದಲ್ಲಿ 30 ಗಳಿಕೆ ರಜೆಗಳನ್ನು ನೀಡಿದ್ರೆ, ರಕ್ಷಣಾ ಉದ್ಯೋಗಿಗಳಿಗೆ ವರ್ಷಕ್ಕೆ 60 ರಜೆಗಳು ಸಿಗುತ್ತವೆ. ಉದ್ಯೋಗಿಗಳು ಮುಂದುವರಿಸಿದ 300 ರಜೆಗಳನ್ನು ನಗದೀಕರಿಸಿಕೊಳ್ಳಹುದು. ಆದ್ರೆ ಹೊಸ ವೇತನ ಸಂಹಿತೆಯಲ್ಲಿ ಈ ರಜೆಗಳನ್ನು 450 ಕ್ಕೆ ಹೆಚ್ಚಿಸುವಂತೆ ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ. 

click me!