UPI ನಿಯಮಗಳಲ್ಲಿ ಮಹತ್ವದ ಬದಲಾವಣೆಗಳು: ಆಗಸ್ಟ್ 1 ರಿಂದ ಜಾರಿ

Published : Jul 29, 2025, 01:40 PM IST
UPI Payment

ಸಾರಾಂಶ

ಆಗಸ್ಟ್ 1, 2025 ರಿಂದ ಯುಪಿಐ ನಿಯಮಗಳಲ್ಲಿ ಬದಲಾವಣೆಗಳು ಜಾರಿಗೆ ಬರಲಿವೆ. ಬ್ಯಾಲೆನ್ಸ್ ಚೆಕ್ ಮತ್ತು ಆಟೋ ಡೆಬಿಟ್‌ಗಳಿಗೆ ಹೊಸ ಮಿತಿಗಳನ್ನು NPCI ಪರಿಚಯಿಸಿದೆ. ಸರ್ವರ್‌ಗಳ ಮೇಲಿನ ಒತ್ತಡ ಕಡಿಮೆ ಮಾಡುವುದು ಇದರ ಉದ್ದೇಶ.

ಇದೇ ಆಗಸ್ಟ್ 1, 2025ರಿಂದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ನಿಯಮಗಳಲ್ಲಿ ಮಹತ್ವಪೂರ್ಣ ಬದಲಾವಣೆಗಳು ಜಾರಿಗೆ ಬರಲಿವೆ. ಈ ಮಾರ್ಗಸೂಚಿಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜಾರಿಗೆ ತರುತ್ತಿದ್ದು, ಗೂಗಲ್ ಪೇ, ಫೋನ್ ಪೇ, ಪೇಟಿಎಂ ಸೇರಿದಂತೆ ಎಲ್ಲಾ ಪ್ರಮುಖ ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳಿಗೆ ಇದು ಅನ್ವಯವಾಗಲಿದೆ.

ಹೊಸ ನಿಯಮಗಳಂತೆ:

ಪ್ರತಿ ಯುಪಿಐ ಆಪ್‌ನಲ್ಲಿ ದಿನಕ್ಕೆ ಗರಿಷ್ಠ 50 ಬಾರಿ ಮಾತ್ರ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಇದಕ್ಕೂ ಮುನ್ನ ಯಾವುದೇ ಮಿತಿ ಇರಲಿಲ್ಲ.

ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ದಿನಕ್ಕೆ 25 ಬಾರಿ ಮಾತ್ರ ಪಡೆದುಕೊಳ್ಳಲು ಅವಕಾಶವಿರುತ್ತದೆ.

ಈ ನಿಯಮಗಳ ಉದ್ದೇಶ, ಯುಪಿಐ ಸರ್ವರ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಅನಗತ್ಯ API ವಿನಂತಿಗಳನ್ನು ನಿಯಂತ್ರಿಸುವುದಾಗಿದೆ. ಹೆಚ್ಚಿನ ಬಳಕೆದಾರರು ಪದೇಪದೆ ಬ್ಯಾಲೆನ್ಸ್ ಚೆಕ್ ಮಾಡುತ್ತಿದ್ದ ಕಾರಣ ಸರ್ವರ್‌ಗಳು ಹೆಚ್ಚು ಬಿಕ್ಕಟ್ಟಿಗೆ ಒಳಗಾಗುತ್ತಿದ್ದವು.

ಆಟೋ ಡೆಬಿಟ್‌ ನಿಗದಿತ ಸಮಯ

ಆಟೋ ಡೆಬಿಟ್ ಪಾವತಿಗಳು (ಉದಾ: Netflix, Amazon Prime, ಬಿಲ್ ಪಾವತಿ, SIP)

ಈ ಮೂರನೇ ವೇಳಾಪಟ್ಟಿಯ ಪ್ರಕಾರ ನಡೆಯಲಿದೆ:

ಬೆಳಿಗ್ಗೆ 10 ಗಂಟೆಗೆ ಮುಂಚಿತವಾಗಿ

ಮಧ್ಯಾಹ್ನ 1 ಗಂಟೆಯಿಂದ ಸಂಜೆ 5ರ ಒಳಗೆ

ರಾತ್ರಿ 9:30 ಕ್ಕೆ ನಂತರ

ಈ ಕ್ರಮದಿಂದ ಪೀಕ್ ಅವರ್‌ಗಳಲ್ಲಿ UPI ಸರ್ವರ್‌ಗಳ ಮೇಲೆ ಬರುವ ಒತ್ತಡ ಕಡಿಮೆಯಾಗಲಿದೆ.

UPI ವಹಿವಾಟು ಬಾಕಿಯಿದ್ದರೆ:

  • ಅದರ ಸ್ಥಿತಿಯನ್ನು ದಿನಕ್ಕೆ ಕೇವಲ ಮೂರು ಬಾರಿ ಮಾತ್ರ ಪರಿಶೀಲಿಸಲು ಅವಕಾಶವಿದೆ.
  • ಪ್ರತಿಯೊಂದು ಪರಿಶೀಲನೆಯ ನಡುವಿನ ಗ್ಯಾಪ್ ಕನಿಷ್ಠ 90 ಸೆಕೆಂಡು ಇರಬೇಕು.
  • ಈ ನಿಯಮ ಬಳಕೆದಾರರಿಗೆ ಸ್ವಲ್ಪ ಅಸೌಕರ್ಯ ಉಂಟುಮಾಡಬಹುದು, ಆದರೆ ದೀರ್ಘಾವಧಿಯಲ್ಲಿ ಇದು ಸರ್ವರ್ ಸ್ಥಿರತೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ.

ಈ ಕ್ರಮಗಳ ಹಿಂದಿನ ಕಾರಣವೇನು?

2025ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ, ಯುಪಿಐ ಸರ್ವರ್‌ಗಳು ಹಲವು ಬಾರಿ ಡೌನ್ ಆಗಿದ್ದವು. ಸುಮಾರು 1600 ಕೋಟಿ ಯುಪಿಐ ವಹಿವಾಟುಗಳು ಪ್ರತಿಮಾಸ ನಡೆಯುತ್ತಿರುವ ಭಾರತದಲ್ಲಿ, ಸರ್ವರ್‌ಗಳ ಮೇಲೆ ಭಾರೀ ಒತ್ತಡ ಉಂಟಾಗಿತ್ತು.

 ಇದಕ್ಕೆ ಮುಖ್ಯ ಕಾರಣ:

  • ಅನಗತ್ಯ API ಕ್ವೆರಿಗಳು
  • ಪದೇಪದೆ ಬ್ಯಾಲೆನ್ಸ್ ಮತ್ತು ವಹಿವಾಟು ಸ್ಥಿತಿ ಪರಿಶೀಲನೆಗಳು
  • NPCI ಇದರ ತೀವ್ರತೆ ಗಮನಿಸಿ, ಯುಪಿಐ ಸೇವೆಯನ್ನು ಸ್ಥಿರವಾಗಿ ಮತ್ತು ನಿರಂತರವಾಗಿ ನಡೆಸುವ ಉದ್ದೇಶದಿಂದ ಈ ಹೊಸ ನಿಯಮಗಳನ್ನು ಪರಿಚಯಿಸುತ್ತಿದೆ.

ಬಳಕೆದಾರರಿಗೆ ಸಲಹೆ

ಈ ನಿಯಮಗಳು ದೈನಂದಿನ ಪಾವತಿ ಅಥವಾ ವಹಿವಾಟಿನ ಮೇಲೆ ಪರಿಣಾಮ ಬೀರಲ್ಲ. ಆದರೆ ಅನಗತ್ಯವಾಗಿ ಬ್ಯಾಲೆನ್ಸ್ ಪರಿಶೀಲನೆ ಅಥವಾ ರಿಫ್ರೆಶ್ ಮಾಡುವುದನ್ನು ತಪ್ಪಿಸಲು NPCI ಸೂಚಿಸಿದೆ. ಇದರಿಂದ ಸರ್ವರ್‌ಗಳ ಕಾರ್ಯಕ್ಷಮತೆ ಸುಧಾರಿಸಿ, ಎಲ್ಲರಿಗೂ ಉತ್ತಮ ಅನುಭವವನ್ನು ಒದಗಿಸಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!