New TDS Rule:ಜುಲೈ 1ರಿಂದ ವೈದ್ಯರಿಗೆ ಹೊಸ ಟಿಡಿಎಸ್ ನಿಯಮ; ಫ್ರೀ ಸ್ಯಾಂಪಲ್ ಗೂ ಬೀಳಲಿದೆ ಟ್ಯಾಕ್ಸ್

By Suvarna NewsFirst Published Jun 21, 2022, 9:17 PM IST
Highlights

ಔಷಧಿ ಕಂಪನಿಗಳ ಪ್ರತಿನಿಧಿಗಳಿಂದ ವೈದ್ಯರು ಸ್ವೀಕರಿಸುವ ಉಚಿತ ಔಷಧಿ ಸ್ಯಾಂಪಲ್ ಗಳು,ಉಡುಗೊರೆಗಳು ಇನ್ನು ಮುಂದೆ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ. ಹೌದು, ವೈದ್ಯರು, ಸೋಷಿಯಲ್ ಮೀಡಿಯಾ ಪ್ರಭಾವಿಗಳು ಸ್ವೀಕರಿಸುವ ಉಡುಗೊರೆಗಳ ಮೇಲೆ ಜುಲೈ 1ರಿಂದ ಟಿಡಿಎಸ್ ಅನ್ವಯಿಸಲಿದೆ. 

ನವದೆಹಲಿ (ಜೂ.21): ಭಾರತದಲ್ಲಿ ವೈದ್ಯರು (Doctors) ಹಾಗೂ ಸೋಷಿಯಲ್ ಮೀಡಿಯಾ ಪ್ರಭಾವಿಗಳು (Social Media Influencers) ಮಾರಾಟ (Sale) ಉತ್ತೇಜನಕ್ಕಾಗಿ ಉದ್ಯಮ ಸಂಸ್ಥೆಗಳಿಂದ ಸ್ವೀಕರಿಸುವ ಉಡುಗೊರೆಗಳ ಮೇಲೆ ಜುಲೈ 1ರಿಂದ ಟಿಡಿಎಸ್ (TDS) ಅನ್ವಯಿಸುತ್ತದೆ.  ಹೊಸ ನಿಬಂಧನೆಗಳ ಅನ್ವಯದ ಕುರಿತು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. 

ತೆರಿಗೆ ಆದಾಯದ ಸೋರಿಕೆಯನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಬಜೆಟ್ (Central Budget) ಆದಾಯದ ಮೇಲೆ ಟಿಡಿಎಸ್ (TDS) ಅನ್ವಯವಾಗುವಂತೆ ಮಾಡಲು ಆದಾಯ ತೆರಿಗೆ ಕಾಯ್ದೆ (Icome Tax Act), 1961ಕ್ಕೆ 194R ಎಂಬ ಹೊಸ ಸೆಕ್ಷನ್ ಅನ್ನು ಸೇರ್ಪಡೆಗೊಳಿಸಿದೆ. ಇದರ ಪ್ರಕಾರ ವಾರ್ಷಿಕ 20,000ರೂ.ಗಿಂತ ಹೆಚ್ಚಿನ ಪ್ರಯೋಜನ ಪಡೆಯುವ ಯಾವುದೇ ವ್ಯಕ್ತಿ ಶೇ.10ರಷ್ಟು ಟಿಡಿಎಸ್ (TDS) ಪಾವತಿಸಬೇಕು.

SBI ATM Rules:ಎಸ್ ಬಿಐ ಎಟಿಎಂನಲ್ಲಿ ತಿಂಗಳಿಗೆ ಎಷ್ಟು ಬಾರಿ ಉಚಿತವಾಗಿ ನಗದು ವಿತ್ ಡ್ರಾ ಮಾಡಬಹುದು?

ಯಾವುದಕ್ಕೆ ಅನ್ವಯಿಸುತ್ತದೆ?
ಹಣಕಾಸು ಸಚಿವಾಲಯದ ಜಂಟಿ ಕಾರ್ಯದರ್ಶಿ ಕಮಲೇಶ್ ಸಿ ವರ್ಶಾನೆ (Kamlesh C Varshney) ಪ್ರಯೋಜನಗಳ ಬಗ್ಗೆ ವಿವರಿಸಿದ್ದು, ಅದರಲ್ಲಿ ವೈದ್ಯರು ಔಷಧ ಕಂಪನಿಗಳಿಂದ ಸ್ವೀಕರಿಸುವ ಉಚಿತ ಸ್ಯಾಂಪಲ್ ಗಳು, ವಿದೇಶಯಾನದ ವಿಮಾನ ಟಿಕೆಟ್ ಗಳು ಅಥವಾ ಉಚಿತ ಐಪಿಎಲ್ ಟಿಕೆಟ್ ಗಳು ಇತ್ಯಾದಿ ಸೇರಿವೆ ಎಂದು ತಿಳಿಸಿದ್ದಾರೆ. ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ ಈ ಎಲ್ಲ ಮಾಹಿತಿಗಳನ್ನು ಬಹಿರಂಗಪಡಿಸಬೇಕು. ಸೆಕ್ಷನ್ 194R ಮಾರಾಟಗಾರರು ಡಿಸ್ಕೌಂಟ್ ಅಥವಾ ಗಿಫ್ಟ್ ಗಳ ರೂಪದಲ್ಲಿ ನೀಡುವ ನಗದು ಅಥವಾ ಕಾರು, ಟಿವಿ, ಕಂಪ್ಯೂಟರ್ಸ್ , ಚಿನ್ನದ ನಾಣ್ಯಗಳು ಹಾಗೂ ಮೊಬೈಲ್ ಫೋನ್ ಮುಂತಾದ ವಸ್ತುಗಳಿಗೂ ಅನ್ವಯಿಸುತ್ತದೆ.

ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಅನ್ವಯಿಸುತ್ತಾ?
ಆಸ್ಪತ್ರೆಯಲ್ಲಿ (Hospital) ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಉಚಿತ ಔಷಧ ಸ್ಯಾಂಪಲ್ ಗಳನ್ನು ಸ್ವೀಕರಿಸಿದ್ರೆ,ಆಸ್ಪತ್ರೆಗಳಿಗೆ ಉಚಿತವಾಗಿ ಔಷಧ ಸ್ಯಾಂಪಲ್ ಗಳ (Medicine Samples) ವಿತರಣೆಗೆ ಸೆಕ್ಷನ್ 194R ಅನ್ವಯಿಸುತ್ತದೆ. ಆಸ್ಪತ್ರೆ (hospital) ಇಂಥ ಸ್ಯಾಂಪಲ್ ಗಳನ್ನು  ಉದ್ಯೋಗಿಗಳಿಗೆ ತೆರಿಗೆ ವಿಧಿಸುವಂತಹ ವಸ್ತುವಾಗಿ ಪರಿಗಣಿಸಬೇಕು ಹಾಗೂ ಸೆಕ್ಷನ್ 192 ಅಡಿಯಲ್ಲಿ ತೆರಿಗೆ ಕಡಿತಗೊಳಿಸಬೇಕು. ಇಂಥ ಪ್ರಕರಣಗಳಲ್ಲಿ ಆಸ್ಪತ್ರೆಗೆ ವಾರ್ಷಿಕ ಮಿತಿ 20,000ರೂ. ಇನ್ನು ಆಸ್ಪತ್ರೆಗಳಿಗೆ (Hospitals)  ಸಂದರ್ಶಕರಾಗಿ (Consultant) ಬರುವ ವೈದ್ಯರುಗಳು ಉಚಿತ ಸ್ಯಾಂಪಲ್ ಗಳನ್ನು ಸ್ವೀಕರಿಸಿದ್ರೆ, ಆಸ್ಪತ್ರೆಗಳಿಗೆ ಮೊದಲು ಟಿಡಿಎಸ್ (TDS) ಅಪ್ಲೈ ಆಗುತ್ತದೆ. ಸಂದರ್ಶಕ ವೈದ್ಯರಿಗೆ ಅನ್ವಯಿಸುವಂತೆ ಸೆಕ್ಷನ್ 194R ಅಡಿಯಲ್ಲಿ ತೆರಿಗೆ ಕಡಿತಗೊಳಿಸಬೇಕು. ಇನ್ನು ಸರ್ಕಾರಿ ಆಸ್ಪತ್ರೆಗಳಿಗೆ ಸೆಕ್ಷನ್ 194R ಅನ್ವಯಿಸೋದಿಲ್ಲ ಎಂದು ಸಿಬಿಡಿಟಿ ತಿಳಿಸಿದೆ. 

Earn Money : ವಾಟ್ಸ್ ಆ್ಯಪ್ ಸ್ಟೇಟಸ್ ನೋಡೋ ಬದಲು ಸ್ಟೇಟಸ್ ಹಾಕಿ ,ಹಣ ಗಳಿಸಿ

ದುಪ್ಪಟ್ಟು ಟಿಡಿಎಸ್
ಕಳೆದ 2 ವರ್ಷ​ಗ​ಳಿಂದ ಆದಾಯ ತೆರಿಗೆ ವಿವರ ಸಲ್ಲಿಕೆ ಮಾಡದೇ ಬಾಕಿ ಉಳಿ​ಸಿ​ಕೊಂಡಿ​ದ್ದ​ರೆ  ಜೂ.1ರಿಂದ ದುಪ್ಪಟ್ಟು ಟಿಡಿ​ಎಸ್‌ (TDS) ಕಡಿ​ತ​ಗೊ​ಳ್ಳ​ಲಿ​ದೆ. ಟಿಡಿ​ಎಸ್‌ ಕಡಿ​ತಕ್ಕೆ ಕೇಂದ್ರ ಸರ್ಕಾರ ನೂತನ 206ಎಬಿ ಸೆಕ್ಷನ್‌ ಅನ್ನು ಜಾರಿ ಮಾಡ​ಲಾ​ಗಿ​ದ್ದು, 2 ವರ್ಷ​ದಿಂದ ಐಟಿ​ಆ​ರ್‌ ಸ​ಲ್ಲಿಕೆ ಮಾಡದೇ ಇದ್ದ​ವರಿಗೆ ಜು.1ರಿಂದ ದುಪ್ಪಟ್ಟು  ಟಿಡಿ​ಎ​ಸ್‌ ಅನ್ನು ಕಡಿ​ತ​ಗೊ​ಳಿ​ಸ​ಬೇಕು ಎಂದು ತಿಳಿ​ಸ​ಲಾ​ಗಿದೆ. 50 ಸಾವಿ​ರ​ಕ್ಕಿಂತ ಹೆಚ್ಚು ಟಿಡಿ​ಎಸ್‌ ಕ್ಲೈಮ್‌ಗೆ ಅರ್ಹ​ರಾ​ಗಿ​ರು​ವ​ವರು 2 ವರ್ಷ​ದಿಂದ ಐಟಿ​ಆರ್‌ ಸಲ್ಲಿಕೆ ಮಾಡದೇ ಇದ್ದರೆ ಹೆಚ್ಚಿನ ಟಿಡಿ​ಎಸ್‌ ಕಡಿತ ಆಗ​ಲಿ​ದೆ. ನೂತನ ನಿಯ​ಮದ ಪ್ರಕಾರ, ಉದ್ಯೋಗಿ ಕಳೆದ 2 ವರ್ಷ​ದಿಂದ ಟಿಡಿ​ಎಸ್‌ ಕ್ಲೇಮ್‌ ಮಾಡಿ​ಕೊ​ಳ್ಳದೇ ಇದ್ದರೆ, ಆತ/ ಆಕೆಯ ವೇತ​ನ​ದಿಂದ ದುಪಟ್ಟು ಟಿಡಿ​ಎಸ್‌ ಕಡಿತ ಮಾಡು​ವುದು ಕಂಪ​ನಿ​ಗಳ ಜವಾ​ಬ್ದಾ​ರಿ ಆಗಿದೆ. 

click me!