New Labour Laws:ವಾರದಲ್ಲಿ4 ದಿನ ಕೆಲಸ, ಫೈನಲ್ ಸೆಟ್ಲ್ ಮೆಂಟ್ ಸೇರಿ ಹಲವು ನಿಯಮ ಬದಲಾವಣೆ ಜಾರಿ ವಿಳಂಬ

Published : Jul 11, 2022, 04:52 PM IST
 New Labour Laws:ವಾರದಲ್ಲಿ4 ದಿನ ಕೆಲಸ, ಫೈನಲ್ ಸೆಟ್ಲ್ ಮೆಂಟ್ ಸೇರಿ ಹಲವು ನಿಯಮ ಬದಲಾವಣೆ ಜಾರಿ ವಿಳಂಬ

ಸಾರಾಂಶ

*ಜುಲೈ 1ರಿಂದ ಜಾರಿಯಾಗಬೇಕಿದ್ದ ಹೊಸ ವೇತನ ಸಂಹಿತೆ  *ವಾರದಲ್ಲಿ4 ದಿನ ಕೆಲಸ, 3 ದಿನ ರಜೆ ಸೇರಿದಂತೆ ಪಿಎಫ್, ರಜೆ ವ್ಯವಸ್ಥೆಯಲ್ಲಿ ಬದಲಾವಣೆ *ಕೆಲವು ರಾಜ್ಯಗಳು ಇನ್ನೂ ಕರಡು ಪ್ರತಿ ಸಿದ್ಧಪಡಿಸಿಲ್ಲ

ನವದೆಹಲಿ (ಜು.11): ಉದ್ಯೋಗಿ (employee) ಕೆಲಸ ತೊರೆದ ಬಳಿಕ ಆತನ ಫುಲ್ ಹಾಗೂ ಫೈನಲ್ ಸೆಟ್ಲ್ಮೆಂಟ್  (Full and final settlement) ಪಾವತಿ, ವಾರದಲ್ಲಿ ನಾಲ್ಕು ದಿನ ಕೆಲಸ ಸೇರಿದಂತೆ ಔದ್ಯೋಗಿಕ ಕ್ಷೇತ್ರದಲ್ಲಿ ಹಲವು ಬದಲಾವಣೆಗೆ ಕಾರಣವಾಗಿದ್ದ ಹೊಸ ವೇತನ ಸಂಹಿತೆ (New wage code) ಜಾರಿಯಲ್ಲಿ ವಿಳಂಬವಾಗಿದೆ. ಜು.1ರಿಂದ ಜಾರಿಯಾಗಬೇಕಿದ್ದ ವೇತನ ಸಂಹಿತೆ ಇನ್ನಷ್ಟು ವಿಳಂಬವಾಗಿ ಅನುಷ್ಠಾನಗೊಳ್ಳಲಿದೆ ಎಂದು ಹೇಳಲಾಗಿದೆ. 

ಹೊಸ ವೇತನ ಸಂಹಿತೆ  ಪ್ರಕಾರ ಒಮ್ಮೆ ಉದ್ಯೋಗಿ (employee) ಉದ್ಯೋಗ (Job) ತೊರೆದ ಅಥವಾ  ಸೇವೆಯಿಂದ (Service) ವಜಾಗೊಂಡ ಬಳಿಕ ಕಂಪನಿಯು (Company) ಆತನ ವೇತನದ ಫುಲ್ ಹಾಗೂ ಫೈನಲ್ ಸೆಟ್ಲ್ಮೆಂಟ್ ಪಾವತಿಯನ್ನು ಆತನ ಕೊನೆಯ ಕೆಲಸದ ದಿನದ ಬಳಿಕದ ಎರಡು ದಿನಗಳೊಳಗೆ ಮಾಡಬೇಕು. ಈ ನಿಯಮವು ಜುಲೈ 1ರಿಂದ ಜಾರಿಗೆ ಬರಬೇಕಿತ್ತು, ಆದರೆ ಮುಂದೂಡಲಾಗಿದೆ.

ಬ್ಯಾಂಕ್ ವಂಚನೆ ಆರೋಪಿ ವಿಜಯ್ ಮಲ್ಯಗೆ 4 ತಿಂಗಳ ಜೈಲು , 2 ಸಾವಿರ ರೂ ದಂಡ!

ಪಾವತಿ ಸಂಹಿತೆ ಸೇರಿದಂತೆ ಅನೇಕ ಪರಿಷ್ಕರಣೆಗಳ ಜೊತೆಗೆ ಹೊಸ ನಿಯಮಗಳು ಹಿಂದಿನ 29 ಕಾನೂನುಗಳನ್ನು  ಒಳಗೊಂಡು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರೂಪಿಸಲಾಗಿತ್ತು. ಪ್ರಸ್ತುತ ಕಂಪನಿಗಳು ವೇತನದ ಪೂರ್ಣ ಸೆಟ್ಲಮೆಂಟ್ ಗೆ ಸಾಮಾನ್ಯವಾಗಿ 15 ರಿಂದ 60 ದಿನಗಳನ್ನು ತೆಗೆದುಕೊಳ್ಳುತ್ತವೆ. ಇನ್ನೂ ಕೆಲವು ಸಂದರ್ಭಗಳಲ್ಲಿ 90 ದಿನಗಳನ್ನು ತೆಗೆದುಕೊಳ್ಳುತ್ತವೆ.

ವೇತನ (Wage), ಸಾಮಾಜಿಕ ಭದ್ರತೆ (Social Security), ಉದ್ಯೋಗ ಸುರಕ್ಷತೆ (Job security) ಹಾಗೂ ಆರೋಗ್ಯ (Health)  ಮತ್ತು ಕೆಲಸದ ಪರಿಸ್ಥಿತಿಯ ಆಧಾರದ ಮೇಲೆ 4 ಹೊಸ ಕಾರ್ಮಿಕ ಸಂಹಿತೆಗಳನ್ನು ಜುಲೈ 1ರಿಂದ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿತ್ತು.ವಾರದಲ್ಲಿ 4 ದಿನ ಮಾತ್ರ ಕೆಲಸ, ಮೂರು ದಿನ ರಜೆ, ಪಿಎಫ್ ಗೆ (PF) ಉದ್ಯೋಗಿ ಹಾಗೂ ಉದ್ಯೋಗದಾತರ ಕೊಡುಗೆಯಲ್ಲಿ ಬದಲಾವಣೆ, ಹಿಂದಿನ ವರ್ಷದ ಉಳಿಕೆ ರಜೆಗಳು ಮುಂದಿನ ವರ್ಷಕ್ಕೂ ಮುಂದುವರಿಕೆ ಸೇರಿದಂತೆ ಹಲವು ನಿಯಮಗಳನ್ನು ರೂಪಿಸಲಾಗಿತ್ತು. ಕಾರ್ಮಿಕ ನಿಯಮಗಳ ಅನುಷ್ಠಾನಕ್ಕೆ ಸಂಸತ್ತಿನ ಅನುಮತಿ ಕೂಡ ಸಿಕ್ಕಿತ್ತು. ಅಲ್ಲದೆ, ಜುಲೈ 1ರಿಂದ ಜಾರಿಗೆ ತರಲು ಕೂಡ ಯೋಜಿಸಲಾಗಿತ್ತು. 

ಕಾರ್ಮಿಕ ವಿಚಾರವು ಸಮವರ್ತಿ ಪಟ್ಟಿಯಲ್ಲಿರುವುದರಿಂದ ಈ ಹೊಸ ನಿಯಮಗಳ ಜಾರಿಗೆ ಎಲ್ಲ ರಾಜ್ಯಗಳು (States) ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೂಡ ಕರಡು ನಿಯಮಗಳನ್ನು (Draft rules) ರೂಪಿಸಿ, ಅಧಿಸೂಚನೆ ಹೊರಡಿಸಬೇಕು. ಆದ್ರೆ ಕೆಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಕೆಲಸವನ್ನು ಇನ್ನೂ ಮಾಡಿಲ್ಲ. 

ಟಿಕ್‌ಟಾಕ್‌ನಿಂದ ಫಾಲೋ ಮಿ ಉಚಿತ ಬಿಸಿನೆಸ್ ಟಿಪ್ಸ್ ಪ್ರೋಗ್ರಾಮ್

ರಜೆ ವ್ಯವಸ್ಥೆಯಲ್ಲಿ ಬದಲಾವಣೆ
ಹೊಸ ವೇತನ ಸಂಹಿತೆ ರಜೆಯ ವ್ಯವಸ್ಥೆಯಲ್ಲೂ ಭಾರೀ ಬದಲಾವಣೆಗಳನ್ನು ಮಾಡಲಿದ್ದು,1 ವರ್ಷದಲ್ಲಿ ಸರ್ಕಾರಿ ಇಲಾಖೆಗಳಿಗೆ 30 ದಿನಗಳ ರಜೆ ಸಿಗಲಿದೆ. ರಕ್ಷಣಾ ಸಿಬ್ಬಂದಿಗೆ 60 ದಿನಗಳ ರಜೆ ಸಿಗಲಿದೆ. ಕ್ಯಾರಿ ಫಾರ್ವರ್ಡ್‌ ಮಾದರಿಯಲ್ಲಿ ಉದ್ಯೋಗಿಗಳು 300 ಗಳಿಕೆ ರಜೆಯನ್ನು ನಗದು ಮಾಡಿಸಿಕೊಳ್ಳಬಹುದಾಗಿದೆ. ಪ್ರಸ್ತುತ ವಿವಿಧ ಸರ್ಕಾರಿ ವಿಭಾಗಗಳಿಗೆ 240 ರಿಂದ 300 ಗಳಿಕೆ ರಜೆಗಳು ನೀಡಲಾಗುತ್ತದೆ. 20 ವರ್ಷಗಳ ಸೇವೆಯ ಬಳಿಕ ಉದ್ಯೋಗಿಗಳು ಗಳಿಕೆ ರಜೆಯನ್ನು ನಗದಾಗಿ ಪರಿವರ್ತಿಸಬಹುದಾಗಿದೆ.

ಹೊಸ ವೇತನ ಸಂಹಿತೆಗೆ ಸಂಬಂಧಿಸಿ 2021ರ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರವು ಕರಡು ನಿಯಮಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ  ಪೂರ್ಣಗೊಳಿಸಿದೆ. ಕೇಂದ್ರ ಸರ್ಕಾರವು ಸೆ.29, 2020ರಂದು ವೇತನದ ಸಂಹಿತೆ (2019), ಕೈಗಾರಿಕಾ ಸಂಬಂಧಗಳ ಸಂಹಿತೆ (2020), ಸಾಮಾಜಿಕ ಭದ್ರತೆ ಸಂಹಿತೆ (2020) ಹಾಗೂ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂಹಿತೆ (2020) ಅನ್ನು ಪ್ರಕಟಿಸಿತ್ತು.

ಹೊಸ ವೇತನ ಸಂಹಿತೆ ಅನುಷ್ಠಾನಗೊಂಡ ಬಳಿಕ ಕಂಪನಿಗಳು ತಮ್ಮ ವೇತನ ಪಾವತಿ ಪ್ರಕ್ರಿಯೆಯಲ್ಲಿ ಹಾಗೂ ಕೆಲಸದ ಅವಧಿಗೆ ಸಂಬಂಧಿಸಿ ಬದಲಾವಣೆ ಮಾಡಬೇಕಾದ ಅಗತ್ಯವಿದೆ. ಅದರಲ್ಲೂ ಉದ್ಯೋಗಿ ರಾಜೀನಾಮೆ ಅಥವಾ ಸೇವೆಯಿಂದ ವಜಾಗೊಂಡ ಬಳಿಕ ಆತನ ಕೊನೆಯ ಕೆಲಸದ ದಿನದ ನಂತರದ ಎರಡು ದಿನಗಳೊಳಗೆ ಫುಲ್ ಹಾಗೂ ಫೈನಲ್ ಸೆಟ್ಲಮೆಂಟ್ ಪಾವತಿಸಬೇಕು. ಹೀಗಾಗಿ ಉದ್ಯೋಗಿಗಳ ನಿರ್ವಹಣೆಗೆ ಸಂಬಂಧಿಸಿ ಕಂಪನಿಗಳ ನಿಯಮಗಳು ಬದಲಾಗಲಿವೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ