ಹೊಸ ಹಣಕಾಸು ವರ್ಷ ನಾಳೆಯಿಂದ ಶುರುವಾಗ್ತಿದೆ. ಇದ್ರ ಜೊತೆ ಅನೇಕ ಸೇವೆಯಲ್ಲಿ ಬದಲಾವಣೆಯಾಗ್ತಿದೆ. ರುಪೇ ಕಾರ್ಡ್ ನಲ್ಲೂ ಕೆಲ ಬದಲಾವಣೆಯಾಗಿದ್ದು, ಅದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಏಪ್ರಿಲ್ ಒಂದರಿಂದ ಅನೇಕ ನಿಯಮಗಳು ಬದಲಾಗ್ತಿವೆ. ರಾಷ್ಟ್ರೀಯ ಪಾವತಿ ನಿಗಮ (NPCI) ಡೆಬಿಟ್ ಕಾರ್ಡ್ (Debit card) ನಿಯಮಗಳಲ್ಲೂ ಕೆಲವು ಪ್ರಮುಖ ಬದಲಾವಣೆ ಆಗ್ತಿದೆ. ರುಪೇ ಸೆಲೆಕ್ಟ್ ಡೆಬಿಟ್ ಕಾರ್ಡ್ (RuPay Select Debit Card) ಹೊಂದಿರುವವರು ಏಪ್ರಿಲ್ 1 ರಿಂದ ಹಲವು ಹೊಸ ಸೌಲಭ್ಯಗಳನ್ನು ಪಡೆಯಲಿದ್ದಾರೆ.
ರುಪೇ ಕಾರ್ಡ್ ಎಂದರೇನು? : ರುಪೇ ಸೆಲೆಕ್ಟ್ ಡೆಬಿಟ್ ಕಾರ್ಡ್ ಫಿಟ್‌ನೆಸ್, ಆರೋಗ್ಯ, ಪ್ರಯಾಣ ಮತ್ತು ಮನರಂಜನೆ ಸೇರಿದಂತೆ ಆಧುನಿಕ ಜೀವನಶೈಲಿಯ ಅಗತ್ಯಗಳನ್ನು ಪೂರೈಸುತ್ತದೆ. ಏಪ್ರಿಲ್ ಒಂದರಿಂದ ರುಪೇ ಸೆಲೆಕ್ಟ್ ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಹೆಚ್ಚುವರಿ ಸೌಲಭ್ಯ ಸಿಗಲಿದೆ. ಕಾರ್ಡ್ ಸೌಲಭ್ಯದ ನವೀಕರಣದ ಬಗ್ಗೆ ಎನ್‌ಪಿಸಿಐ ಕೆಲ ದಿನಗಳ ಹಿಂದೆಯೇ ಸುತ್ತೋಲೆ ಹೊರಡಿಸಿದೆ. ನೀವೂ ರುಪೇ ಸೆಲೆಕ್ಟ್ ಡೆಬಿಟ್ ಕಾರ್ಡ್ ಬಳಸ್ತಿದ್ರೆ ನಾಳೆಯಿಂದ ಈ ಕಾರ್ಡ್ ಮತ್ತಷ್ಟು ನೆರವಿಗೆ ಬರಲಿದೆ.
ಸುಕನ್ಯ ಸಮೃದ್ಧಿ to ಪಿಪಿಎಫ್; ಏಪ್ರಿಲ್ 1ರಿಂದ ಪೋಸ್ಟ್ ಆಫೀಸ್ 11 ಉಳಿತಾಯ ಯೋಜನೆ ಬಡ್ಡಿ
ರುಪೇ ಸೆಲೆಕ್ಟ್ ಡೆಬಿಟ್ ಕಾರ್ಡ್‌ನ ಹೊಸ ಸೌಲಭ್ಯ :
ವಿಮಾ ರಕ್ಷಣೆ : ರುಪೇ ಸೆಲೆಕ್ಟ್ ಡೆಬಿಟ್ ಕಾರ್ಡ್ ಹೊಂದಿರುವವರು 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಅಪಘಾತ ವಿಮಾ ಪ್ರಯೋಜನ ಪಡೆಯಲಿದ್ದಾರೆ. ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯದ ಸಂದರ್ಭದಲ್ಲಿ 10 ಲಕ್ಷ ರೂಪಾಯಿಗಳವರೆಗೆ ವಿಮೆ ರಕ್ಷಣೆ ನೀಡುತ್ತದೆ. ಷರತ್ತು ಅನ್ವಯವಾಗುತ್ತದೆ. ನಿಯಮದ ಪ್ರಕಾರ, ಕಾರ್ಡ್ ಹೊಂದಿರುವವರು ಅಪಘಾತ ಸಂಭವಿಸುವ 30 ದಿನಗಳ ಮೊದಲು ಕನಿಷ್ಠ ಒಂದು ರುಪೇ ವಹಿವಾಟು ಮಾಡಿರಬೇಕು.
ವಿಮಾನ ನಿಲ್ದಾಣದ ಲೌಂಜ್ ಪ್ರವೇಶ : ರುಪೇ ಸೆಲೆಕ್ಟ್ ಡೆಬಿಟ್ ಕಾರ್ಡ್ ಹೊಂದಿರುವವರು ಪ್ರತಿ ಮೂರು ತಿಂಗಳಿಗೊಮ್ಮೆ ದೇಶೀಯ ವಿಮಾನ ನಿಲ್ದಾಣದ ಲೌಂಜ್ ಗೆ ಎಂಟ್ರಿ ಪಡೆಯಬಹುದು. ವರ್ಷಕ್ಕೆ ಎರಡು ಬಾರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಗೆ ಪ್ರವೇಶ ಪಡೆಯಬಹುದು.
ಜಿಮ್ ಸದಸ್ಯತ್ವ : ಪ್ರತಿ ಮೂರು ತಿಂಗಳಿಗೊಮ್ಮೆ ಉಚಿತ ಜಿಮ್ ಸದಸ್ಯತ್ವ ಸಿಗಲಿದೆ. ಕಾರ್ಡ್ ಹೊಂದಿರುವವರು 30 ದಿನಗಳವರೆಗೆ ಆಫ್‌ಲೈನ್ ಜಿಮ್ ಸೆಷನ್ ಅಥವಾ ಮನೆಯಲ್ಲಿಯೇ ವ್ಯಾಯಾಮದ ಸೌಲಭ್ಯ ಪಡೆಯಬಹುದು.
ಸ್ಪಾ, ಸಲೂನ್ ಮತ್ತು ಕ್ಯಾಬ್ ಕೂಪನ್ : ಮೂರು ತಿಂಗಳಿಗೊಮ್ಮೆ ಉಚಿತ ಸ್ಪಾ ಸೆಷನ್ ಅಥವಾ ಸಲೂನ್ ಸೇವೆ ಲಭ್ಯವಾಗಲಿದೆ. ಕಾರ್ಡ್ ಹೊಂದಿರುವವರು ಪ್ರತಿ ತ್ರೈಮಾಸಿಕದಲ್ಲಿ 100 ರೂಪಾಯಿಗಳ ಕ್ಯಾಬ್ ಸೇವಾ ಕೂಪನ್ ಪಡೆಯುತ್ತಾರೆ.
EPFO ಮಹತ್ವದ ಅಪ್‌ಡೇಟ್: ಪಿಎಫ್ ಹಣ ಇನ್ನು ಕೇವಲ 3 ದಿನಗಳಲ್ಲಿ ವಿತ್‌ಡ್ರಾ! ಮತ್ತಷ್ಟು
ಆರೋಗ್ಯ ತಪಾಸಣೆ : ಈ ಕಾರ್ಡ್ ಹೊಂದಿರುವವರು ಪ್ರತಿ ಮೂರು ತಿಂಗಳಿಗೊಮ್ಮೆ ಉಚಿತ ಆರೋಗ್ಯ ತಪಾಸಣೆ ಪ್ಯಾಕೇಜ್ ಪಡೆಯುತ್ತಾರೆ. ಗಾಲ್ಫ್ ಉತ್ಸಾಹಿಗಳಿಗೆ ಪ್ರತಿ ತ್ರೈಮಾಸಿಕಕ್ಕೊಮ್ಮೆ ಉಚಿತವಾಗಿ ಗಾಲ್ಫ್ ಕಲಿಯುವ ಅಥವಾ ಒಂದು ಸುತ್ತು ಆಟ ಆಡುವ ಅವಕಾಶ ಸಿಗಲಿದೆ.
ಒಟಿಟಿ ಚಂದಾದಾರಿಕೆ : ಕಾರ್ಡ್ ಹೊಂದಿರುವವರಿಗೆ ಪ್ರತಿ ವರ್ಷ Amazon Prime, Hotstar ಅಥವಾ Sony Liv ನ 1 ವರ್ಷದ ಉಚಿತ ಚಂದಾದಾರಿಕೆ ಸಿಗಲಿದೆ.
ರುಪೇ ಕಾರ್ಡ್ ಗೆ ಎಷ್ಟು ಪಾವತಿ ಮಾಡಬೇಕು? : ರುಪೇ ಸೆಲೆಕ್ಟ್ ಡೆಬಿಟ್ ಕಾರ್ಡ್‌ಗೆ ವಾರ್ಷಿಕ ಶುಲ್ಕ 2,500 ರೂಪಾಯಿ. ಸಕ್ರಿಯ ಕಾರ್ಡ್‌ಗಳ ಸಂಖ್ಯೆಯನ್ನು ಆಧರಿಸಿ ಬ್ಯಾಂಕ್ ಪ್ರತಿ ತ್ರೈಮಾಸಿಕದಲ್ಲಿ ಈ ಶುಲ್ಕವನ್ನು ವಿಧಿಸುತ್ತದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ರುಪೇ ಡೆಬಿಟ್ ಸೆಲೆಕ್ಟ್ ಪ್ರಾರಂಭಿಸಿದೆ. https://www.rupay.co.in/our-cards/rupay-debit/rupay-select ಕಾರ್ಡ್ ಹೊಂದಿರುವವರು ಈ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ತಮ್ಮ ಹೆಚ್ಚಿನ ಲಾಭ ಪಡೆಯಬಹುದು.