ಮನೆಯಲ್ಲೇ ಕುಳಿತು ಸಣ್ಣ ಬ್ಯುಸಿನೆಸ್ ಶುರು ಮಾಡಿ ಲಕ್ಷಾಂತರ ರೂಪಾಯಿ ಗಳಿಸ್ಬೇಕು ಎನ್ನುವವರಿಗೆ ಇಲ್ಲೊಂದು ಐಡಿಯಾ ಇದೆ. ನೀವು ಕಡಿಮೆ ಖರ್ಚಿನಲ್ಲಿ ಈ ಬ್ಯುಸಿನೆಸ್ ಶುರು ಮಾಡ್ಬಹುದು. ಆನ್ಲೈನ್ ನಲ್ಲಿ ಮಾರಾಟ ಮಾಡಿ ಹಣ ಸಂಪಾದನೆ ಮಾಡ್ಬಹುದು.
ದುಬಾರಿ ದುನಿಯಾದಲ್ಲಿ ಜೀವನ ನಡೆಸೋದು ಸುಲಭ ಅಲ್ಲ. ಒಂದು ಮೂಲದಿಂದ ನೀವು ಗಳಿಕೆ ಮಾಡ್ತಿದ್ದರೆ ಜೀವನ ನಿರ್ವಹಣೆ ಕಷ್ಟವಾಗ್ಬಹುದು. ಅನೇಕರು ಕೆಲಸದ ಜೊತೆ ತಮ್ಮದೇ ಸ್ವಂತ ವ್ಯವಹಾರ ಶುರು ಮಾಡುವ ಆಲೋಚನೆ ಮಾಡ್ತಿರುತ್ತಾರೆ. ಯಾವುದೇ ಕೆಲಸ ಇಲ್ಲ ಎನ್ನುವವರಿಂದ ಹಿಡಿದು ಪಾರ್ಟ್ ಟೈಂ ಬ್ಯುಸಿನೆಸ್ (business) ಬೇಕು ಎನ್ನುವವರು ಕೂಡ ಈ ವ್ಯವಹಾರಕ್ಕೆ ಕೈ ಹಾಕಬಹುದು. ಅತ್ಯಂತ ಕಡಿಮೆ ಖರ್ಚಿನಲ್ಲಿ ಈ ಬ್ಯುಸಿನೆಸ್ ಶುರು ಮಾಡಿ, ಲಕ್ಷಾಂತರ ರೂಪಾಯಿಯನ್ನು ಮನೆಯಲ್ಲೇ ಗಳಿಸಬಹುದು. ನಾವು ಈಗ ಹೇಳ್ತಿರೋದು ಬೇವಿನ ಎಲೆ ಪೌಡರ್ (neem leaf powder) ಬ್ಯುಸಿನೆಸ್.
ನೂರಾರು ವರ್ಷಗಳಿಂದ ಸಾಂಪ್ರದಾಯಿಕ ಔಷಧದಲ್ಲಿ ಬೇವಿನ ಎಲೆಗಳನ್ನು ಬಳಸಲಾಗುತ್ತಿದೆ. ಬೇವು ಕಹಿ ಇದ್ರೂ ನಿಮ್ಮ ಜೀವನವನ್ನು ಸಿಹಿ ಮಾಡುವ ಗುಣ ಹೊಂದಿದೆ. ಬೇವಿನ ಸೊಪ್ಪು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ. ಆಯುರ್ವೇದದಲ್ಲಿ ಬೇವಿಗೆ ಮಹತ್ವದ ಸ್ಥಾನವಿದೆ. ಬೇವಿನ ಸೇವನೆಯಿಂದ ಚರ್ಮ, ಕಣ್ಣು, ಹಲ್ಲಿಗೆ ವರದಾನವಾಗಿದೆ. ಎಲ್ಲ ಕಡೆ ಈ ಬೇವಿನ ಸೊಪ್ಪು, ಬೇವಿನ ತೊಗಟೆ ಲಭ್ಯವಿಲ್ಲ. ಹಾಗೆ ಪ್ರತಿ ದಿನ ಬೇವಿನ ಸೊಪ್ಪು ಅನೇಕರಿಗೆ ಸಿಗೋದಿಲ್ಲ. ಹಾಗಾಗಿ ಜನರು ಬೇವಿನ ಸೊಪ್ಪಿನ ಪೌಡರ್ ಬಳಕೆ ಮಾಡ್ತಾರೆ. ನೀವು ಇದನ್ನೇ ಬಂಡವಾಳ ಮಾಡಿಕೊಂಡು ಬ್ಯುಸಿನೆಸ್ ಗೆ ಧುಮುಕಬಹುದು. ಬೇವಿನ ಪೌಡರ್ ಮಾಡಿ ಮಾರಾಟ ಮಾಡಬಹುದು.
ಬೇವಿನ ಸೊಪ್ಪಿನ ಪೌಡರ್ ಮಾಡೋದು ಸುಲಭ. ಮನೆಯಲ್ಲೇ ಕುಳಿತು ನೀವು ಈ ವ್ಯವಹಾರವನ್ನು ಶುರು ಮಾಡ್ಬಹುದು. ಆನ್ಲೈನ್ ನಲ್ಲಿ ಬೇವಿನ ಸೊಪ್ಪಿನ ಪೌಡರ್ ಮಾರಾಟ ಮಾಡಿ, ಬಂಡವಾಳಕ್ಕಿಂತ ನಾಲ್ಕು ಪಟ್ಟು ಹೆಚ್ಚು ಆದಾಯ ಗಳಿಸಬಹುದು. ಬೇವಿನ ಪೌಡರ್ ಮಾರಾಟ ಮಾಡೋಕೆ ನಿಮಗೆ ಹೆಚ್ಚಿನ ಖರ್ಚು ಬರೋದಿಲ್ಲ.
ಯಾವೆಲ್ಲ ಬ್ಯುಸಿನೆಸ್ ಗೆ ಸಿಗುತ್ತೆ ಮುದ್ರಾ ಯೋಜನೆ ಅಡಿ ಸಾಲ?
ಬೇವಿನ ಸೊಪ್ಪಿನ ಪೌಡರ್ ಮಾಡುವ ವಿಧಾನ : ಮೊದಲು ಪೌಡರ್ ಮಾಡೋದು ಹೇಗೆ ಎಂಬುದನ್ನು ತಿಳಿಯೋಣ. ನಿಮ್ಮ ಮನೆಯ ಸುತ್ತ ಮುತ್ತ ಬೇವಿನ ಗಿಡವನ್ನು ನೋಡಿರ್ತಿರಿ. ಕಾಡಿನಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಮೊದಲು ಬೇವಿನ ಎಲೆಗಳನ್ನು ಕೀಳಬೇಕು. ಅದನ್ನು ಸ್ವಚ್ಛವಾಗಿ ತೊಳೆದು, ಬಿಸಿಲಿನಲ್ಲಿ ಒಣಗಿಸಬೇಕು. ನಾಲ್ಕೈದು ಬಿಸಿಲಿಗೆ ಇದು ಒಣಗುತ್ತಿದ್ದಂತೆ ಗರಿಗರಿಯಾಗುತ್ತೆ. ಅದನ್ನು ಮಿಕ್ಸಿಗೆ ಹಾಕಿ, ಪುಡಿ ಮಾಡಿ, ಗಾಳಿಯಾಡದ ಬಾಟಲಿ ಅಥವಾ ಕವರ್ ಗೆ ಹಾಕಿ ಪ್ಯಾಕ್ ಮಾಡಬೇಕು.
ಗಳಿಕೆ ಎಷ್ಟು? : ಇ ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಬೇವಿನ 100 ಗ್ರಾಂ ಪೌಡರ್ ಬೆಲೆ 150 ರೂಪಾಯಿ. ಒಂದು ಕೆಜಿ ಬೇವಿನ ಪೌಡರ್ 1500 ರೂಪಾಯಿಗೆ ಮಾರಾಟ ಆಗ್ತಿದೆ. ನೀವು ದೊಡ್ಡ ಪ್ರಮಾಣದಲ್ಲಿ ಈ ಬ್ಯುಸಿನೆಸ್ ಶುರು ಮಾಡೋದಾದ್ರೆ ಎಲೆಗಳನ್ನು ಒಣಗಿಸಲು ಹಾಗೂ ಪುಡಿ ಮಾಡಿ, ಪ್ಯಾಕಿಂಗ್ ಮಾಡಲು ಮಶಿನ್ ಸಹಾಯ ಪಡೆಯಬಹುದು. ಮಶಿನ್ ಖರೀದಿಗೆ ಸ್ವಲ್ಪ ಹಣ ಖರ್ಚು ಮಾಡ್ಬೇಕಾಗುತ್ತದೆ. ಮನೆಯಲ್ಲೇ ಸಣ್ಣ ಪ್ರಮಾಣದಲ್ಲಿ ಬೇವಿನ ಪೌಡರ್ ಮಾರಾಟ ಮಾಡ್ತೀರಿ ಎಂದಾದ್ರೆ ನೀವು ಯಂತ್ರಗಳ ಸಹಾಯವಿಲ್ಲದೆ ಕೆಲಸ ಶುರು ಮಾಡಿ. ಒಳ್ಳೆ ಗುಣಮಟ್ಟದ ಬೇವಿನ ಪೌಡರ್ ಗೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆ ಹೆಚ್ಚಾಗ್ತಿದ್ದಂತೆ ನೀವು ಯಂತ್ರಗಳನ್ನು ಖರೀದಿ ಮಾಡ್ಬಹುದು.
ಎಟಿಎಂನಿಂದ ಸಂಪಾದನೆ ಹೇಗೆ? ಈ ಎಲ್ಲ ವ್ಯವಹಾರದಿಂದ ಮಾಲೀಕರಿಗೆ
ಬೇವಿನ ಪೌಡರ್ ಸಾಕಷ್ಟು ಪ್ರಯೋಜನ ಹೊಂದಿದೆ. ಇದು ಮೊಡವೆಯನ್ನು ಕಡಿಮೆ ಮಾಡುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ತಲೆ ಹೊಟ್ಟು ನಿವಾರಣೆ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿರುವ ವಿಷವನ್ನು ತೆಗೆದು ಹಾಕುತ್ತದೆ. ಬಾಯಿಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾದಿಂದ ಮುಕ್ತಿ ನೀಡುತ್ತದೆ.