ಸಿಂಗಾಪುರ ಜನರಿಗಾಗಿ ಬೇಲಿ ಹಾರಲಿದೆ ನಂದಿನಿ ಸ್ವೀಟ್ಸ್!

Published : Aug 19, 2018, 03:53 PM ISTUpdated : Sep 09, 2018, 09:30 PM IST
ಸಿಂಗಾಪುರ ಜನರಿಗಾಗಿ ಬೇಲಿ ಹಾರಲಿದೆ ನಂದಿನಿ ಸ್ವೀಟ್ಸ್!

ಸಾರಾಂಶ

ಶೀಘ್ರದಲ್ಲೇ ಸಿಂಗಾಪುರಕ್ಕೆ ನಂದಿನಿ ಸ್ವೀಟ್ಸ್! ವಿಶ್ವ ಮಾರುಕಟ್ಟೆಯಲ್ಲಿ ರಾರಾಜಿಸಲು ಸಜ್ಜು! ವಿದೇಶಿ ನೆಲದಲ್ಲಿ ನಂದಿನಿ ಸ್ವೀಟ್ಸ್ ಮಾರಾಟ! ಕೆಎಂಎಫ್ ನಿರ್ದೇಶಕ ರಾಕೇಶ್ ಶರ್ಮಾ ಮಾಹಿತಿ 

ಬೆಂಗಳೂರು(ಆ.19): ನಂದಿನಿ ಸಿಹಿ ತಿನಿಸುಗಳೆಂದರೆ ಅಬಾಲವೃದ್ಧರಾದಿಯಾಗಿ ಎಲ್ಲರ ಬಾಯಲ್ಲೂ ನೀರೂರುತ್ತೆ. ಕರ್ನಾಟಕದ ಹೆಮ್ಮೆ ಎನಿಸಿಕೊಂಡಿರುವ ನಂದಿನಿ, ಇದೀಗ ವಿಶ್ವ ಮಾರುಕಟ್ಟೆಯಲ್ಲಿ ರಾರಾಜಿಸಲು ಸಜ್ಜಾಗಿದೆ. 

ಹೌದು, ಇನ್ನು ಮುಂದೆ ವಿದೇಶದಲ್ಲಿಯೂ ನಂದಿನಿ ಸ್ವೀಟ್ಸ್  ರುಚಿಯನ್ನು ಆಸ್ವಾದಿಸಬಹುದಾಗಿದೆ. ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ನಂದಿನಿ ಸ್ವೀಟ್ಸ್ ಮಾರಾಟ ಆರಂಭಿಸಲಾಗುತ್ತಿದೆ.

ಶೀಘ್ರದಲ್ಲೇ ಒಂದು ಟನ್ ಸ್ವೀಟ್ಸ್ ಬಾಕ್ಸ್ ಕರ್ನಾಟಕ ಹಾಲು ಒಕ್ಕೂಟ ಮಹಾ ಮಂಡಳದಿಂದ ಸಿಂಗಾಪುರಕ್ಕೆ ರವಾನೆಯಾಗುತ್ತಿದೆ. ಇದು ಕೆಎಂಎಫ್ ತೆಗೆದುಕೊಂಡಿರುವ ಮಹತ್ವದ ನಿರ್ಧಾರವಾಗಿದೆ.  ಮೈಸೂರು ಪಾಕ್, ಮಿಲ್ಕ್ ಪೇಡಾ, ಕ್ಯಾಶ್ಯೂ ಬರ್ಫಿ,  ಕುಂದಾ, ಧಾರವಾಡ ಪೇಡಾ ಮತ್ತು ಕುಕ್ಕೀಸ್ ಗಳನ್ನು ಕಳುಹಿಸಲಾಗುತ್ತದೆ.

ಅರಬ್ ಏಷ್ಯಾ ಸಿಂಗಾಪೂರ್ ಪ್ರೈವೇಟ್ ಲಿಮಿಟೆಡ್  ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಸಿಂಗಾಪುರನಲ್ಲಿ ನಂದಿನಿ ಸ್ವೀಟ್ಸ್ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಕೆಎಂಎಫ್ ನಿರ್ದೇಶಕ ರಾಕೇಶ್ ಶರ್ಮಾ ಹೇಳಿದ್ದಾರೆ.

ಸಿಂಗಾಪುರನಿಂದ ಪ್ರತಿವಾರ ಒಂದೂವರೆ ಟನ್ ಸ್ಟೀಟ್ ಗೆ ಬೇಡಿಕೆಯಿದೆ. ಅದರಂತೆ ಮುಂದಿನ ದಿನಗಳಲ್ಲಿ ಕತಾರ್, ಹಾಗೂ ಮಧ್ಯ ಏಷ್ಯಾ ದೇಶಗಳಿಗೆ ಕೂಡ ನಂದಿನಿ ಸ್ವೀಟ್ಸ್ ಗಳನ್ನು ರಫ್ತು ಮಾಡಲಾಗುತ್ತದೆ. ಏರ್ ಇಂಡಿಯಾ ಕಾರ್ಗೋ ವಿಮಾನದ ಮೂಲಕ ಈ ಸ್ವೀಟ್ಸ್ ಗಳನ್ನು ಸಿಂಗಾಪುರಕ್ಕೆ ಕಳುಹಿಸಲಾಗುವುದು ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಸೊಂಟಕ್ಕಿಂತ ಕೆಳಗೆ ಮಹಿಳೆಯರು ಚಿನ್ನ ಧರಿಸಬಾರದು ಅಂತಾ ಹೇಳೋದು ಯಾಕೆ? ಶೇ. 99ರಷ್ಟು ಜನರಿಗೆ ಇದು ಗೊತ್ತಿಲ್ಲ!
ವಯಸ್ಸಾಯ್ತು ಅಂತ ಮಂಡೆ ಬಿಸಿ ಬೇಡ… ಇವರೆಲ್ಲಾ ಜನಪ್ರಿಯತೆ ಪಡೆದದ್ದು 30+ ಆದ್ಮೇಲೇ