ಮೋದಿ ಹೇಳಿದ್ರಾ?: ಪಾಕ್‌ಗೆ ಸಾಲ ಕೊಡಲ್ಲ ಅಂತಿದೆ ಚೀನಾ!

Published : Aug 19, 2018, 03:28 PM ISTUpdated : Sep 09, 2018, 09:47 PM IST
ಮೋದಿ ಹೇಳಿದ್ರಾ?: ಪಾಕ್‌ಗೆ ಸಾಲ ಕೊಡಲ್ಲ ಅಂತಿದೆ ಚೀನಾ!

ಸಾರಾಂಶ

ಪಾಕಿಸ್ತಾನಕ್ಕೆ ಸಾಲ ಕೊಡಲು ಚೀನಾ ಬ್ಯಾಂಕ್ ನಕಾರ! ಆರ್ಥಿಕವಾಗಿ ದಿವಾಳಿಯತ್ತ ಸಾಗುತ್ತಿರುವ ಪಾಕಿಸ್ತಾನ! ಪಾಕ್ ಕರೆನ್ಸಿ ಮೌಲ್ಯ ಕುಸಿತವೇ ಸಾಲ ನಕಾರಕ್ಕೆ ಕಾರಣ!ಐಎಂಎಫ್ ಪಾಕ್‌ಗೆ ಸಾಲ ಕೊಡಲು ಅಮೆರಿಕ ವಿರೋಧ! ಚೀನಾ ಸಾಲ ತೀರಿಸಲು ಐಎಂಎಫ್ ಹಣ ಬಳಕೆ ಸಾಧ್ಯತೆ

ಹಾಂಕಾಂಗ್(ಆ.19): ಪಾಕಿಸ್ತಾನಕ್ಕೆ ಸಾಲ ಕೊಡಲು ಚೀನಾದ ಬ್ಯಾಂಕ್‌ಗಳು ಭಯಪಡುತ್ತಿವೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಕುಸಿಯುತ್ತಿರುವ ಪಾಕಿಸ್ತಾನ ಕರೆನ್ಸಿ ಮೌಲ್ಯವೇ ಕಾರಣ ಎನ್ನಲಾಗಿದೆ.

ಆರ್ಥಿಕವಾಗಿ ದಿವಾಳಿಯಾಗುವ ಹಂತಕ್ಕೆ ತಲುಪಿರುವ ಪಾಕಿಸ್ತಾನಕ್ಕೆ, ಐಎಂಎಫ್‌ ನೆರವು ಕೊಡುವುದನ್ನು ಅಮೆರಿಕ ಬಲವಾಗಿ ವಿರೋಧಿಸುತ್ತಿದೆ. ಮತ್ತೊಂದು ಕಡೆ ಪಾಕ್‌ ಕರೆನ್ಸಿಯ ಮೌಲ್ಯ ಕುಸಿಯುತ್ತಿದೆ. ಹೀಗಾಗಿ ಪಾಕ್‌ಗೆ ಸಾಲ ಕೊಡಲು ಚೀನಿ ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿವೆ. 

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಸಲುವಾಗಿ ಚೀನಾದ ಬ್ಯಾಂಕ್‌ಗಳು ಪಾಕಿಸ್ತಾನಕ್ಕೆ ಈಗಾಗಲೇ ಹತ್ತಾರು ಶತಕೋಟಿ ಡಾಲರ್‌ ಸಾಲವನ್ನು ಕೊಟ್ಟಿವೆ. ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ ತೀವ್ರವಾಗಿ ಕುಸಿದಿದ್ದು, ಐಎಂಎಫ್‌ ಹಾಗೂ ಸೌದಿ ಅರೇಬಿಯಾದಿಂದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದೆ. ಕೇವಲ 2 ತಿಂಗಳಿನ ಆಮದಿಗೆ ಸಾಕಾಗುವಷ್ಟು ವಿದೇಶಿ ವಿನಿಮಯ ಸಂಗ್ರಹವನ್ನು ಪಾಕಿಸ್ತಾನ ಹೊಂದಿದೆ. 

ಐಎಂಎಫ್‌ ಒಂದು ವೇಳೆ ಪಾಕಿಸ್ತಾನಕ್ಕೆ ಆರ್ಥಿಕ ನೆರವನ್ನು ಕೊಡಲು ಒಪ್ಪಿದರೆ, ಪಾಕಿಸ್ತಾನ ಅದನ್ನು ಚೀನಾದ ಸಾಲ ಮರುಪಾವತಿಗೆ ಬಳಸುವ ಸಾಧ್ಯತೆ ಇದೆ ಎಂದು ಅಮೆರಿಕ ಆರೋಪಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?
ಸೊಂಟಕ್ಕಿಂತ ಕೆಳಗೆ ಮಹಿಳೆಯರು ಚಿನ್ನ ಧರಿಸಬಾರದು ಅಂತಾ ಹೇಳೋದು ಯಾಕೆ? ಶೇ. 99ರಷ್ಟು ಜನರಿಗೆ ಇದು ಗೊತ್ತಿಲ್ಲ!