ಆರ್‌ಬಿಐನಲ್ಲಿ ನಂದನ್ ನಿಲೇಕಣಿ ಅವರಿಗೆ ವಿಶೇಷ ಸ್ಥಾನ: ಏನದು?

Published : Jan 08, 2019, 07:05 PM IST
ಆರ್‌ಬಿಐನಲ್ಲಿ ನಂದನ್ ನಿಲೇಕಣಿ ಅವರಿಗೆ ವಿಶೇಷ ಸ್ಥಾನ: ಏನದು?

ಸಾರಾಂಶ

ಆರ್‌ಬಿಐ ಡಿಜಿಟಲ್ ಪಾವತಿ ವಿಶೇಷ ಸಮಿತಿಯ ಅಧ್ಯಕ್ಷರಾಗಿ ನಂದನ್ ನಿಲೇಕಣಿ|  ಡಿಜಿಟಲ್ ಪಾವತಿಯ ಭದ್ರತೆ ಬಗ್ಗೆ ವಿಶೇಷ ಸಮಿತಿಯಿಂದ ಅಧ್ಯಯನ| ಡಿಜಿಟಲ್ ಪಾವತಿ ಕುರಿತಂತೆ ಸಲಹೆ ಸೂಚನೆಗಳನ್ನು ನೀಡಲಿರುವ ಸಮಿತಿ| ವಿಶೇಷ ಸಮಿತಿಯಲ್ಲಿ ನಾಲ್ವರು ಸದಸ್ಯರು

ಮುಂಬೈ(ಜ.08): ಆಧಾರ್ ಯೋಜನೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಂದನ್ ನಿಲೇಕಣಿ ಅವರನ್ನು ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಡಿಜಿಟಲ್ ಪಾವತಿ ವಿಶೇಷ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 

ನೂತನ ಯೋಜನೆಗಳು, ಡಿಜಿಟಲ್ ಪಾವತಿಯ ಸಾಧಕ-ಬಾಧಕಗಳು, ಡಿಜಿಟಲ್ ಪಾವತಿಯ ಭದ್ರತೆ ಬಗ್ಗೆ ಈ ವಿಶೇಷ ಸಮಿತಿ ಆಳವಾಗಿ ಅಧ್ಯಯನ ಮಾಡಲಿದೆ. ಡಿಜಿಟಲ್ ಪಾವತಿ ಕುರಿತಂತೆ ಸಲಹೆ ಸೂಚನೆಗಳನ್ನು ಈ ಸಮಿತಿ ನೀಡಲಿದೆ. 

ಈ ವಿಶೇಷ ಸಮಿತಿಯಲ್ಲಿ ನಾಲ್ವರು ಸದಸ್ಯರಿರಲಿದ್ದಾರೆ. ಸಮಿತಿಯ ಸದಸ್ಯರಾಗಿ ಎಚ್ ಆರ್ ಖಾನ್, ಕಿಶೋರ್ ಸಾಂಸಿ, ಅರುಣಾ ಶರ್ಮಾ, ಸಂಜಯ್ ಜೈನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!