ವೇತನ ಪಡೆಯೋರಿಗೊಂದು ಗುಡ್‌ ನ್ಯೂಸ್, ನೂತನ ಬ್ಯಾಂಕಿಂಗ್ ವ್ಯವಸ್ಥೆ ಜಾರಿ!

By Kannadaprabha News  |  First Published Jun 5, 2021, 8:33 AM IST

* ಆ.1ರಿಂದ ಬ್ಯಾಂಕಿಗೆ ರಜೆ ಇದ್ರೂ ವೇತನ ಪಾವತಿ

* ಎನ್‌ಎಸಿಎಚ್‌ ಸೇವೆ ವಾರದ ಎಲ್ಲಾ ದಿನವೂ ಲಭ್ಯ: ಆರ್‌ಬಿಐ

* ಬ್ಯಾಂಕುಗಳು, ಹಣಕಾಸು ಸಂಸ್ಥೆಗಳ ದೊಡ್ಡ ಮಟ್ಟಹಣ ವರ್ಗಾವಣೆಗೆ ಅನುಕೂಲ ಕಲ್ಪಿಸಲು ವೆಬ್‌ ಆಧಾರಿತ ಎನ್‌ಎಸಿಎಚ್‌ (ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್‌ ಹೌಸ್‌) ವ್ಯವಸ್ಥೆ ಜಾರಿ


ನವದೆಹಲಿ(ಜೂ.,05): ಆ.1ರಿಂದ ಬ್ಯಾಂಕ್‌ಗೆ ರಜೆ ಇದ್ದರೂ ನಿಮ್ಮ ವೇತನ, ಪಿಂಚಣಿ ಪಾವತಿ ಆಗಲಿದೆ ಹಾಗೂ ಸಾಲದ ಮೇಲಿನ ಇಎಂಐ ಸೇರಿದಂತೆ ಮತ್ತಿತರ ವಹಿವಾಟುಗಳು ಹಾಗೂ ಎಸ್‌ಐಪಿ ಹೂಡಿಕೆಗಳು ಅದೇ ದಿನವೇ ವರ್ಗಾವಣೆ ಆಗಲಿವೆ.

ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ಬ್ಯಾಂಕುಗಳು, ಹಣಕಾಸು ಸಂಸ್ಥೆಗಳ ದೊಡ್ಡ ಮಟ್ಟಹಣ ವರ್ಗಾವಣೆಗೆ ಅನುಕೂಲ ಕಲ್ಪಿಸಲು ವೆಬ್‌ ಆಧಾರಿತ ಎನ್‌ಎಸಿಎಚ್‌ (ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್‌ ಹೌಸ್‌) ವ್ಯವಸ್ಥೆಯನ್ನು ಅನ್ನು ಜಾರಿಗೆ ತಂದಿದೆ. ಎನ್‌ಎಸಿಎಚ್‌ ಸೇವೆ ಆ.1ರಿಂದ ಬ್ಯಾಂಕ್‌ ರಜಾದಿನಗಳಲ್ಲಿಯೂ ಕಾರ್ಯನಿರ್ವಹಿಸಲಿದೆ ಎಂದು ಆರ್‌ಬಿಐ ಶುಕ್ರವಾರ ಪ್ರಕಟಿಸಿದೆ. ಸರ್ಕಾರ ಆಧಾರ್‌ ನಂಬರ್‌ ಮೂಲಕ ಒದಗಿಸುವ ನೇರ ನಗದು ಪಾವತಿ ಸೌಲಭ್ಯವನ್ನೂ ಎನ್‌ಎಸಿಎಚ್‌ ಬೆಂಬಲಿಸಲಿದೆ.

Latest Videos

undefined

ಸಾಮಾನ್ಯವಾಗಿ ನೌಕರರ ವೇತನ ಪಾವತಿ, ಬಡ್ಡಿ, ಲಭಾಂಶ, ಪಿಂಚಣಿಯಂತಹ ದೊಡ್ಡ ಮಟ್ಟದ ಹಣ ವರ್ಗಾವಣೆ, ಕರೆಂಟ್‌, ಟೆಲಿಫೋನ್‌, ಗ್ಯಾಸ್‌, ನೀರಿನ ಬಿಲ್‌ ನಂತಹ ಸ್ವೀಕೃತಿಗಳು, ಮ್ಯೂಚುವಲ್‌ ಫಂಡ್‌ ಹೂಡಿಕೆಗಳು, ವಿಮೆ ಕಂತು ಪಾವತಿಯಂತಹ ಸೇವೆಗಳು ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ಮೂಲಕ ನಿರ್ವಹಿಸಲ್ಪಡುತ್ತವೆ. ಬ್ಯಾಂಕುಗಳಿಗೆ ರಜಾ ಇದ್ದ ವೇಳೆ ಈ ಸೇವೆಗಳು ಲಭ್ಯವಾಗುತ್ತಿರಲಿಲ್ಲ.

ಹೀಗಾಗಿ ಎಸ್‌ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ)ಯ ನೋಂದಣಿಗೆ 2ರಿಂದ 3 ವಾರಗಳು ಬೇಕಾಗುತ್ತಿದ್ದವು. ಶನಿವಾರ ಹಾಗೂ ಭಾನುವಾರಗಳಂದು ಮ್ಯೂಚುವಲ್‌ ಫಂಡ್‌ ಹೂಡಿಕೆಗಳು ಕಡಿಗೊಳ್ಳುತ್ತಿರಲಿಲ್ಲ. ಇದೀಗ ವಾರದ ಎಲ್ಲಾ ದಿನವೂ ಎನ್‌ಎಸಿಎಚ್‌ ಸೇವೆ ಲಭ್ಯವಾಗಲಿರುವ ಕಾರಣ ತ್ವರಿತ ಹೂಡಿಕೆ ಹಾಗೂ ನೋಂದಣಿ ಮಾಡಲು ಸಾಧ್ಯವಾಗಲಿದೆ.

click me!