Muthoottu Mini : ಬಿಸಿನಸ್ ಪಾರ್ಟನರ್ ಬೇಕೆಂದ ಯುವಕ,  ಬೈಕ್ ಹತ್ತಿ ಲಡಾಕ್‌ಗೆ ಹೊರಟಳು!

By Suvarna NewsFirst Published Jan 14, 2022, 10:20 PM IST
Highlights

* ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಮುತ್ತೂಟ  ಜಾಹೀರಾತು!
*  ಮಹಿಳೆಯರ ಕನಸುಗಳಿಗೆ ಬೆಂಬಲ ನೀಡುವ ಜಾಹೀರಾತು
* ಸಾಮಾಜಿಕ ಜಾಲತಾಣ, ಇಂಟರ್ನೆಟ್‌ನಲ್ಲಿ  ಭಾರಿ ಮೆಚ್ಚುಗೆ
* ಲಡಾಖ್ ಸುಂದರ ತಾಣದಲ್ಲಿ ಚಿತ್ರೀಕರಿಸಿದ ಜಾಹೀರಾತು

ಬೆಂಗಳೂರು(ಜ.14): ಮಹಿಳೆ (Woman) ಅನ್ನೋ ಕಾರಣಕ್ಕೆ ಸಾಂಪ್ರದಾಯಿ ಚೌಕಟ್ಟಿನೊಳಗೆ ಬಂಧಿಯಾಗಿಡದೆ, ಆಕೆಯ ಕನಸುಗಳಿಗೆ ಪ್ರೋತ್ಸಾಹ ನೀಡುವ ಹಾಗೂ ಕನಸನ್ನು ಸಾಕಾರಗೊಳಿಸಲು ಬೆಂಬಲಿಸುವ ಜಾಹೀರಾತೊಂದು (Advertisement) ಇದೀಗ ಸಾಮಾಜಿಕ ಜಾಲತಾಣ ಸೇರಿದಂತೆ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಹೌದು, ಮುತ್ತೂಟ್ ಮಿನಿ ಫಿನಾನ್ಸರ್ (Muthoottu Mini) ಲಿಮಿಟೆಡ್ ಬಿಡುಗಡೆ ಮಾಡಿರುವ ಕನಸುಗಳ ಬೆನ್ನೇರಿದ ಸ್ವಾವಲಂಬಿ ಯುವತಿಯ ಜಾಹೀರಾತಿಗೆ ಮೆಚ್ಚುಗೆಗಳ ಸುರಿಮಳೆ ವ್ಯಕ್ತವಾಗುತ್ತಿದೆ.

ಮಹಿಳೆ, ಆಕೆಯ ಆಲೋಚನೆ, ಆಕೆಯ ಕನಸು, ಅದನ್ನು ಈಡೇರಿಸಲು ಎದುರಾಗುವ ಸಾಮಾನ್ಯ ಅಡೆತಡೆಗಳನ್ನು ಎದುರಿಸಿ ಮುನ್ನಗ್ಗುವ ಮತ್ತೂಟ್ ಫಿನಾನ್ಸ್ ಜಾಹೀರಾತು ಸಂಚಲನ ಮೂಡಿಸಿದೆ. ಯೂಟ್ಯೂಬ್‌ನಲ್ಲಿ ಈ ಜಾಹೀರಾತು 2 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಭಾರತದ ಸಾಮಾಜಿಕ ಸ್ಥಿತಿಗತಿಗಳ ಚೌಕಟ್ಟಿನಲ್ಲಿ ಮಹಿಳೆ ಆತ್ಮವಿಶ್ವಾಸವನ್ನು ಪುಷ್ಠಿಕರೀಸುವ ಈ ಜಾಹೀರಾತು ಹಲವು ಮಹಿಳೆಯರಿಗೆ ಪ್ರೇರಣೆಯಾಗಿದೆ. 

ಈ ಜಾಹೀರಾತಿನಲ್ಲಿ ಬೈಕ್ ರೈಡಿಂಗ್ ಕನಸು ಹೊತ್ತಿರುವ ಯುವತಿ, ತನ್ನ ತಂದೆಯ ಬೆಂಬಲದೊಂದಿಗೆ ರೈಡಿಂಗ್ ಮುಂದುವರಿಸಲು ಇಚ್ಚಿಸಿರುತ್ತಾಳೆ. ದಿಢೀರ್ ಮದುವೆ ಪ್ರಪೋಸಲ್ ಎದುರಾಗಲಿದೆ. ಈ ವೇಳೆ ಹುಡುಗನ ಜೊತೆಗಿನ ಮಾತುಕತೆಯನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಮದುವೆ ಬಳಿ ಹುಡುಕ ಉದ್ಯಮ ಆರಂಭಿಸವ ಆಲೋಚನೆ ಇದೆ ಎಂದು ಹೇಳುತ್ತಾನೆ. ಈ ವೇಳೆ ತನಗೆ ಬ್ಯೂಸಿನೆಸ್‌ನಲ್ಲಿ ಆಸಕ್ತಿ ಇಲ್ಲ ಎಂದಿದ್ದಾಳೆ. ಆರಂಭಿಸುವ ಉದ್ಯಮಕ್ಕೆ ಬೆಂಬಲವಿದ್ದರೆ ಸಾಕು ಎಂದು ಹೇಳುವ ಹುಡುಗನಿಗೆ ದಿಟ್ಟ ಉತ್ತರವನ್ನೇ ಯುವತಿ ನೀಡಿದ್ದಾಳೆ. ನಾನು ಜೀವನ ಸಂಗಾತಿಯನ್ನು ನೋಡುತ್ತಿದ್ದೇನೆ ಹೊರತು, ಬ್ಯೂಸಿನೆಸ್ ಪಾರ್ಟ್ನರ್ ಅಲ್ಲ ಎಂದು ಹೊರನಡೆಯುತ್ತಾಳೆ.

ಬಳಿಕ ತನ್ನ ಚಿನ್ನವನ್ನು ಮತ್ತೂಟ್ ಮಿನಿ ಫಿನಾನ್ಸ್ ಬಳಿ ಅಡವಿಟ್ಟು ಹೊಚ್ಚ ಹೊಸ ಬೈಕ್ ಖರೀದಿಸುತ್ತಾಳೆ.  ಬಳಿಕ ನೇರವಾಗಿ ಲಡಾಖ್ ರೈಡ್ ಆರಂಭಿಸುತ್ತಾಳೆ. ನನಗೆ ಕನಸುಗಳಿಗೆ ಬೆಂಬಲ ನೀಡಲು ಯಾರು ಇಲ್ಲದಿದ್ದರೂ ತಂದೆ ಸದಾ ಇರುತ್ತಾರೆ ಅನ್ನೋ ದೃಢ ನಂಬಿಕೆ ನನಗಿದೆ ಎಂದು ಆಕೆ ರೈಡ್ ಮುಂದುವರಿಸುತ್ತಾಳೆ. ಇದೇ ಜಾಹೀರಾತು ಇದೀಗ ಸೆನ್ಸೇಶನ್ ಕ್ರಿಯೆಟ್ ಮಾಡಿದೆ. 

ಈ ವಿಶೇಷ ಜಾಹೀರಾತನನ್ನು ಪ್ರಶಸ್ತಿ ವಿಜೇತ ಹಾಗೂ ಖ್ಯಾತ ನಿರ್ದೇಶಕ ಮಾರ್ಟಿನ್ ಪ್ರಾಕ್ಕತ್ ನಿರ್ದೇಶಿಸಿದ್ದಾರೆ. ಜೋಮನ್ ಟಿ ಜಾನ್ ಕ್ಯಾಮಾರ ಕೈಚಳಕ ಜಾಹೀರಾತಿನಲ್ಲಿ ಮೇಳೈಸಿದೆ. ಲಖಾಡ್ ಸುಂದರ ತಾಣದಲ್ಲಿ ಈ ಜಾಹೀರಾತನ್ನು ಶೂಟಿಂಗ್ ಮಾಡಲಾಗಿದೆ. ಲಡಾಖ್‌ನಲ್ಲಿ ಚಿತ್ರೀಕರಣದ ಮೂಲಕ ಅತಿ ಉನ್ನತ ಮಟ್ಟಕ್ಕೆ ಮಹಿಳೆ ತಲುಪಲು ಸಾಧ್ಯ. ಮಹಿಳೆಯರ ಕನಸು ಹತ್ತಿಕ್ಕಬೇಡಿ, ಸಣ್ಣ ಪ್ರೋತ್ಸಾಹ ಬೆಂಬಲ ಅಗತ್ಯ ಅನ್ನೋ ಸಂದೇಶ ಸಾರಲಾಗಿದೆ. ನೀವು ಮುಖ್ಯ, ನಿಮ್ಮ ಕನಸುಗಳು ನಮಗೆ ಮುಖ್ಯ ಅನ್ನೋ ಮುತ್ತೂಟ್ ಮಿನಿ ಫಿನಾನ್ಸ್ ಜಾಹೀರಾತು ಭಾರತದ ಸಮಸ್ತ ಮಹಿಳೆಯರಿಗೆ ಸ್ಪೂರ್ತಿಯಾಗಿದೆ.

ತಮ್ಮ ಕನಸುಗಳನ್ನು, ಉದ್ದೇಶ ಸಾಧಿಸುವ ಗುರಿ ಹೊಂದಿದ್ದರೆ ಯಾರೂ ತಡೆಯಲು ಸಾಧ್ಯವಿಲ್ಲ. ಅದೆಷ್ಟೆ ಅಡೆ ತಡೆ ಎದುರಾದರು ಮಹಿಳೆ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬ ಮಹತ್ವದ ಸಂದೇಶ ಸಾರಿರುವ ಮುತ್ತೂಟ್ ಮಿನಿ ಫಿನಾನ್ಸ್ ಜಾಹೀರಾತು ಮತ್ತೂಟ್ ಮಿನಿ ಫಿನಾನ್ಸ್ ಕಂಪನಿಯ ಘೋಷವಾಕ್ಯ ಯಾವಾಗಲು ನಿಮ್ಮೊಂದಿಗೆಯೊಂದಿಗೆ ಹೋಲಿಕೆಯಾಗುತ್ತಿದೆ. 

ಈ ಜಾಹೀರಾತಿಗೆ ಸಿಕ್ಕಿದ ಉತ್ತಮ ಪ್ರತಿಕ್ರಿಯೆಗೆ ಮುತ್ತೂಟ್ ಮಿನಿ ಫಿನಾನ್ಶಿಯರ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮ್ಯಾಥ್ಯೂ ಮುತ್ತೂಟ್ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಹೊಸ ಜಾಹೀರಾತಿಗೆ ವ್ಯಕ್ತವಾದ ಪ್ರತಿಕ್ರಿಯೆಗೆ ನಾವು ರೋಮಾಂಚನಗೊಂಡಿದ್ದೇವೆ.  ಈ ಜಾಹೀರಾತು ಮಹಿಳೆಯರನ್ನು ಕನಸು ಕಾಣಲು ಪ್ರೋತ್ಸಾಹಿಸುತ್ತದೆ.
ಜೊತೆಗೆ ಈ ಕನಸನ್ನು ಸಾಕಾರಗೊಳಿಸಲು ಬೆಂಬಲ ನೀಡುತ್ತದೆ. ಕೆಲ ಸಾಮಾಜಿಕ ಚೌಕಟ್ಟುಗಳ ಅಡೆತಡೆಗಳನ್ನು ಎದುರಿಸಿ ಮುನ್ನಗ್ಗುತ ಛಾತಿಯನ್ನು ಮಹಿಳೆಯರಿಗೆ ಈ ಜಾಹೀರಾತು ನೀಡುತ್ತದೆ. ಮಹಿಳೆಯ ಮನೋಭಾವದಲ್ಲಿ ಒಂದು ಬದಾಲಾವಣೆ ತರಲು ಈ ಜಾಹೀರಾತು ನೆರವಾಗಲಿದೆ. ಮುತ್ತೂಟ್ ಸಾಮಾಜಿಕವಾಗಿ ಜವಾಬ್ದಾರಿಯುತ ಕಂಪನಿಯಾಗಿದೆ. ಮಹಿಳೆಯರು ಎದುರಿಸುತ್ತಿರುವ ಸಾವಲುಗಳನ್ನು ಎದುರಿಸಲು ಮುತ್ತೂಟ್ ನೆರವಾಗಲಿದೆ. ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಮಹಿಳೆ ಮುಖ್ಯವಾಹಿನಿಯಲ್ಲಿ ಎಲ್ಲರಂತೆ ಸಾಧನೆ ಮಾಡಲು, ಪಾಲ್ಗೊಳ್ಳಲು ಆಕೆಯನ್ನು ಮತ್ತಷ್ಟು ಸ್ವಾವಲಂಬಿ ಮಾಡಬೇಕಿದೆ. ಇದಕ್ಕಾಗಿ ಮುತ್ತೂಟ್ ಮಿನಿ ಫಿನಾನ್ಸ್ ಸದಾ ನಿಮ್ಮೊಂದಿಗೆ ನಿಲ್ಲಲಿದೆ ಎಂದು ಮಾಥ್ಯೂ ಮುತ್ತೂಟ್ ಹೇಳಿದ್ದಾರೆ.

click me!