Elon Musk’s Wealth Hits $500 Billion: ಮಸ್ಕ್‌ ಆಸ್ತಿ 500 ಶತಕೋಟಿ ಡಾಲರ್‌: ವಿಶ್ವದ ಮೊದಲಿಗ

Kannadaprabha News   | Kannada Prabha
Published : Oct 03, 2025, 06:29 AM IST
elon musk

ಸಾರಾಂಶ

ವಿಶ್ವದ ಅತಿ ಶ್ರೀಮಂತ ವ್ಯಕ್ತಿ, ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ಅವರ ನಿವ್ವಳ ಆಸ್ತಿ ಮೌಲ್ಯ 500 ಶತಕೋಟಿ ಡಾಲರ್‌ ಗಡಿ ದಾಟುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಇಷ್ಟು ಆಸ್ತಿ ಮಾಡಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಎಲಾನ್‌ ಮಸ್ಕ್‌ ಪಾತ್ರರಾಗಿದ್ದಾರೆ.

ವಾಷಿಂಗ್ಟನ್‌: ವಿಶ್ವದ ಅತಿ ಶ್ರೀಮಂತ ವ್ಯಕ್ತಿ, ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ಅವರ ನಿವ್ವಳ ಆಸ್ತಿ ಮೌಲ್ಯ 500 ಶತಕೋಟಿ ಡಾಲರ್‌ ಗಡಿ ದಾಟುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಇಷ್ಟು ಆಸ್ತಿ ಮಾಡಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಎಲಾನ್‌ ಮಸ್ಕ್‌ ಪಾತ್ರರಾಗಿದ್ದಾರೆ.

ಫೋರ್ಬ್ಸ್ ಬಿಲಿಯನೇರ್‌ಗಳ ಸೂಚ್ಯಂಕದ ಪ್ರಕಾರ, ಬುಧವಾರ ಸಂಜೆ 4:15ಕ್ಕೆ ಮಸ್ಕ್‌ ನಿವ್ವಳ ಆಸ್ತಿ ಮೌಲ್ಯ 500 ಬಿಲಿಯನ್‌ ಡಾಲರ್ (44 ಲಕ್ಷ ಕೋಟಿ ರು.)ಗೆ ತಲುಪಿತ್ತು. ಈ ಮೂಲಕ, ಈ ಸಾಧನೆ ಮಾಡಿದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ. ಭಾರತದ ಈ ವರ್ಷದ ಬಜೆಟ್‌ ಮೊತ್ತ 50.65 ಲಕ್ಷ ಕೋಟಿ ರು. ಆಗಿದೆ. ಎಲಾನ್‌ ಮಸ್ಕ್‌ ಒಬ್ಬರ ಆಸ್ತಿ 44.3 ಲಕ್ಷ ಕೋಟಿ ರು. ಇದೆ.

ಸಂಪತ್ತು ಹೆಚ್ಚಳಕ್ಕೆ ಕಾರಣ:

ಮಸ್ಕ್ ಸಂಪತ್ತು ಹೆಚ್ಚಳಕ್ಕೆ ಪ್ರಮುಖ ಕಾರಣ ಟೆಸ್ಲಾ, ಸ್ಪೇಸ್‌ ಎಕ್ಸ್‌ನ ಷೇರು ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿರುವುದು. ಈ ಹಿಂದೆ ಮಸ್ಕ್‌ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಪ್ತ ಸಲಹೆಗಾರರಾಗಿದ್ದಾಗ ಕೆಲವು ಸವಾಲುಗಳನ್ನು ಎದುರಿಸಿದರು. ಆದರೆ ಆ ಬಳಿಕ ಮತ್ತೆ ತಮ್ಮ ಕಂಪನಿಗಳತ್ತ ಸಂಪೂರ್ಣ ಗಮನ ಹರಿಸುತ್ತಿರುವುದರಿಂದ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಿದೆ. ಇದರಿಂದಾಗಿ ಕಂಪನಿಯ ಷೇರುಗಳು ಏರುಗತಿಯಲ್ಲಿ ಸಾಗಿವೆ.

ಭರ್ಜರಿ ಗಿಫ್ಟ್ ಕೊಟ್ಟ ಎಲಾನ್ ಮಸ್ಕ್, ಗ್ರಾಕ್ ಇಮ್ಯಾಜಿನ್ ಎಐ ಟೂಲ್ ಎಲ್ಲರಿಗೂ ಉಚಿತ

ಎಲಾನ್ ಮಸ್ಕ್ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ತಮ್ಮ ಗ್ರಾಕ್ ಇಮ್ಯಾಜಿನ್ AI ಟೂಲ್ ಇದೀಗ ಎಲ್ಲರಿಗೂ ಉಚಿತವಾಗಿ ನೀಡಿದ್ದಾರೆ. ಮೊದಲು ಪೇಯ್ಡ್ ಸಬ್‌ಸ್ಕ್ರೈಬರ್‌ಗೆ ಮಾತ್ರವಿಲ್ಲ ಈ ಎಐ ಟೂಲ್ ಎಲ್ಲರಿಗೂ ಇದೀಗ ಉಚಿತವಾಗಿದೆ.

ಗ್ರಾಕ್ ಇಮ್ಯಾಜಿನ್: ಎಲ್ಲರಿಗೂ ಉಚಿತ

ಎಲಾನ್ ಮಸ್ಕ್ ತಮ್ಮ ಹೊಸ AI ಟೂಲ್ ಗ್ರಾಕ್ ಇಮ್ಯಾಜಿನ್ ಈಗ ಎಲ್ಲರಿಗೂ ಉಚಿತವಾಗಿ ನೀಡಿದ್ದಾರೆ. ಈ ಟೂಲ್ ಈ ಹಿಂದೆ ಪೇಯ್ಡ್ ಸಬ್ಸ್ಕ್ರೈಬರ್‌ಗಳಿಗೆ ಮಾತ್ರ ಲಭ್ಯವಿತ್ತು. ಈ ಘೋಷಣೆ ವಿಶ್ವಾದ್ಯಂತ ಕಂಟೆಂಟ್ ಕ್ರಿಯೇಟರ್‌ಗಳು, ಕಲಾವಿದರು ಮತ್ತು ಮಾರ್ಕೆಟರ್‌ಗಳಿಗೆ ಒಂದು ವರದಾನವಾಗಿದೆ. ಮೊದಲು ಪಾವತಿ ಮಾಡಿ ಈ ಟೂಲ್ ಬಳಕೆ ಮಾಡಬೇಕಿತ್ತು. ಆದರೆ ಇದೀಗ ಸಂಪೂರ್ಣ ಉಚಿತವಾಗಿ ನೀಡಲಾಗಿದೆ.

ಗ್ರಾಕ್ ಇಮ್ಯಾಜಿನ್ ಎಂದರೇನು?

ಗ್ರಾಕ್ ಇಮ್ಯಾಜಿನ್ ಮುಂದುವರಿದ AI ಬಳಸಿ ತಕ್ಷಣ ವೀಡಿಯೊಗಳು ಮತ್ತು ಚಿತ್ರಗಳನ್ನು ರಚಿಸುವ ಒಂದು ಟೂಲ್ ಆಗಿದೆ. ಎಲಾನ್ ಮಸ್ಕ್ ತಮ್ಮ X ಪುಟದಲ್ಲಿ ಒಂದು ಪೋಸ್ಟ್ ಮೂಲಕ ಈ ಘೋಷಣೆಯನ್ನು ದೃಢಪಡಿಸಿದರು. ಹಲವು ಎಐ ಟೂಲ್‌ಗಳು ಲಭ್ಯವಿದೆ. ಈ ಪೈಕಿ ಗ್ರಾಮ್ ಇಮ್ಯಾಜಿನ್ ಪರಿಣಾಮಕಾರಿಯಾಗಿ ಫೋಟೋ ಹಾಗೂ ವಿಡಿಯೋ ಸೃಷ್ಟಿಸುತ್ತದೆ.

ಗ್ರಾಕ್ ಇಮ್ಯಾಜಿನ್‌ನ ವೈಶಿಷ್ಟ್ಯಗಳು

ಈ ಟೂಲ್ ವಿವಿಧ AI ಮಾದರಿಗಳನ್ನು ಸಂಯೋಜಿಸುತ್ತದೆ. ಇದರ ವೈಶಿಷ್ಟ್ಯಗಳು: ಉತ್ತಮ ಗುಣಮಟ್ಟದ ಚಿತ್ರಗಳನ್ನು ರಚಿಸುವುದು, 6-ಸೆಕೆಂಡ್ ವೀಡಿಯೊಗಳನ್ನು ರಚಿಸುವುದು. ಅತೀ ವೇಗದಲ್ಲಿ ಹಾಗು ಸುಲಭದಲ್ಲಿ ಪೋಟೋ ಹಾಗೂ ವಿಡಿಯೋಗಳನ್ನು ಗ್ರಾಗ್ ಇಮ್ಯಾಜಿನ್ ಟೂಲ್ ನೀಡಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!