ರಾಜ್ಯಕ್ಕೆ ಕೇಂದ್ರದಿಂದ ಕೇವಲ ₹ 3705 ಕೋಟಿ ತೆರಿಗೆ ಪಾಲು!

Kannadaprabha News   | Kannada Prabha
Published : Oct 03, 2025, 02:35 AM IST
money

ಸಾರಾಂಶ

‘ಕೇಂದ್ರ ರಾಜ್ಯಗಳಿಗೆ ತೆರಿಗೆ ಪಾಲನ್ನು ಸರಿಯಾಗಿ ಹಂಚುತ್ತಿಲ್ಲ. ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ’ ಎನ್ನುವ ಆರೋಪದ ನಡುವೆಯೇ, ಕೇಂದ್ರ ಕರ್ನಾಟಕಕ್ಕೆ ಕೇವಲ 3705 ಕೋಟಿ ರು. ತೆರಿಗೆ ಪಾಲು ಬಿಡುಗಡೆ ಮಾಡಿದೆ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದರೂ, ಹಂಚಿಕೆಯಲ್ಲಿ 15ನೇ ಸ್ಥಾನ

ನವದೆಹಲಿ: ‘ಕೇಂದ್ರ ಸರ್ಕಾರವು ರಾಜ್ಯಗಳಿಗೆ ತೆರಿಗೆ ಪಾಲನ್ನು ಸರಿಯಾಗಿ ಹಂಚುತ್ತಿಲ್ಲ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ’ ಎನ್ನುವ ಆರೋಪದ ನಡುವೆಯೇ, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಕೇವಲ 3705 ಕೋಟಿ ರು. ತೆರಿಗೆ ಪಾಲು ಬಿಡುಗಡೆ ಮಾಡಿದೆ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದರೂ, ಹಂಚಿಕೆಯಲ್ಲಿ 15ನೇ ಸ್ಥಾನ ಪಡೆದಿದೆ.

ಒಟ್ಟಾರೆ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೆ 1.01 ಲಕ್ಷ ಕೋಟಿ ರು. ಹೆಚ್ಚುವರಿ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದು ಅ.10ರಂದು ಬಿಡುಗಡೆಯಾಗುವ ಸಾಮಾನ್ಯ ಹಂಚಿಕೆಗೆ ಮೊತ್ತಕ್ಕೆ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದ ಹಣವಾಗಿದೆ.

ಈ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕೇವಲ 3705 ಕೋಟಿ ರು. ಹಣ ನೀಡಲಾಗಿದೆ. ತೆರಿಗೆ ಸಂಗ್ರಹದಲ್ಲಿ ಕಡೆಯ ಸ್ಥಾನಗಳಲ್ಲಿ ಇರುವ ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ, ಅಸ್ಸಾಂ, ಛತ್ತೀಸ್‌ಗಢ, ರಾಜಸ್ಥಾನದಂಥ ರಾಜ್ಯಗಳು ಕರ್ನಾಟಕಕ್ಕಿಂತ ಹೆಚ್ಚಿನ ಹಣ ಪಡೆದುಕೊಂಡಿವೆ.

ರಾಜ್ಯಗಳಲ್ಲಿ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಈ ಹೆಚ್ಚುವರಿ ತೆರಿಗೆ ಪಾಲು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಡಿದೆ. ಮುಂಬರುವ ಅಕ್ಟೋಬರ್‌ 10ರಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ 81735 ಕೋಟಿ ರು. ಬಿಡುಗಡೆ ಮಾಡಲಿದ್ದು, ಅದಕ್ಕೆ ಹೆಚ್ಚುವರಿಯಾಗಿ ಇದೀಗ 1 ಲಕ್ಷ ಕೋಟಿ ರು. ಬಿಡುಗಡೆ ಮಾಡಲಾಗಿದೆ.

ಈ ಹಂಚಿಕೆಯಲ್ಲಿ ಉತ್ತರ ಪ್ರದೇಶಕ್ಕೆ (₹ 18227 ಕೋಟಿ) , ಬಿಹಾರಕ್ಕೆ (₹ 10219 ಕೋಟಿ), ಮಧ್ಯಪ್ರದೇಶಕ್ಕೆ( ₹7976 ಕೋಟಿ), ಪಶ್ಚಿಮ ಬಂಗಾಳಕ್ಕೆ ( ₹7,644 ಕೋಟಿ), ಮಹಾರಾಷ್ಟ್ರಕ್ಕೆ ( ₹ 6418 ಕೋಟಿ), ರಾಜಸ್ಥಾನಕ್ಕೆ (₹6123 ಕೋಟಿ) ಆಂಧ್ರಪ್ರದೇಶಕ್ಕೆ ( ₹4112 ಕೋಟಿ), ಒಡಿಶಾಕ್ಕೆ ( ₹4601 ಕೋಟಿ), ತಮಿಳುನಾಡಿಗೆ ( ₹ 4144 ಕೋಟಿ). ಜಾರ್ಖಂಡ್‌ಗೆ (₹3360 ಕೋಟಿ) ಬಿಡುಗಡೆ ಮಾಡಲಾಗಿದೆ.

ರಾಜ್ಯ2025 ಜಿಎಸ್ಟಿ ಸಂಗ್ರಹ ಹೆಚ್ಚುವರಿ ತೆರಿಗೆ ಪಾಲು

ಕರ್ನಾಟಕ₹13495 ಕೋಟಿ₹3705 ಕೋಟಿ

ಯುಪಿ₹8967 ಕೋಟಿ₹18227 ಕೋಟಿ

ಬಿಹಾರ₹1753 ಕೋಟಿ₹10219 ಕೋಟಿ

ಪ.ಬಂಗಾಳ₹5682 ಕೋಟಿ₹7644 ಕೋಟಿ

ರಾಜಸ್ಥಾನ₹4306 ಕೋಟಿ₹6123 ಕೋಟಿ

ಮಧ್ಯಪ್ರದೇಶ₹3737 ಕೋಟಿ₹7976 ಕೋಟಿ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ
ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?