ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಬಳಿ ಅನೇಕ ದುಬಾರಿ ಕಾರುಗಳಿರೋದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಆದರೆ, 2023ರ ಜನವರಿಯಲ್ಲಿ ಅಂಬಾನಿ ನೋಂದಣಿ ಮಾಡಿಸಿದ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನ ಬರೀ ಪೇಂಟಿಂಗ್ ಕೆಲಸಕ್ಕೆ ಒಂದು ಕೋಟಿ ರೂ. ವ್ಯಯಿಸಲಾಗಿದೆ. ಈ ಕಾರಿನ ಬೆಲೆ ಸುಮಾರು 13.14 ಕೋಟಿ ರೂ. ಎಂದು ಹೇಳಲಾಗಿದೆ. ಅಂದಹಾಗೇ ಇದು ಅಂಬಾನಿ ಕುಟುಂಬಕ್ಕೆ ಸೇರ್ಪಡೆಗೊಳ್ಳುತ್ತಿರುವ ಮೂರನೇ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು.
Business Desk:ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಬಳಿ ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವೇ ಇದೆ. ರೋಲ್ಸ್ ರಾಯ್ಸ್ ನಿಂದ ಹಿಡಿದು ಫೆರಾರಿ ತನಕ ವಿಶ್ವದ ದುಬಾರಿ ಕಾರುಗಳನ್ನು ಅಂಬಾನಿ ಕುಟುಂಬ ಹೊಂದಿದೆ. ಇತ್ತೀಚೆಗೆ ಅಂಬಾನಿ ಕುಟುಂಬಕ್ಕೆ ಮೂರನೇ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ಸೇರ್ಪಡೆಗೊಂಡಿದೆ. ಈ ಕಾರು ಇದರ ವಿಶೇಷ ಕಸ್ಟಮೈಸ್ ನಿಂದ ಮಾತ್ರವಲ್ಲ, ವಿಶಿಷ್ಟ ನಂಬರ್ ಪ್ಲೇಟ್ ಹಾಗೂ ಅಧಿಕ ಬೆಲೆಯ ಕಾರಣದಿಂದ ಕೂಡ ಸದ್ದು ಮಾಡಿದೆ. ಆದರೆ, ಇವೆಲ್ಲಕ್ಕಿಂತ ಮಿಗಿಲಾಗಿ ಈ ಐಷಾರಾಮಿ ಕಾರಿಗೆ ಸಂಬಂಧಿಸಿ ಇನ್ನೊಂದು ಅಚ್ಚರಿಯ ಸಂಗತಿಯಿದೆ. ಅದೇನೆಂದ್ರೆ ಈ ಕಾರಿನ ಪೇಂಟಿಂಗ್ ಕೆಲಸಕ್ಕೆ ಬರೋಬರಿ ಒಂದು ಕೋಟಿ ರೂ. ವ್ಯಯಿಸಲಾಗಿದೆ. ವರದಿಗಳ ಪ್ರಕಾರ ಈ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನ ಬೆಲೆ ಸುಮಾರು 13.14 ಕೋಟಿ ರೂ. ಸಾಮಾನ್ಯವಾಗಿ ರೋಲ್ಸ್ ರಾಯ್ಸ್ ಕುಲ್ಲಿನನ್ ಕಾರಿನ ಬೆಲೆ 6.8 ಕೋಟಿ ರೂ.ನಿಂದ ಪ್ರಾರಂಭವಾಗುತ್ತದೆ. ಆದರೆ, ಪೇಂಟಿಂಗ್ ಜೊತೆಗೆ 21 ಇಂಚು ಚಕ್ರಗಳು ಹಾಗೂ ಇತರ ಕಸ್ಟಮೈಸ್ ಕೆಲಸಗಳಿಂದ ಕಾರಿನ ಬೆಲೆ ಹೆಚ್ಚಳವಾಗಿ ಅಂದಾಜು 13.14 ಕೋಟಿ ರೂ. ತಲುಪಿದೆ.
ಮರ್ಸಿಡೆಸ್ ಎಎಂಜಿ-ವ್ಯಾಗೆನ್ ಹಾಗೂ ಎಂಜಿ ಗ್ಲೋಸ್ಟರ್ ಬೆಂಗಾವಲಿನಲ್ಲಿ ಇತ್ತೀಚೆಗೆ ಅಂಬಾನಿ ಕುಟುಂಬದ ಈ ಹೊಸ ರೋಲ್ಸ್ ರಾಯ್ಸ್ ಕಲ್ಲಿನಾನ್ಕಾರು ಕಾಣಿಸಿಕೊಂಡಿತ್ತು. ಈ ಹೊಸ ಕಾರು ತುಸ್ಕನ್ ಸನ್ ಕಲರ್ ಶೇಡ್ ಹೊಂದಿದ್ದು, ಈ ಬಣ್ಣದ ಪೇಂಟಿಂಗ್ ಗೆ ಒಂದು ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಲಾಗಿದೆ. ಇನ್ನು ಈ ಕಾರಿನ ನೋಂದಣಿ ಸಂಖ್ಯೆ '0001' ಆಗಿದ್ದು, ಇದಕ್ಕೆ ಕುಟುಂಬವು 12ಲಕ್ಷ ರೂ. ಖರ್ಚು ಮಾಡಿದೆ. ಪ್ರಸಕ್ತ ಇರುವ ಸರಣಿಯಲ್ಲಿ ಎಲ್ಲ ಸಂಖ್ಯೆಗಳಿದ್ದು, ಈ ಕಾರಣಕ್ಕೆ ಅಂಬಾನಿ ಕುಟುಂಬ ಹೊಸ ಸರಣಿಯ ಸಂಖ್ಯೆಯನ್ನು ಆಯ್ಕೆ ಮಾಡಿದೆ. ಅಲ್ಲದೆ, ಇದಕ್ಕೆ ದೊಡ್ಡ ಮೊತ್ತವನ್ನು ವ್ಯಯಿಸಿದೆ ಕೂಡ. ಈ ಕಾರಿನ ನೋಂದಣಿ 2037ರ ಜನವರಿ ತನಕ ಮಾನ್ಯತೆ ಹೊಂದಿದೆ. ಇನ್ನು ಈ ಎಲ್ಲ ಖರ್ಚುಗಳ ಜೊತೆಗೆ 40,000ರೂ. ರಸ್ತೆ ಸುರಕ್ಷತಾ ತೆರಿಗೆಯನ್ನು ಕೂಡ ಪಾವತಿಸಲಾಗಿದೆ.
ದುಡ್ಡು ಮಾಡಬೇಕಾ? ಅಂಬಾನಿ ಹೇಳಿದ ಈ 5 ಟಿಪ್ಸ್ ಫಾಲೋ ಮಾಡಿ
ಕೆಲವೊಂದು ವರದಿಗಳ ಪ್ರಕಾರ ಈ ಹೊಸ ಕಾರು ಮುಖೇಶ್ ಅಂಬಾನಿ ಅವರ ಬಳಕೆಗಾಗಿ ಖರೀದಿಸಿಲ್ಲ.ಬದಲಿಗೆ ಈ ಹೊಸ ಕಾರನ್ನು ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಎಂಗೇಜ್ ಮೆಂಟ್ ಉಡುಗೊರೆಯಾಗಿ ನೀಡಲಾಗಿದೆ. ಇವರಿಬ್ಬರ 2023ರ ಎಂಗೇಜ್ಮೆಂಟ್ ಜನವರಿಯಲ್ಲಿ ಆಗಿದ್ದು, ಈ ಕಾರಿನ ನೋಂದಣಿ ಕೂಡ ಇದೇ ತಿಂಗಳಲ್ಲಿ ಆಗಿದೆ. ಭದ್ರತಾ ಕಾರಣಗಳಿಂದ ಅವರು ಬುಲೆಟ್ ಪ್ರೂಫ್ ವಾಹನದಲ್ಲೇ ಪ್ರಯಾಣಿಸುತ್ತಾರೆ.
ಹುಟ್ಟಿದ ಕೂಸಿಗೆ ಅಂಬಾನಿ ಫ್ಯಾಮಿಲಿ 32 ಬೆಂಗಾವಲು ವಾಹನಗಳ ಭರ್ಜರಿ ಸ್ವಾಗತ, ಅಬ್ಬಬ್ಬಾ ಎಂದು ನೆಟ್ಟಿಗರು!
ಮುಕೇಶ್ ಅಂಬಾನಿಯ ಆ್ಯಂಟಿಲಿಯಾ ಮನೆಯಲ್ಲಿ ಅತೀ ದೊಡ್ಡ ಸ್ಥಳ ಐಷಾರಾಮಿ ಕಾರು ಪಾರ್ಕ್ ಮಾಡಲು ಮೀಸಲಿಡಲಾಗಿದೆ. ಆ್ಯಂಟಿಲಿಯಾದಲ್ಲಿ 400,000 ಚದರ ಅಡಿ ಸ್ಥಳ ಕಾರು ಪಾರ್ಕಿಂಗ್‌ಗೆ ಮೀಸಲಿಡಲಾಗಿದೆ. ಇದರಲ್ಲಿ 158 ಅತೀ ದೊಡ್ಡ ಗಾತ್ರದ ಕಾರುಗಳನ್ನು ಪಾರ್ಕ್ ಮಾಡಲು ಸಾಧ್ಯವಿದೆ. ಆ್ಯಂಟಿಲಿಯಾ ಮನೆಯಲ್ಲಿ ಒಟ್ಟು 27 ಮಹಡಿಗಳಿವೆ. ಇದರಲ್ಲಿ ಒಂದು ಮಹಡಿ ಸಂಪೂರ್ಣ ಕಾರು ಪಾರ್ಕಿಂಗ್‌ಗೆ ಮೀಸಲಿಡಲಾಗಿದೆ. ಅಂಬಾನಿ ಕಾರು ಸಂಗ್ರಹದಲ್ಲಿ ಬೆಂಟ್ಲಿ ಬೆಂಟಿಯಾಗ್ ಸೇರಿದಂತೆ ವಿಶ್ವದ ಅತ್ಯಂತ ದುಬಾರಿ ಕಾರುಗಳಿವೆ. ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವು Z+ ವರ್ಗದ ಭದ್ರತೆ ಹೊಂದಿದ್ದು, ಯಾವಾಗಲೂ ಬೆಂಗಾವಲು ಪಡೆಯಲ್ಲಿ ಚಲಿಸುತ್ತಾರೆ. ಅಂಬಾನಿಗೆ ಬೆಂಗಾವಲು ವಾಹನವಾಗಿ ಸುರಕ್ಷತೆ ನೀಡಲು ಪೊಲೀಸರಿಗೆ ರೇಂಜ್ ರೋವರ್ ಕಾರು ನೀಡಲಾಗಿದೆ.