ದುಬೈನಲ್ಲಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಆಕಾಶ್ ಅಂಬಾನಿ ಬೀಚ್ ಸೈಡ್ ವಿಲ್ಲಾವೊಂದನ್ನುಖರೀದಿಸಿದ್ದಾರೆ. ಪಾಮ್ ಜುಬೇರಾದಲ್ಲಿನ ಅತ್ಯಂತ ದುಬಾರಿಯ ಮನೆ ಇದಾಗಿದೆ ಎಂದು ತಿಳಿದುಬಂದಿದೆ.
ಮುಕೇಶ್ ಅಂಬಾನಿ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ದೇಶದ ಹಲವೆಡೆ ಮುಕೇಶ್ ಅಂಬಾನಿ ಆಸ್ತಿಯನ್ನು ಖರೀದಿಸಿದ್ದಾರೆ. ಈಗ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದುಬೈನಲ್ಲಿ ಅತ್ಯಂತ ದುಬಾರಿ ಮನೆಯೊಂದನ್ನು ಖರೀದಿಸಿದೆಯಂತೆ. ನಿಗೂಢವಾಗಿ ಅವರು ಈ ಆಸ್ತಿಯನ್ನು ಖರೀದಿಸಿದ್ದು, ಇದು ನಗರದ ಅತಿದೊಡ್ಡ ವಸತಿ ಆಸ್ತಿ ವ್ಯವಹಾರವಾಗಿದೆ ಎಂದು ಒಪ್ಪಂದದ ಬಗ್ಗೆ ತಿಳಿದಿರುವ ಇಬ್ಬರು ಹೇಳಿದ್ದಾರೆ. ಅಲ್ಲದೆ, 80 ಮಿಲಿಯನ್ ಡಾಲರ್ ಮೌಲ್ಯದ ಬೀಚ್ ಸೈಡ್ ವಿಲ್ಲಾದ ಪಾಮ್ ಜುಮೇರಾದಲ್ಲಿನ ಆಸ್ತಿಯನ್ನು ಈ ವರ್ಷದ ಆರಂಭದಲ್ಲಿ ಅಂಬಾನಿ ಅವರ ಕಿರಿಯ ಮಗ ಅನಂತ್‌ಗಾಗಿ ಖರೀದಿಸಲಾಗಿದೆ ಎಂದು ಈ ಬೆಳವಣಿಗೆ ಬಗ್ಗೆ ಅರಿತಿರು ಒಬ್ಬರು ಹೇಳಿದ್ದಾರೆ. ಹಾಗೂ, ಈ ವಹಿವಾಟು ಖಾಸಗಿಯಾಗಿದೆ ಎಂದೂ ಹೇಳಿದ್ದಾರೆ.
ಕಡಲತೀರದ ಬದಿಯಲ್ಲಿರುವ ಈ ಬಂಗಲೆ ಪಾಮ್-ಆಕಾರದ ಕೃತಕ ದ್ವೀಪಸಮೂಹದ ಉತ್ತರ ಭಾಗದಲ್ಲಿದೆ ಮತ್ತು 10 ಮಲಗುವ ಕೋಣೆಗಳು, ಖಾಸಗಿ ಸ್ಪಾ, ಒಳಾಂಗಣ ಹಾಗೂ ಹೊರಾಂಗಣ ಪೂಲ್‌ಗಳನ್ನು ಹೊಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಆದರೆ ಖರೀದಿದಾರರು ಯಾರು ಎಂಬುದನ್ನು ಅವರು ಹೇಳಿಲ್ಲ. ಅತಿ ಶ್ರೀಮಂತರಿಗೆ ದುಬೈ ನೆಚ್ಚಿನ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿದ್ದು, ದೀರ್ಘಾವಧಿಯ "ಗೋಲ್ಡನ್ ವೀಸಾ" ಮತ್ತು ವಿದೇಶಿಯರಿಗೆ ಮನೆ ಮಾಲೀಕತ್ವದ ಮೇಲಿನ ನಿರ್ಬಂಧಗಳನ್ನು ಸಡಿಲಿಸುವ ಮೂಲಕ ಸರ್ಕಾರವು ಶ್ರೀಮಂತರನ್ನು ಸಕ್ರಿಯವಾಗಿ ಮೆಚ್ಚಿಕೊಂಡಿದೆ. ಇನ್ನು, ಬ್ರಿಟಿಷ್ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ ಅವರ ಪತ್ನಿ ವಿಕ್ಟೋರಿಯಾ ಹಾಗೂ ಬಾಲಿವುಡ್ ಮೆಗಾ ಸ್ಟಾರ್ ಶಾರುಖ್ ಖಾನ್ ಅವರು ಸಹ ಈಗಾಗಲೇ ಈ ಪ್ರದೇಶದಲ್ಲಿ ಬಂಗಲೆ ಖರೀದಿಸಿದ್ದಾರೆ.
620 ಕೋಟಿ ಟಾಯ್ ಕಂಪನಿಯಿಂದ 12 ಸಾವಿರ ಕೋಟಿ ಮನೆ ವರೆಗೆ ಅಂಬಾನಿ ದುಬಾರಿ ಆಸ್ತಿಗಳು
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮುಕೇಶ್ ಅಂಬಾನಿಯವರ 93.3 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತಿನ ಮೂವರು ವಾರಸುದಾರರಲ್ಲಿ ಅನಂತ್ ಅಂಬಾನಿ ಒಬ್ಬರು. ಈಗ 65 ವರ್ಷ ವಯಸ್ಸಿನ, ವಿಶ್ವದ 11 ನೇ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಹಸಿರು ಶಕ್ತಿ, ತಂತ್ರಜ್ಞಾನ ಮತ್ತು ಇ-ಕಾಮರ್ಸ್‌ಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ ನಂತರ ನಿಧಾನವಾಗಿ ತನ್ನ ಮಕ್ಕಳಿಗೆ ನಿಯಂತ್ರಣವನ್ನು ಹಸ್ತಾಂತರಿಸುತ್ತಿದ್ದಾರೆ.
ಅಂಬಾನಿ ಕುಟುಂಬವು ವಿದೇಶದಲ್ಲಿ ತನ್ನ ರಿಯಲ್ ಎಸ್ಟೇಟ್ ಹೆಜ್ಜೆ ಗುರುತನ್ನು ಹೆಚ್ಚಿಸುತ್ತಿದ್ದು, ಹಾಗೂ, ಅಂಬಾನಿಯ ಎಲ್ಲಾ ಮೂವರು ಒಡಹುಟ್ಟಿದವರು ತಮ್ಮ ಎರಡನೇ ಮನೆಗಾಗಿ ಪಾಶ್ಚಿಮಾತ್ಯ ರಾಷ್ಟ್ರಗಳತ್ತ ನೋಡುತ್ತಿದ್ದಾರೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ ಒಬ್ಬರು ಹೇಳಿದರು. ಕಳೆದ ವರ್ಷ, ರಿಲಯನ್ಸ್ ಯುಕೆಯಲ್ಲಿ 79 ಮಿಲಿಯನ್ ಡಾಲರ್ ಖರ್ಚು ಮಾಡಿ ಜಾರ್ಜಿಯನ್ ಯುಗದ ಮಹಲನ್ನು ಹೊಂದಿರುವ ಸ್ಟೋಕ್ ಪಾರ್ಕ್ ಲಿಮಿಟೆಡ್ ಅನ್ನು ಹಿರಿಯ ಪುತ್ರ ಆಕಾಶ್ ಅಂಬಾನಿಗಾಗಿ ಖರೀದಿಸಲಾಗಿದೆ ಎಮದು ಹೇಳಲಾಗಿದೆ. ಆಕಾಶ್ ಇತ್ತೀಚೆಗೆ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಮುಖ್ಯಸ್ಥರಾಗಿ ನೇಮಕಗೊಂಡರು. ಇನ್ನು, ಅವರ ಅವಳಿ ಸಹೋದರಿ ಇಶಾ, ನ್ಯೂಯಾರ್ಕ್‌ನಲ್ಲಿ ಮನೆಯೊಂದಕ್ಕಾಗಿ ಶೋಧನೆ ಮಾಡುತ್ತಿದ್ದಾರೆ ಎಂದೂ ಆ ವ್ಯಕ್ತಿ ಹೇಳಿದ್ದಾರೆ.
75th Independence Day ತ್ರಿವರ್ಣ ಧ್ವಜದ ರಂಗಿನಲ್ಲಿ ಮುಖೇಶ್ ಅಂಬಾನಿ ಅವರ ಆಂಟಿಲಿಯಾ
ದುಬೈ ಆಸ್ತಿ ವ್ಯವಹಾರವು ರಹಸ್ಯವಾಗಿದೆ ಮತ್ತು ರಿಲಯನ್ಸ್‌ನ ಕಡಲಾಚೆಯ ಘಟಕಗಳಲ್ಲಿ ಒಂದರಿಂದ ನಡೆಸಲ್ಪಡುತ್ತದೆ ಎಂದು ಸಹ ತಿಳಿದು ಬಂದಿದ್ದು, ಆ ಬೀಚ್ ಸೈಡ್ ವಿಲ್ಲಾವನ್ನು ಕಸ್ಟಮೈಸ್ ಮಾಡಲು ಮತ್ತು ಅದರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಂಬಾನಿ ಕುಟುಂಬ ಮಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡುತ್ತದೆ ಎಂದೂ ಹೇಳಲಾಗಿದೆ. ಅಲ್ಲದೆ, ದೀರ್ಘಾವಧಿಯ ಅಂಬಾನಿ ಸಹವರ್ತಿ, ಗುಂಪಿನ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ಮತ್ತು ಸಂಸತ್ತಿನ ಸದಸ್ಯ ಪರಿಮಳಾ ನಾಥ್ವಾನಿ ಅವರು ವಿಲ್ಲಾವನ್ನು ನಿರ್ವಹಿಸುತ್ತಾರೆ.
ಅಂಬಾನಿಯವರ ಮೂಲ ನಿವಾಸ ಆಂಟಿಲಿಯಾ ಮೂರು ಹೆಲಿಪ್ಯಾಡ್, 168 ಕಾರುಗಳಿಗೆ ಪಾರ್ಕಿಂಗ್, 50 ಆಸನಗಳ ಚಲನಚಿತ್ರ ಮಂದಿರ, ಭವ್ಯವಾದ ಬಾಲ್ ರೂಂ ಮತ್ತು 9 ಎಲಿವೇಟರ್‌ಗಳೊಂದಿಗೆ 27 ಅಂತಸ್ತಿನ ಗಗನಚುಂಬಿ ಕಟ್ಟಡವಾಗಿ ಉಳಿಯುತ್ತದೆ.