Reliance Industries: ರಿಯಲ್ ಎಸ್ಟೇಟ್ ಉದ್ಯಮಿ ಮಗಳ ಜೊತೆ ಮುಕೇಶ್ ಅಂಬಾನಿ ಮೊಮ್ಮಗನ ನಿಶ್ಚಿತಾರ್ಥ!

By Suvarna News  |  First Published Nov 29, 2021, 11:34 AM IST

* ಅಂಬಾನಿ ಕುಟುಂಬದಲ್ಲಿ ಮದುವೆ ನಿಶ್ಚಿತಾರ್ಥ

* ಮುಕೇಶ್ ಅಂಬಾನಿ ಮೊಮ್ಮಗ ಇಶಾನ್ ನಿಶ್ಚಿತಾರ್ಥ

* ರಿಯಲ್ ಎಸ್ಟೇಟ್ ಉದ್ಯಮಿ ಮಗಳ ಜೊತೆ ಶೀಘ್ರದಲ್ಲೇ ಮದುವೆ


ಮುಂಬೈ(ನ.29): ಶೀಘ್ರದಲ್ಲೇ ಏಷ್ಯಾದ ಶ್ರೀಮಂತ ವ್ಯಕ್ತಿ ಮತ್ತು ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ  (Mukesh Ambani) ಮೊಮ್ಮಗ ವಿವಾಹವಾಗಲಿದ್ದಾರೆ. ಅರೇ... ಇದೇನಿದು ಅಂಬಾನಿ ಪುಟ್ಟ ಮೊಮ್ಮಗನಿಗೆ ಮದುವೆಯೇ ಎಂದು ಯೋಚಿಸ್ಬೇಡಿ. ಯಾಕೆಂದ್ರೆ ಇದು ಆಕಾಶ್ ಅಂಬಾನಿ (Akash Ambani) ಮಗ ಪೃಥ್ವಿ ಆಕಾಶ್ (Pruthvi Ambani) ಅಂಬಾನಿ ಮದುವೆ ವಿಚಾರವಲ್ಲ. ಬದಲಿಗೆ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (Reliance industries Limited) ಕಾರ್ಯನಿರ್ವಾಹಕ ನಿರ್ದೇಶಕ ನಿಖಿಲ್ ಮೆಸ್ವಾನಿ (Nikhil meswani) ಅವರ ಮಗ ಇಶಾನ್ (Ishaan Meswani) ಅವರ ವಿವಾಹ. ವಾಸ್ತವವಾಗಿ, ನಿಖಿಲ್ ಮೆಸ್ವಾನಿ ಮುಖೇಶ್ ಅಂಬಾನಿಯ ಸೋದರಳಿಯ (Cousin-grandsons of Mukesh Ambani). ಈ ಅರ್ಥದಲ್ಲಿ, ಮುಖೇಶ್ ಅಂಬಾನಿ ಮತ್ತು ಇಶಾನ್ ನಡುವೆ ಅಜ್ಜ ಮತ್ತು ಮೊಮ್ಮಗನ ಸಂಬಂಧವಿದೆ. 

ರಿಯಲ್ ಎಸ್ಟೇಟ್ ಉದ್ಯಮಿಯ ಮಗಳೊಂದಿಗೆ ನಿಶ್ಚಿತಾರ್ಥ

Tap to resize

Latest Videos

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ (Executive Director of Reliance Industries) ನಿಖಿಲ್ ಮೆಸ್ವಾನಿ ಅವರ ಪುತ್ರ ಇಶಾನ್ ಈ ವಾರ ಲಾಸ್ ಏಂಜಲೀಸ್‌ನಲ್ಲಿ ನಡೆದ ಸಮಾರಂಭದಲ್ಲಿ ಗಾಯತ್ರಿ ರಹೇಜಾ (Gayatri Raheja) ಅವರೊಂದಿಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಇಶಾನ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿಯವರ ಮೊಮ್ಮಗ. ಗಾಯತ್ರಿ ರಿಯಲ್ ಎಸ್ಟೇಟ್ ಉದ್ಯಮಿ ಸಂದೀಪ್ ರಹೇಜಾ (Real-Estate Tycoon, Sandeep Raheja) ಅವರ ಪುತ್ರಿ.

ನೀತಾ ಮತ್ತು ಇಶಾ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿದ್ದರು

ನವೆಂಬರ್ 23 ರಂದು ಲಾಸ್ ಏಂಜಲೀಸ್‌ನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಕುಟುಂಬ ಸದಸ್ಯರು ಮಾತ್ರ ಇದರಲ್ಲಿ ಭಾಗವಹಿಸಿದ್ದರು. ಮೆಸ್ವಾನಿ ಮತ್ತು ರಹೇಜಾ ಕುಟುಂಬದವರಲ್ಲದೆ, ನೀತಾ ಅಂಬಾನಿ ಮತ್ತು ಅವರ ಪುತ್ರಿ ಇಶಾ ಅಂಬಾನಿ ಕೂಡ ಈ ಅದ್ಧೂರಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇಶಾನ್ ಅವರ ತಾಯಿಯ ಹೆಸರು ಎಲೆನಾ ಮೆಸ್ವಾನಿ ಮತ್ತು ಗಾಯತ್ರಿ ಅವರ ತಾಯಿಯ ಹೆಸರು ದುರ್ಗಾ ರಹೇಜಾ.

ಇಶಾನ್ ಮತ್ತು ಗಾಯತ್ರಿ ಬಾಲ್ಯದ ಗೆಳೆಯರು

ಇಶಾನ್ ಮತ್ತು ಗಾಯತ್ರಿ ಬಾಲ್ಯದಿಂದಲೂ ಪರಸ್ಪರ ಪರಿಚಿತರು. ಮದುವೆಯ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ, ಆದರೆ ಶೀಘ್ರದಲ್ಲೇ ಇಬ್ಬರೂ ಮದುವೆಯಾಗುತ್ತಾರೆ ಎಂದು ಹೆಳಲಾಗಿದೆ. ಈ ಮಧ್ಯೆ ಇಶಾನ್ ಉಂಗುರ ತೊಟ್ಟಿರುವ ಚಿತ್ರವೊಂದು ವೈರಲ್ ಆಗುತ್ತಿದೆ.

ನಿಖಿಲ್ ಮೆಸ್ವಾನಿ ತಂದೆ ರಿಲಯನ್ಸ್ ಸ್ಥಾಪಕ ಸದಸ್ಯರಲ್ಲಿ ಒಬ್ಬರು

ವಾಸ್ತವವಾಗಿ, ಧೀರೂಭಾಯಿ (Dhirubhai Ambani) ಅಂಬಾನಿ ಅವರ ಹಿರಿಯ ಸಹೋದರಿ ತ್ರಿಲೋಚನಾ ಬೆನ್ ಅವರ ಮಗನ ಹೆಸರು ರಸಿಕ್ಲಾಲ್ ಮೆಸ್ವಾನಿ, ಅವರು ರಿಲಯನ್ಸ್ ಕಂಪನಿಯ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರು. ಅವರ ಹಿರಿಯ ಮಗನ ಹೆಸರು ನಿಖಿಲ್ ಮೆಸ್ವಾನಿ. ನಿಖಿಲ್ 1986 ರಲ್ಲಿ ರಿಲಯನ್ಸ್ ಸೇರಿದ್ದರು. ನಿಖಿಲ್ ಮೆಸ್ವಾನಿ ಪ್ರಸ್ತುತ ರಿಲಯನ್ಸ್ ಮಂಡಳಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಅಲ್ಲದೆ, ಮುಖೇಶ್ ಅಂಬಾನಿಯ ಆಪ್ತರಲ್ಲಿ ಒಬ್ಬರೆನ್ನಲಾಗಿದೆ. 

click me!