7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಬಂಪರ್ ಕೊಡುಗೆ

By Suvarna News  |  First Published Nov 27, 2021, 5:08 PM IST

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ತನ್ನ ನೌಕರರಿಗೆ ದೀಪಾವಳಿ ಬೋನಸ್ ಘೋಷಿಸಿದ್ದು, ಜನವರಿಯಿಂದ ಮನೆ ಬಾಡಿಗೆ ಭತ್ಯೆ (HRA) ಹೆಚ್ಚಿಸಲು ಚಿಂತನೆ ನಡೆಸಿದೆ. ಇದ್ರಿಂದ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ.


ನವದೆಹಲಿ (ನ.27): ಕೇಂದ್ರ ಸರ್ಕಾರದ (Central government) ನೌಕರರಿಗೆ(Employees) ಹೊಸ ವರ್ಷಕ್ಕೆ(New Year) ಶುಭಸುದ್ದಿಯೊಂದು ಇದೆ. ಕೇಂದ್ರ ಸರ್ಕಾರವು ಮುಂಬರೋ ದಿನಗಳಲ್ಲಿ ತನ್ನ ನೌಕರರ ತುಟ್ಟಿ ಭತ್ಯೆ (DA) ಹೆಚ್ಚಿಸಲು ನಿರ್ಧರಿಸಿದೆ. ಈ ತಿಂಗಳ ಪ್ರಾರಂಭದಲ್ಲಿಕೇಂದ್ರ ಸರ್ಕಾರ ತನ್ನ ನೌಕರರಿಗೆ ದೀಪಾವಳಿ ಬೋನಸ್(Bonus) ಘೋಷಿಸಿತ್ತು. ಹೀಗಾಗಿ ನೌಕರರು ನವೆಂಬರ್ ತಿಂಗಳ ವೇತನದ ಜೊತೆಗೆ ಬೋನಸ್ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆಯೇ ಕೇಂದ್ರ ಸರ್ಕಾರ ಮತ್ತೊಮ್ಮೆ ಭತ್ಯೆ ಹೆಚ್ಚಿಸಲು ಮುಂದಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆದ್ರೆ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ (Salary) ಮತ್ತಷ್ಟು ಹೆಚ್ಚಳವಾಗಲಿದೆ. 

ಮನೆ ಬಾಡಿಗೆ ಭತ್ಯೆ (HRA) ಹೆಚ್ಚಳ 
ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ನೌಕರರ ಮನೆ ಬಾಡಿಗೆ ಭತ್ಯೆ ಹೆಚ್ಚಿಸಲು ನಿರ್ಧರಿಸಿದೆ. ಮನೆ ಬಾಡಿಗೆ ಭತ್ಯೆ ಹೆಚ್ಚಿಸುವಂತೆ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿಸರ್ಕಾರ HRA ಹೆಚ್ಚಿಸಲು ನಿರ್ಧರಿಸಿದೆ. ಇದ್ರಿಂದ ಕೇಂದ್ರ ಸರ್ಕಾರದ ಉದ್ಯೋಗಿಗಳ ವೇತನದಲ್ಲಿ ಗಣನೀಯ ಹೆಚ್ಚಳವಾಗಲಿದೆ. HRA ಹೆಚ್ಚಿಸೋ ಪ್ರಸ್ತಾವನೆಯನ್ನು ಭಾರತೀಯ ರೈಲ್ವೆ ತಾಂತ್ರಿಕ ಮೇಲ್ವಿಚಾರಕರ ಸಂಘ (IRTSA) ಹಾಗೂ ರಾಷ್ಟ್ರೀಯ ರೈಲ್ವೆಮೆನ್ ಫೆಡರೇಷನ್ (NFIR) ಸರ್ಕಾರದ ಮುಂದಿರಿಸಿತ್ತು. 2022ರ ಜನವರಿ 1ರಿಂದ HRA ಹೆಚ್ಚಿಸುವಂತೆ ಸರ್ಕಾರವನ್ನು ಈ ಸಂಘಟನೆಗಳು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ 11.56 ಲಕ್ಷಕ್ಕೂ ಅಧಿಕ ನೌಕರರ ಮನೆ ಬಾಡಿಗೆ ಭತ್ಯೆ (HRA) ಹೆಚ್ಚಿಸೋ ಬೇಡಿಕೆಯನ್ನು ಹಣಕಾಸು ಸಚಿವಾಲಯ ಪರಿಗಣಿಸಿದೆ. ರೈಲ್ವೆ ಮಂಡಳಿಗೆ ಹಣಕಾಸು ಸಚಿವಾಲಯದಿಂದ ಪ್ರಸ್ತಾವನೆ ಕಳುಹಿಸಲಾಗಿದೆ. ಅಲ್ಲಿಈ ಪ್ರಸ್ತಾವನೆ ಅನುಮೋದನೆಗೊಂಡ ನಂತರ ನೌಕರರು 2022ರ ಜನವರಿಯಿಂದ HRA ಪಡೆಯಲಿದ್ದಾರೆ. HRA ಹೆಚ್ಚಿಸುವಂತೆ ಆಗಾಗ ನೌಕರರು ಸರ್ಕಾರವನ್ನು ಒತ್ತಾಯಿಸುತ್ತಲೇ ಇರುತ್ತಾರೆ. ಆದ್ರೆ ಕೆಲವು ಸಂದರ್ಭಗಳಲ್ಲಿಮಾತ್ರ ಸರ್ಕಾರ ಅವರ ಮನವಿಯನ್ನು ಪರಿಗಣಿಸುತ್ತದೆ. 

Tap to resize

Latest Videos

undefined

Tata Group: ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಪ್ರವೇಶ, ಘಟಕ ಸ್ಥಾಪನೆಗೆ ಕರ್ನಾಟಕದಲ್ಲೂ ಸ್ಥಳ ಪರಿಶೀಲನೆ

HRA ಹೇಗೆ ನಿಗದಿಪಡಿಸುತ್ತಾರೆ?
ಸರ್ಕಾರಿ ವೇತನ ಪಡೆಯೋ ಉದ್ಯೋಗಿಗಳಿಗೆ HRA ಅತ್ಯಂತ ಪ್ರಮುಖ ಅಂಶವಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದ ನೌಕರರಿಗೆ ಯಾವ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆಧಾರದಲ್ಲಿ HRA ನೀಡಲಾಗುತ್ತಿದೆ. ಸರ್ಕಾರವು ನಗರಗಳನ್ನು X, Y ಹಾಗೂ Z ವರ್ಗಗಳನ್ನಾಗಿ ವಿಂಗಡಿಸಿದೆ. X ವರ್ಗದಡಿಯಲ್ಲಿ ಬರೋ ನಗರಗಳಲ್ಲಿ ಕಾರ್ಯನಿರ್ವಹಿಸೋ ಉದ್ಯೋಗಿಗಳಿಗೆ ಮಾಸಿಕ ಈಗಿರೋ HRA ಗಿಂತ 5400 ರೂ. ಹೆಚ್ಚಳವಾಗೋ ನಿರೀಕ್ಷಿಯಿದ್ರೆ, Y ಹಾಗೂ Z ವರ್ಗದಡಿಯಲ್ಲಿ ಬರೋ ನಗರಗಳಲ್ಲಿ ಕಾರ್ಯನಿರ್ವಹಿಸೋ ಉದ್ಯೋಗಿಗಳ HRA ಯಲ್ಲಿ ಕ್ರಮವಾಗಿ ಮಾಸಿಕ 3600ರೂ. ಹಾಗೂ 1800ರೂ. ಹೆಚ್ಚಳವಾಗೋ ಸಾಧ್ಯತೆಯಿದೆ. 50ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರೋ ಎಲ್ಲ ನಗರಗಳು X ವರ್ಗದಡಿಯಲ್ಲಿ ಬರುತ್ತವೆ. ಈ ನಗರಗಳಲ್ಲಿ ಕಾರ್ಯನಿರ್ವಹಿಸೋ ಉದ್ಯೋಗಿಗಳು ಮೂಲವೇತನದ ಶೇ.27 HRA ಪಡೆಯುತ್ತಾರೆ. Y ವರ್ಗದ ನಗರಗಳಲ್ಲಿ ಕಾರ್ಯನಿರ್ವಹಿಸೋ ಉದ್ಯೋಗಿಗಳು ಮೂಲವೇತನದ ಶೇ.18 ಹಾಗೂ  Z ವರ್ಗದಡಿಯಲ್ಲಿ ಬರೋ ಉದ್ಯೋಗಿಗಳು ಶೇ.9ರಷ್ಟು HRA ಪಡೆಯುತ್ತಾರೆ. 

ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 2000ರೂ. ಪಕ್ಕಾ

ಬಡ್ತಿ ಸಿಗೋ ಸಾಧ್ಯತೆ
ಕೆಲವು ಮೂಲಗಳ ಮಾಹಿತಿ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ನೌಕರರಿಗೆ ಡಿಸೆಂಬರ್ ಅಂತ್ಯದಲ್ಲಿ ಬಡ್ತಿ ನೀಡೋ ಸಾಧ್ಯತೆಯಿದೆ. ಅಲ್ಲದೆ, ಮುಂಬರೋ ಬಜೆಟ್ ಗೂ ಮುನ್ನ ಕೇಂದ್ರ ಸರ್ಕಾರ ಕೆಲವು ನೌಕರರ ಮೂಲವೇತನ ಹೆಚ್ಚಿಸಲು ನಿರ್ಧರಿಸಿದೆ. ಹೀಗಾದ್ರೆ ಅನೇಕ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಗಮನಾರ್ಹ ಹೆಚ್ಚಳವಾಗಲಿದೆ. 
  

click me!