* ಇಪಿಎಫ್ ಖಾತೆದಾರರಿಗೆ ಮಹತ್ವದ ಮಾಹಿತಿ
* ಖಾತೆಯಲ್ಲಿ ಈ ಮಾಹಿತಿ ಅಪ್ಡೇಟ್ ಮಾಡದಿದ್ದರೆ ಖಾತೆಗೆ ಹಣ ಬರೋದೇ ನಿಲ್ಲುತ್ತೆ
* ಪಿಎಫ್ ಹಣ ವಿತ್‌ಡ್ರಾ ಮಾಡೋದೂ ಅಸಾಧ್ಯ
ನವದೆಹಲಿ(ನ.27): ನೀವು ಉದ್ಯೋಗಿಯಾಗಿದ್ದರೆ ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ (Employee Provident Fund Organisation) ಅಥವಾ ಇಪಿಎಫ್ (EPFO)ಗೆ ಅರ್ಹರಾಗಿದ್ದರೆ, ಈ ಸುದ್ದಿ ನೀವು ಓದಲೇಬೇಕು. ನಿಮ್ಮ ಆಧಾರ್ ಕಾರ್ಡ್ (Aadhaar card) ಅನ್ನು ಇಪಿಎಫ್‌ಒ ನೀಡಿರುವ ಯುನಿವರ್ಸಲ್ ಅಕೌಂಟ್ ನಂಬರ್‌ನೊಂದಿಗೆ ಲಿಂಕ್ ಮಾಡುವುದು ಬಹಳ ಮುಖ್ಯ ಎಂಬುವುದು ಉಲ್ಲೇಖನೀಯ. ಪ್ರತಿ ಉದ್ಯೋಗಿಗೆ ನಿಯೋಜಿಸಲಾದ ಸಂಖ್ಯೆಗಳಲ್ಲಿ UAN ಒಂದಾಗಿದೆ ಮತ್ತು ಇದು ಶಾಶ್ವತವಾದ ಅಕೌಂಟ್ ನಂಬರ್ ಆಗಿದೆ. EPFO ಯುನಿವರ್ಸಲ್ ಅಕೌಂಟ್ ನಂಬರ್ (UAN) ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಗಡುವನ್ನು ನವೆಂಬರ್ 30, 2021 ರವರೆಗೆ ವಿಸ್ತರಿಸಲಾಗಿದೆ.
31 ಆಗಸ್ಟ್ ಕೊನೆಯ ದಿನಾಂಕವಾಗಿತ್ತು
undefined
ಈ ಹಿಂದೆ ಆಧಾರ್ ಹಾಗೂ ಯುಎಎನ್ ಲಿಂಕ್ (UAN-Aadhar Link) ಮಾಡಲು ಆಗಸ್ಟ್ 31, 2021 ಅಂತಿಮ ಗಡುವಾಗಿ ನೀಡಲಾಗಿತ್ತು. ಇತ್ತೀಚೆಗೆ ಇಪಿಎಫ್‌ಒ ಈ ದಿನಾಂಕವನ್ನು ನವೆಂಬರ್ 15 ಕ್ಕೆ ಮುಂದೂಡಿತ್ತು. ನಿವೃತ್ತಿ ಏಜೆನ್ಸಿಗಳು ತಮ್ಮ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ECR) ಸಲ್ಲಿಕೆ ಮಾನದಂಡಗಳನ್ನು ಸಹ ನವೀಕರಿಸಿವೆ. EPFO ಪ್ರಕಾರ, ಉದ್ಯೋಗದಾತರು PF UAN ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಿದ ಉದ್ಯೋಗಿಗಳಿಗೆ ಮಾತ್ರ ಅರ್ಜಿ ಸಲ್ಲಿಸಬಹುದು.
PF Account| ಉದ್ಯೋಗಿಗಳಿಗೆ ಗುಡ್‌ನ್ಯೂಸ್: ಕೆಲಸ ಬದಲಾವಣೆ ವೇಳೆ ಇನ್ನು ಚಿಂತೆ ಇಲ್ಲ!
ಲಿಂಕ್ ಮಾಡದಿದ್ದರೆ ಸೌಲಭ್ಯಕ್ಕೆ ಕತ್ತರಿ
ನಿಮ್ಮ UAN ಅನ್ನು ಆಧಾರ್ ಸಂಖ್ಯೆಯೊಂದಿಗೆ ನೀವು ಲಿಂಕ್ ಮಾಡದಿದ್ದರೆ, ನಿಮ್ಮ ಉದ್ಯೋಗದಾತರಿಂದ ನೀಮ್ಮ ಖಾತೆಗೆ ಬರುವ ಪಿಎಫ್ ಮೊತ್ತ ಬಂದ್ ಆಗುತ್ತದೆ. ಉದ್ಯೋಗಿಗಳು ತಮ್ಮ ಪಿಎಫ್ ಖಾತೆಯನ್ನು ಲಿಂಕ್ ಮಾಡದ ಹೊರತು ಮತ್ತು ಉದ್ಯೋಗದಾತರು ಮತ್ತು ಅಧಿಕಾರಿಗಳಿಂದ ಡೇಟಾವನ್ನು ಅನುಮೋದಿಸದ ಹೊರತು ರವಾನೆಯಲ್ಲಿ ವಿಳಂಬವನ್ನು ಎದುರಿಸುತ್ತಾರೆ. ಅಲ್ಲದೆ, ಅವರು ತಮ್ಮ ಖಾತೆಯಿಂದ ಪಿಎಫ್ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಈ ವರ್ಷದ ಆರಂಭದಲ್ಲಿ ಘೋಷಿಸಲಾದ ಕೋವಿಡ್ 19 ಮುಂಗಡವನ್ನು ಮತ್ತು ಅವರ ಪಿಎಫ್ ಖಾತೆಗೆ ಲಿಂಕ್ ಮಾಡಲಾದ ವಿಮಾ ಪ್ರಯೋಜನಗಳನ್ನು ಪಡೆಯಲು ಉದ್ಯೋಗಿಗಳಿಗೆ ಸಾಧ್ಯವಾಗುವುದಿಲ್ಲ.
ಪಾಸಿಟಿವ್ ಪೇ ವ್ಯವಸ್ಥೆ ಅಂದ್ರೇನು? ಅದ್ರಿಂದ ಯಾರಿಗೆ ಲಾಭ?
ಆನ್‌ಲೈನ್‌ನಲ್ಲಿ ಇಪಿಎಫ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?
* EPFO ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://unifiedportal-mem.epfindia.gov.in/memberinterface/.
* ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ನಿಮ್ಮ ಖಾತೆಗೆ ಲಾಗಿನ್ ಆಗಿ.
* 'ಮ್ಯಾನೇಜ್' ವಿಭಾಗದಲ್ಲಿ KYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಇಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಲು ನೀವು 'ಆಧಾರ್' ಅನ್ನು ಆಯ್ಕೆ ಮಾಡುವ ಹೊಸ ಪುಟಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ.
* ಈಗ, 'ಆಧಾರ್' ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಆಧಾರ್ ಸಂಖ್ಯೆ ಮತ್ತು ನಿಮ್ಮ ಆಧಾರ್ ಕಾರ್ಡ್‌ನ ಪ್ರಕಾರ ನಿಮ್ಮ ಹೆಸರನ್ನು ನಮೂದಿಸಿ ಮತ್ತು ಸೇವ್ ಆಯ್ಕೆಯನ್ನು ಕ್ಲಿಕ್ ಮಾಡಿ.
* ಒಮ್ಮೆ ನೀವು ನಿಮ್ಮ ಆಧಾರ್ ವಿವರಗಳನ್ನು ಸೇವ್ ಮಾಡಿದರೆ, ನಿಮ್ಮ ಆಧಾರ್ ಅನ್ನು UIDAI ಡೇಟಾದೊಂದಿಗೆ ಪರಿಶೀಲಿಸಲಾಗುತ್ತದೆ.
* ನಿಮ್ಮ KYC ಡಾಕ್ಯುಮೆಂಟ್‌ನ ಯಶಸ್ವಿ ಅನುಮೋದನೆಯ ಮೇಲೆ, ನೀವು EPF ಖಾತೆಯೊಂದಿಗೆ ಆಧಾರ್ ಅನ್ನು ಯಶಸ್ವಿಯಾಗಿ ಲಿಂಕ್ ಮಾಡಲು ಸಾಧ್ಯವಾಗುತ್ತದೆ.
* ನಂತರ ನಿಮ್ಮ ಆಧಾರ್ ವಿವರಗಳ ಮುಂದೆ 'ಪರಿಶೀಲಿಸಲಾಗಿದೆ' ಎಂದು ಬರೆಯಲಾಗುತ್ತದೆ.