₹15,000 ಕೋಟಿ ಆ್ಯಂಟಿಲಿಯಾ ಮಾತ್ರವಲ್ಲ, ಅಂಬಾನಿ ಬಳಿ ಇದೆ 5ಕ್ಕೂ ಹೆಚ್ಚು ದುಬಾರಿ ಮನೆ

Published : Mar 11, 2025, 03:50 PM ISTUpdated : Mar 11, 2025, 07:34 PM IST
₹15,000 ಕೋಟಿ ಆ್ಯಂಟಿಲಿಯಾ ಮಾತ್ರವಲ್ಲ, ಅಂಬಾನಿ ಬಳಿ ಇದೆ 5ಕ್ಕೂ ಹೆಚ್ಚು ದುಬಾರಿ ಮನೆ

ಸಾರಾಂಶ

ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಗೆ 15,000 ಕೋಟಿ ರೂಪಾಯಿ ಮೌಲ್ಯದ ಆ್ಯಂಟಿಲಿಯಾ ಮನೆ ಮಾತ್ರವಲ್ಲ, ಇದರ ಜೊತೆಗೆ ಐದಕ್ಕೂ ಹೆಚ್ಚು ಅತ್ಯಂತ ದುಬಾರಿ ಮನೆಗಳಿವೆ. ಈ ಮನೆ ಎಲ್ಲಿದೆ ಗೊತ್ತಾ? ಇದರ ಬೆಲೆ ಎಷ್ಟು?

ಮುಂಬೈ(ಮಾ.11) ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿ ಮುಂಬೈನ ಆ್ಯಂಟಿಲಿಯಾ ಮನೆಯಲ್ಲಿ ವಾಸವಿದ್ದಾರೆ. ಇದೇ ಮನೆಯ 27ನೇ ಮಹಡಿಯಲ್ಲಿ ಮುಕೇಶ್ ಅಂಬಾನಿ ದಂಪತಿ, ಅನಂತ್ ಅಂಬಾನಿ ಹಾಗೂ ಆಕಾಶ್ ಅಂಬಾನಿ ದಂಪತಿಗಳು ವಾಸವಿದ್ದಾರೆ. ಎಲ್ಲರಿಗೂ ಪ್ರತ್ಯೇಕ ಮನೆಗಳಿವೆ. ಆದರೆ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಗೆ 15,000 ಕೋಟಿ ರೂಪಾಯಿ ಮೌಲ್ಯದ ಆ್ಯಂಟಿಲಿಯಾ ಮನೆ ಮಾತ್ರವಲ್ಲ, ಇದರ ಜೊತೆಗೆ ಅತ್ಯಂತ ದುಬಾರಿ ಐದಕ್ಕೂ ಹೆಚ್ಚು ಮನೆಗಳಿವೆ.

ಮುಕೇಶ್ ಅಂಬಾನಿಯ ಆ್ಯಂಟಿಲಿಯಾ ಮನೆ ಮುಂಬೈನ ಅತ್ಯಂತ ದುಬಾರಿ ಏರಿಯಾ ಆಗಿರುವ ಆಲ್ಟಾಮೌಂಟ್ ರೋಡ್‌ನಲ್ಲಿದೆ. ಒಟ್ಟು 27 ಮಹಡಿಗಳ ಈ ಮನೆ ಎಲ್ಲಾ ಐಷಾರಾಮಿತನ ಹೊಂದಿದೆ. ಆದರೆ ಇದೇ ರೀತಿಯ ಅತ್ಯಂತ ಲಕ್ಷುರಿಯಾಗಿರುವ ಹಾಗೂ ಅತೀ ದುಬಾರಿ ಮೊತ್ತದ 5ಕ್ಕೂ ಹೆಚ್ಚು ಮನೆಗಳು ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಗಿದೆ. ಈ ಮನೆಗಳು ಯಾವುದು? ಎಲ್ಲಿದೆ?

ಮುಕೇಶ್ ನೀತಾ ಅಂಬಾನಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ, ಇವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

ಪಾಮ್ ಜುಮೈರಾ ವಿಲ್ಲಾ, ದುಬೈ
ಮುಕೇಶ್ ಅಂಬಾನಿ ಕುಟುಂಬ ದುಬೈನ ಅತ್ಯಂತ ಜನಪ್ರಿಯ ಪಾಮ್ ಜುಮೈರಾದಲ್ಲಿ ಐಷಾರಾಮಿ ಮನೆ ಹೊಂದಿದೆ. ಇದು 10 ಬೆಡ್ ರೂಂ ಮನೆ. ಸ್ವಿಮ್ಮಿಂಗ್ ಪೂಲ್, ಸ್ಪಾ ಏರಿಯಾ, 70 ಮೀಟರ್ ಖಾಸಗಿ ಬೀಚ್ ಸೇರಿದಂತೆ ಹಲವು ಐಷಾರಾಮಿತನ ಈ ಮನೆಯಲ್ಲಿ ಈ ಮನೆಯನ್ನು 2022ರಲ್ಲಿ ಖರೀದಿಸಲಾಗಿದೆ. ಅಂದು ಇದರ ಬೆಲೆ 640 ಕೋಟಿ ರೂಪಾಯಿ.  

ಸ್ಟೋಕ್ ಹೌಸ್, ಲಂಡನ್
ಅಂಬಾನಿ ಕುಟುಂಬ 2021ರಲ್ಲಿ ಲಂಡನ್‌ನ ಅತ್ಯಂತ ಜನಪ್ರಿಯ ಹಾಗೂ ದುಬಾರಿ ಸ್ಟೋಕ್ ಹೌಸ್ ಖರೀದಿಸಿದ್ದಾರೆ. 2021ರಲ್ಲಿ ಈ ಮನೆಯೆಗೆ ಅಂಬಾನಿ ಕುಟುಂಬ 592 ಕೋಟಿ ರೂಪಾಯಿ ನೀಡಿ ಈ ಮನೆ ಖರೀದಿಸಿದೆ. ಈ ಆಸ್ತಿ ಲಂಡನ್‌ನ ಅತ್ಯಂತ ಐತಿಹಾಸಿಕ ಬಕಿಂಗ್‌ಹ್ಯಾಮ್‌ಶೈರ್ ಬಳಿ ಇದೆ.  

ಸೀ ವಿಂಡ್, ಮುಂಬೈ
ಆ್ಯಂಟಿಲಿಯಾಗೆ ಸ್ಥಳಾಂತರಗೊಳ್ಳುವ ಮೊದಲು ಅಂಬಾನಿ ಕುಟುಂಬ ಮುಂಬೈನ ಸೀ ವಿಂಡ್ ಮನೆಯಲ್ಲಿ ವಾಸವಿತ್ತು. ಈಗಲೂ ಈ ಮನೆಯನ್ನು ಹಾಗೇ ಉಳಿಸಿಕೊಂಡಿದ್ದಾರೆ. ಇದು 17 ಮಹಡಿಯ ಮನೆಯಾಗಿದೆ. ಧೀರೂಬಾಯಿ ಅಂಬಾನಿ ಕುಟುಂಬದ ಎಲ್ಲಾ ಸದಸ್ಯರು ಒಂದೊಂದು ಮಹಡಿಯ ಮಾಲೀಕರಾಗಿದ್ದಾರೆ. ಇದೇ ಮನೆಯಲ್ಲಿ ಅನಿಲ್ ಅಂಬಾನಿ ಕುಟುಂ ವಾಸವಿದೆ. 

ಗುಜರಾತ್‌ನಲ್ಲಿದೆ ಪೂರ್ವಜರ ಆಸ್ಚಿ
ಮುಕೇಶ್ ಅಂಬಾನಿ ಮೂಲ ಗುಜರಾತ್. ಧೀರೂಬಾಯಿ ಅಂಬಾನಿ ಮುಂಬೈಗೆ ಈ ಉದ್ಯಮ ಸಾಮ್ರಾಜ್ಯ ಕಟ್ಟಿದ್ದಾರೆ. ಗುಜರಾತ್‌ನ ಕೋರ್ವಾಡ್ ಪ್ರದೇಶದಲ್ಲಿ ಪೂರ್ವಜರ ಮನೆ ಹಾಗೂ ಆಸ್ತಿ ಇದೆ. ಈ ಮನೆಯನ್ನು ಧೀರೂಬಾಯಿ ಅಂಬಾನಿ ಮೆಮೋರಿಯಲ್ ಹೌಸ್ ಮಾಡಲಾಗಿದೆ. ಈ ಮನೆಯ ಗುಜರಾತಿ ಶೈಲಿಯಲ್ಲಿದೆ. ಪ್ರತಿ  ವರ್ಷ ಅಂಬಾನಿ ಕುಟಂಬ ಇಲ್ಲಿಗೆ ಭೇಟಿ ನೀಡುತ್ತಾರೆ.  

ಮ್ಯಾಂಡರಿನ್ ಒರಿಯೆಂಟಲ್, ನ್ಯೂಯಾರ್ಕ್
ಮ್ಯಾಂಡರಿನ್ ಒರಿಯೆಂಟಲ್ ಅಂಬಾನಿ ಕುಟುಂಬದ ಆಸ್ತಿ. ಇದು ನ್ಯೂಯಾರ್ಕ್‌ನಲ್ಲಿದೆ. ಇದರ ಬೆಲೆ ಬರೋಬ್ಬರಿ 2,000 ಕೋಟಿ ರೂಪಾಯಿ. ಆದರೆ ಇದು ಮನೆಯಲ್ಲಿ ಹೊಟೆಲ್. ಈ ಹೊಟೆಲ್ 248 ಕೊಠಡಿ ಹೊಂದಿದೆ.  

ಮುಕೇಶ್ ಅಂಬಾನಿ ಕುಟುಂಬ ವಿಶ್ವದ ಅತ್ಯಂತ ಶ್ರೀಮಂತ ಕುಟುಂಬ. ರಿಲಯನ್ಸ್ ಗ್ರೂಪ್ ಮೂಲಕ ಅತೀ ದೊಡ್ಡ ಉದ್ಯಮ ಸಾಮ್ರಾ್ಯ ನಡೆಸುತ್ತಿದ್ದಾರೆ. ಏಷ್ಯಾದ ಅತೀ ಶ್ರೀಮಂತ ಅನ್ನೋ ಹೆಗ್ಗಳಿಕೆಗೆ ಮುಕೇಶ್ ಅಂಬಾನಿ ಪಾತ್ರರಾಗಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲೂ ಮುಕೇಶ್ ಅಂಬಾನಿಗೆ ಸ್ಥಾನವಿದೆ. ಮುಕೇಶ್ ಅಂಬಾನಿ ತನ್ನ ಉದ್ಯಮದ ಮೂಲಕ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದ್ದಾರೆ. ಜೊತೆಗೆ ಪ್ರತಿ ದಿನ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದ್ದಾರೆ. 

ಸಾವಿರಾರು ಕೋಟಿ ರೂ ನಷ್ಟದ ಬೆನ್ನಲ್ಲೇ ಶಾಕ್ ಕೊಟ್ಟ ಮುಕೇಶ್ ಅಂಬಾನಿ, ತಟ್ಟಲಿದೆ ಬಿಸಿ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ