
ನವದೆಹಲಿ(ಏ.24): ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಬ್ರಿಟನ್‌ನ ಪ್ರತಿಷ್ಠಿತ ಕಂಟ್ರಿ ಕ್ಲಬ್, ಐಷಾರಾಮಿ ಗಾಲ್ಫ್ ರೆಸಾರ್ಟ್ ಹಾಗೂ ಸ್ಟೋಕ್ ಪಾರ್ಕ್ಗಳನ್ನು 592 ಕೋಟಿ ರು.ಗಳಿಗೆ ಖರೀದಿಸಿದೆ.
ಬ್ರಿಟನ್‌ನ ಬಕಿಂಗ್‌ಶೈರ್‌ನಲ್ಲಿರುವ ಕಂಟ್ರಿ ಕ್ಲಬ್ ಸ್ಟೋಕ್ ಪಾರ್ಕ್ ಹಾಗೂ ರೆಸಾರ್ಟ್ ಯುರೋಪ್‌ನಲ್ಲಿಯೇ ಅತ್ಯುನ್ನತ ಮಟ್ಟದ ಗಾಲ್‌್ಫ ಕೋರ್ಸ್ ಹಾಗೂ ಕ್ರೀಡಾ ಚಟುವಟಿಕೆ, ಗಣ್ಯರ ಆತಿಥ್ಯ, ಕಾನ್ಫರೆನ್ಸ್‌ಗಳನ್ನು ಆಯೋಜಿಸುವುದಕ್ಕೆ ಹೆಸರುವಾಸಿಯಾಗಿದೆ. ಬ್ರಿಟನ್‌ನ ಚಿತ್ರರಂಗದ ಜೊತೆಗೂ ಈ ರೆಸಾರ್ಟ್ ನಂಟು ಹೊಂದಿದ್ದು, ಜೇಮ್ಸ್ ಬಾಂಡ್ ಚಿತ್ರಗಳು ಇಲ್ಲೇ ಚಿತ್ರೀಕರಣಗೊಳ್ಳುತ್ತಿದ್ದವು.
ಬ್ರಿಟನ್‌ನ ಸ್ಟೋಕ್ ಪಾರ್ಕ್ ಲಿಮಿಟೆಡ್‌ನಿಂದ ರಿಲಯನ್ಸ್ ಈ ಆಸ್ತಿಗಳನ್ನು ಖರೀದಿಸಿದೆ. ಕಳೆದ 4 ವರ್ಷದಲ್ಲಿ ವಿವಿಧ ಸ್ವಾಧೀನಗಳಿಗಾಗಿ 24,740 ಕೋಟಿ ರು. ವೆಚ್ಚ ಮಾಡಿದೆ. ಇದರಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ.14ರಷ್ಟುತಂತ್ರಜ್ಞಾನ ಕ್ಷೇತ್ರಕ್ಕೆ ಶೇ.80ರಷ್ಟುಹಾಗೂ ಇಂಧನ ಕ್ಷೇತ್ರದಲ್ಲಿ ಶೇ6ರಷ್ಟುಹಣವನ್ನು ವಿನಿಯೋಗಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.