
ನವದೆಹಲಿ(ಜ.29): ಇ-ಕಾಮರ್ಸ್‌ಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬಳಿಕ ಇದೀಗ ಇ-ವ್ಯಾಲೆಟ್‌ಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ.
ಹೌದು, ಖಾಸಗಿ ಕಂಪನಿಗಳು ಯಾವುದೇ ಕಾರಣಕ್ಕೂ ವ್ಯಕ್ತಿಯ ಆಧಾರ್ ಕಾರ್ಡ್ ಮಾಹಿತಿ ಪಡೆಯುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ, ಇ-ವ್ಯಾಲೆಟ್‌ಗಳ ಮೇಲೆ ಕಣ್ಣಿಡುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಇದೇ ಫೆಬ್ರವರಿ ಕೊನೆಯ ತಿಂಗಳವರೆಗೆ ಹಲವು ಇ-ವ್ಯಾಲೆಟ್‌ಗಳು ನಿಷ್ಕ್ರೀಯಗೊಳ್ಳುವ ಸಾಧ್ಯತೆಗಳಿವೆ. ಡಿಜಿಟಲ್ ವ್ಯಾಲೆಟ್‌ಗಳ ಶೇ. 80ರಷ್ಟು ಗ್ರಾಹಕರು ಇದುವರೆಗೂ ತಮ್ಮ ಕೆವೈಸಿ ಸಲ್ಲಿಸಿಲ್ಲ. ತಮ್ಮ ಸಂಪೂರ್ಣ ಕೆವೈಸಿ ಸಲ್ಲಿಸಲು ಗ್ರಾಹಕರು ತಮ್ಮ ಅಡ್ರೆಸ್ ಪ್ರೂಫ್, ಐಡಿ ಪ್ರೂಪ್ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ ಮತ್ತು ಆರ್‌ಬಿಐ ಮಾಹಿತಿ ಪ್ರಕಾರ ಕಳೆದ ಡಿಸೆಂಬರ್‌ನಲ್ಲಿ ಯುಪಿಐ ಮೂಲಕ ಸುಮಾರು 620 ಮಿಲಿಯನ್ ಹಣದ ವಹಿವಾಟು ನಡೆದಿದ್ದು, ಅಪನಗದೀಕರಣದ ಬಳಿಕ ಹೆಚ್ಚಾಗಿದ್ದ ಇ-ವ್ಯಾಲೆಟ್ ವಹಿವಾಟು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಹೇಳಿದೆ.
ಇನ್ನು ಸರ್ಕಾರದ ಈ ನಿರ್ಧಾರದಿಂದಾಗಿ ಬಹುತೇಕ ಇ-ವ್ಯಾಲೆಟ್ ಕಂಪನಿಗಳು ಮುಚ್ಚಲಿದ್ದು, ಭಾರೀ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ ಅಮೆಜಾನ್, ಪೇಟಿಎಂಗಳಿಗೂ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.