
ನವದೆಹಲಿ(ಜ.29): ದೇಶದ ಅರ್ಥವ್ಯವಸ್ಥೆಯನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವುದು ಭಾರತೀಯ ರಿಸರ್ವ್ ಬ್ಯಾಂಕ್ ಕರ್ತವ್ಯ. ತನ್ನ ಬಳಿ ಇರುವ ಮೀಸಲು ಹಣವನ್ನು ಸಂಕಷ್ಟದ ಸಮಯದಲ್ಲಿ ಬಳಸಲು ಆರ್‌ಬಿಐ ಸಿದ್ದವಿರುತ್ತದೆ.
ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮುಂಬರುವ ಲೋಕಸಭೆ ಚುನಾವಣೆಗೆ ಧನಸಹಾಯ ಮಾಡುವಂತೆ ಆರ್‌ಬಿಐ ಮೇಲೆ ಒತ್ತಡ ಹೇರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೌದು, ಸಾರ್ವತ್ರಿಕ ಚುನಾವಣೆಗಾಗಿ ಕೋಟ್ಯಂತರ ರೂ. ಖರ್ಚು ಮಾಡಬೇಕಿದ್ದು, ಚುನಾವಣಾ ಸಿದ್ದತೆಗಾಗಿ ಕೇಂದ್ರ ಸರ್ಕಾರ ಆರ್‌ಬಿಐ ಸಹಾಯ ಬೇಡುತ್ತಿದೆ. ಚುನಾವಣೆಗೆ ಭರಿಸಬೇಕಾದ ವೆಚ್ಚವನ್ನು ನೀಡುವಂತೆ ಆರ್‌ಬಿಐ ಮೇಲೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.
ಭಾರತದ ರಿಸರ್ವ್ ಬ್ಯಾಂಕ್ ತನ್ನ ಲಾಭದ ಒಂದು ಸಣ್ಣ ಭಾಗವನ್ನು ಮೀಸಲು ಹಣವನ್ನಾಗಿ ಇರಿಸಿರುತ್ತದೆ. ಪ್ರತಿವರ್ಷ ಸರ್ಕಾರಕ್ಕೆ ಬಹುಪಾಲು ಈ ಲಾಭವನ್ನು ವರ್ಗಾಯಿಸುತ್ತದೆ. ಇದನ್ನು ಹಣಕಾಸಿನ ಆದಾಯ ಎಂದು ಪರಿಗಣಿಸಲ್ಪಡುತ್ತದೆ.
ಆರ್‌ಬಿಐ ತನ್ನ ಡಿವಿಡೆಂಡ್ ಪಾವತಿಗಳನ್ನು ಜೂನ್ ನಂತರ ಮಾಡುತ್ತದೆ. ಮಾಡುತ್ತದೆ. ಅದರಂತೆ ಕಳೆದ ವರ್ಷ 100 ಬಿಲಿಯನ್ ರೂ. ಮಧ್ಯಂತರ ಲಾಭಾಂಶವನ್ನು ಆರ್‌ಬಿಐ ಕೇಂದ್ರ ಸರ್ಕಾರಕ್ಕೆ ಪಾವತಿಸಿತ್ತು.
ಆದರೆ ಸಾರ್ವತ್ರಿಕ ಚುನಾವಣೆ ಜೂನ್‌ಗೂ ಮೊದಲೇ ಬರುವುದರಿಂದ ಮತ್ತೆ ಹಣಕ್ಕಾಗಿ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದ್ದು, ಆರ್‌ಬಿಐ ಇಕ್ಕಟ್ಟಿನಲ್ಲಿ ಸಿಲುಕಿದೆ ಎಂದು ಹೇಳಲಾಗುತ್ತಿದೆ.
ಇಷ್ಟು ಸಾಲಲ್ಲ: ಜನರಿಗೆ ಮತ್ತಷ್ಟು ಹಣ ಕೊಡಬೇಕು: ಆರ್‌ಬಿಐ!
ಆರ್‌ಬಿಐನಲ್ಲಿ ನಂದನ್ ನಿಲೇಕಣಿ ಅವರಿಗೆ ವಿಶೇಷ ಸ್ಥಾನ: ಏನದು?
ನ್ಯೂ ಇಯರ್ ಗಿಫ್ಟ್: 20 ರೂ. ಹೊಸ ಗರಿಗರಿ ನೋಟ್!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.