ಮೂನ್‌ಲೈಟಿಂಗ್ ಮಾಡೋರಿಗೆ ಶಾಕಿಂಗ್ ನ್ಯೂಸ್‌: ಹೆಚ್ಚುವರಿ ಆದಾಯ ಘೋಷಿಸದ ಸಾವಿರಾರು ಜನರಿಗೆ ಐಟಿ ನೋಟಿಸ್‌

By BK Ashwin  |  First Published Aug 8, 2023, 4:37 PM IST

ಮೂನ್‌ಲೈಟಿಂಗ್ ಮಾಡುತ್ತಿರೋರು ಅಥವಾ ಮಾಡಿದವರು ತಮ್ಮ ಹೆಚ್ಚುವರಿ ಆದಾಯ ತೋರಿಸಿಲ್ಲವೆಂದು ಆದಾಯ ತೆರಿಗೆ ಇಲಾಖೆ ಸಾವಿರಾರು ಜನರಿಗೆ ನೋಟಿಸ್‌ ಕಳಿಸಿದೆ.


ನವದೆಹಲಿ (ಆಗಸ್ಟ್‌ 8, 2023): ಕೋವಿಡ್ - 19 ಬಳಿಕ ಭಾರತದಲ್ಲಿ ವರ್ಕ್ ಫ್ರಮ್‌ ಹೋಂ ಸಾಮಾನ್ಯವಾಗಿಬಿಟ್ಟಿದೆ. ಈಗಲೂ ಸಹ ಅನೇಕ ಟೆಕ್ಕಿಗಳು, ಇತರೆ ಉದ್ಯೋಗಿಗಳು ಮನೆಯಿಂದ್ಲೇ ಕೆಲಸ ಮಾಡುತ್ತಿದ್ದಾರೆ. ಇನ್ನು, ಹೆಚ್ಚಿನ ಆದಾಯ ಮಾಡಿಕೊಳ್ಳೋಕೆ ಅನೇಕರು ತಮ್ಮ ಕಂಪನಿ ಕೆಲಸ ಬಿಟ್ಟು ಹೆಚ್ಚುವರಿ ಕೆಲಸವನ್ನೂ ಮಾಡ್ತಿದ್ದಾರೆ ಅನ್ನೋ ಆರೋಪ ಇನ್ಫೋಸಿಸ್‌ ಸೇರಿ ಇತರೆ ಕಂಪನಿಗಳಿಂದಲೂ ಬಂದಿತ್ತು. ಇದಕ್ಕೆ ಮೂನ್‌ಲೈಟಿಂಗ್ ಅಂತ ಕರೆಯಲಾಗುತ್ತದೆ. ಈಗ ಈ ಮೂನ್‌ಲೈಟಿಂಗ್ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ.

ಮೂನ್‌ಲೈಟಿಂಗ್ ಮಾಡ್ದೋರು ತಮ್ಮ ಹೆಚ್ಚುವರಿ ಆದಾಯ ತೋರಿಸಿಲ್ಲವೆಂದು ಆದಾಯ ತೆರಿಗೆ ಇಲಾಖೆ ಸಾವಿರಾರು ಜನರಿಗೆ ನೋಟಿಸ್‌ ಕಳಿಸಿದೆ. ಆದಾಯ ತೆರಿಗೆ ಇಲಾಖೆಯು ತಮ್ಮ ನಿಯಮಿತ ಸಂಬಳಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸಿದರೂ, ತಮ್ಮ ತೆರಿಗೆ ರಿಟರ್ನ್ಸ್‌ನಲ್ಲಿ ಹೆಚ್ಚುವರಿ ಆದಾಯವನ್ನು ಘೋಷಿಸದ ವೃತ್ತಿಪರರಿಗೆ ನೋಟಿಸ್ ಜಾರಿಗೊಳಿಸಲು ಪ್ರಾರಂಭಿಸಿದೆ. ಇನ್ನು, ಇದುವರೆಗೆ ನೀಡಲಾದ 1,100 ನೋಟೀಸ್‌ಗಳಲ್ಲಿ ಹೆಚ್ಚಿನವು, 2019-2020 ಮತ್ತು 2020-2021 ರ ಆರ್ಥಿಕ ವರ್ಷಗಳಿಗೆ ಸಂಬಂಧಿಸಿದೆ ಎಂದೂ ಮೂಲಗಳು ತಿಳಿಸಿದೆ. 

Tap to resize

Latest Videos

ಇದನ್ನು ಓದಿ: ಸಾವಿರಾರು ಐಟಿ ಉದ್ಯೋಗಿಗಳನ್ನು ವಜಾಗೊಳಿಸಿದ Accenture: ಕಾರಣ ಹೀಗಿದೆ..

ಹಲವು ಉದ್ಯೋಗಿಗಳಿಗೆ ಮೂನ್‌ಲೈಟಿಂಗ್‌ನಿಂದ ಬರುವ ಆದಾಯ ಅಥವಾ ಪೂರ್ಣ ಸಮಯದ ಉದ್ಯೋಗದ ಹೊರಗೆ ಕೆಲಸ ಮಾಡುವುದು ಅವರ ಕಂಪನಿ ನೀಡ್ತಿದ್ದ ಸಾಮಾನ್ಯ ಸಂಬಳಕ್ಕಿಂತ ಹೆಚ್ಚು ಹಣ ಸಿಗುತ್ತಿತ್ತು ಎಂದು ಕಂಡುಬಂದಿದೆ. ಈ ಹಿನ್ನೆಲೆ, ಇಂತಹವುಗಳ ಮೇಲೆ ಐಟಿ ಇಲಾಖೆ ಕಣ್ಣಿಟ್ಟಿದ್ದು, ಈವರೆಗೆ 1,100 ಜನರಿಗೆ ನೋಟಿಸ್‌ ಕಳಿಸಿದೆ. 

ತೆರಿಗೆ ಇಲಾಖೆಯು ಈ ಅಘೋಷಿತ ಆದಾಯವನ್ನು ಡೇಟಾ ಪರಿಶೀಲನೆಯಲ್ಲಿ ಪತ್ತೆಹಚ್ಚಿದೆ ಎಂದೂ ತಿಳಿದಿದೆ. ಹೆಚ್ಚಿನ ಪಾವತಿಗಳನ್ನು ಆನ್‌ಲೈನ್‌ನಲ್ಲಿ ಮಾಡಲಾಗಿದೆ ಮತ್ತು ಕೆಲವು ವಿದೇಶಿ ಖಾತೆಗಳಿಂದ ಸ್ವೀಕರಿಸಲಾಗಿರುವುದರಿಂದ ಪತ್ತೆಹಚ್ಚಿದೆ ಎಂದೂ ವರದಿ ತಿಳಿಸಿದೆ. "ಎರಡು ಅಥವಾ ಅದಕ್ಕಿಂತ ಹೆಚ್ಚು ಕಂಪನಿಗಳಿಂದ ಮಾಸಿಕ ಅಥವಾ ತ್ರೈಮಾಸಿಕ ಪಾವತಿಗಳನ್ನು ಉದ್ಯೋಗಿಗಳು ಪಡೆಯುತ್ತಿದ್ದಾರೆ. ಆದರೆ ತಮ್ಮ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ತಮ್ಮ ಪೂರ್ಣ ಸಮಯದ ಉದ್ಯೋಗದಿಂದ ಮಾತ್ರ ಆದಾಯವನ್ನು ಘೋಷಿಸುತ್ತಿರುವ ಹೆಚ್ಚಿನ ಸಂಖ್ಯೆಯ ಐಟಿ, ಲೆಕ್ಕಪತ್ರ ನಿರ್ವಹಣೆ ಮತ್ತು ನಿರ್ವಹಣೆ ವೃತ್ತಿಪರರ ನಿದರ್ಶನಗಳನ್ನು ನಾವು ಕಂಡುಕೊಂಡಿದ್ದೇವೆ" ಎಂದು ಐಟಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇದನ್ನೂ ಓದಿ: ಈ ಕಾರಣಕ್ಕಾಗಿ 10 ನಿಮಿಷಗಳಲ್ಲಿ ಕಂಪನಿಯ ಪ್ರಮುಖ ಉದ್ಯೋಗಿ ವಜಾ: Wipro ಬಾಸ್‌
 
ಸರಾಸರಿ 5 ಲಕ್ಷದಿಂದ 10 ಲಕ್ಷದವರೆಗೆ ಅಘೋಷಿತ ವಾರ್ಷಿಕ ಪಾವತಿಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಮೊದಲ ಹಂತದ ನೋಟಿಸ್‌ ಕಳಿಸಲಾಗಿದೆ. 2019 ರಿಂದ 2021 ರ ಆರ್ಥಿಕ ವರ್ಷಗಳಲ್ಲಿ, ಇಂತಹ ನಿದರ್ಶನಗಳು ಹೆಚ್ಚಾಗಿ ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ಉದ್ಯೋಗಿಗಳು ಪ್ಯಾನ್‌ ನಂಬರ್‌ ನೀಡಿಯೇ ಇಂತಹ ಅಭ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹಲವಾರು ಕಂಪನಿಗಳು ಐಟಿ ಇಲಾಖೆಗೆ ಮಾಹಿತಿ ನೀಡಿವೆ. ಎಂದೂ ತಿಳಿದುಬಂದಿದೆ.

ಈ ಮಧ್ಯೆ, 2021-22 ರ ಆರ್ಥಿಕ ವರ್ಷದ ಬಗ್ಗೆ ಐಟಿ ಇಲಾಖೆಯು ಇನ್ನೂ ಡೇಟಾವನ್ನು ವಿಶ್ಲೇಷಿಸದ ಕಾರಣ ಈ ವರ್ಷ ಇನ್ನೂ ನೋಟಿಸ್‌ ಕಳಿಸಿಲ್ಲ. ಈ ಹಿನ್ನೆಲೆ ಐಟಿ ನೋಟಿಸ್‌ಗಳ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. "ಜನರು ಮೂನ್‌ಲೈಟಿಂಗ್‌ಗಾಗಿ ತೆರಿಗೆ ನೋಟಿಸ್‌ಗಳನ್ನು ಪಡೆಯುತ್ತಿಲ್ಲ, ಆದರೆ ತಮ್ಮ ಆದಾಯವನ್ನು ತಪ್ಪಾಗಿ ಘೋಷಿಸಿದ್ದಕ್ಕಾಗಿ, ಕೆಲವು ಸಂದರ್ಭಗಳಲ್ಲಿ ಅವರು ತಮ್ಮ ಸಂಬಳದಿಂದ ಪಡೆಯುತ್ತಿದ್ದಕ್ಕಿಂತ ದುಪ್ಪಟ್ಟು ಹಣ ಪಡೆದರೂ ತೆರಿಗೆ ಪಾವತಿಸದ ಕಾರಣ ನೋಟಿಸ್‌ ಹೋಗಿದೆ" ಎಂದೂ ಹಿರಿಯ ಅಧಿಕಾರಿ ಹೇಳಿದರು. ಅಲ್ಲದೆ, ನಗದು ಪಾವತಿಗಳನ್ನು ಸಹ ತನಿಖೆ ಮಾಡಲಾಗುತ್ತಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Digital Indiaಗೆ ಥ್ಯಾಂಕ್ಸ್‌: ಪಿಎಫ್‌ನಿಂದಾಗಿ ಮೂನ್‌ಲೈಟಿಂಗ್ ಬಯಲು..!

ಸಾಂಕ್ರಾಮಿಕ ಸಮಯದಲ್ಲಿ, ಐಟಿ ವಲಯದಲ್ಲಿ ಮೂನ್‌ಲೈಟಿಂಗ್ ಜನಪ್ರಿಯವಾಯಿತು.

ಇದನ್ನೂ ಓದಿ: ಒಂದೇ ಸಮಯದಲ್ಲಿ 2 ಕಡೆ ಕೆಲಸ: Wipro 300 ಸಿಬ್ಬಂದಿ ವಜಾ

click me!