Money Tips:ಆದಷ್ಟು ಬೇಗ ಹಣ ಮಾಡಿ, ಆರ್ಥಿಕ ಸ್ವಾತಂತ್ರ್ಯ ಗಳಿಸಲು ಬಯಸಿದ್ದೀರಾ? ಈ 7 ಟಿಪ್ಸ್ ಫಾಲೋ ಮಾಡಿ..

By Suvarna News  |  First Published Oct 9, 2023, 3:41 PM IST

ಆದಷ್ಟು ಬೇಗ ಹಣ ಗಳಿಸಿ ಆರ್ಥಿಕ ಸ್ವಾತಂತ್ರ್ಯ ಗಳಿಸಬೇಕು ಎಂಬ ಬಯಕೆ ಇಂದು ಹೆಚ್ಚುತ್ತಿದೆ. ಹಾಗಾದ್ರೆ ಈ ಆರ್ಥಿಕ ಸ್ವಾತಂತ್ರ್ಯ ಗಳಿಸಲು ಏನ್ ಮಾಡ್ಬೇಕು? ಈ 7 ಟಿಪ್ಸ್ ಅನುಸರಿಸಿ. 


Business Desk:ಆರ್ಥಿಕ ಸ್ವಾತಂತ್ರ್ಯ ಹೊಂದಬೇಕು ಎಂಬುದು ಅನೇಕರ ಕನಸಾಗಿರುತ್ತದೆ. ಆದರೆ, ಈ ಆರ್ಥಿಕ ಸ್ವಾತಂತ್ರ್ಯ ಹೊಂದೋದು ಅಷ್ಟು ಸುಲಭದ ಕೆಲಸನಾ? ಖಂಡಿತಾ ಅಲ್ಲ. ಆರ್ಥಿಕ ಸ್ವಾತಂತ್ರ್ಯ ಅನ್ನೋದು ನಿಮ್ಮ ಹಣಕಾಸಿನ ಮೇಲೆ ನೀವು ಸಾಧಿಸುವ ಹಿಡಿತ. ಸಾಲವನ್ನು ತಗ್ಗಿಸಿಕೊಂಡು, ಉಳಿತಾಯ ಹೆಚ್ಚಿಸಿಕೊಂಡು ಆರ್ಥಿವಾಗಿ ಸುರಕ್ಷಿತರಾಗಿರೋದು. ಆದರೆ, ಬಹುತೇಕರಿಗೆ ಈ ಆರ್ಥಿಕ ಸ್ವಾತಂತ್ರ್ಯ ಸಾಧಿಸೋದು ಹೇಗೆ ಎಂಬುದು ತಿಳಿದಿರೋದಿಲ್ಲ. ಇದು ತಕ್ಷಣಕ್ಕೆ ಆಗುವ ಕೆಲಸ ಕೂಡ ಅಲ್ಲ. ಕೈಯಲ್ಲಿ ಒಂದಿಷ್ಟು ಕಾಸು ಬಂದ ತಕ್ಷಣ ಅದನ್ನು ಆರ್ಥಿಕ ಸ್ವಾತಂತ್ರ್ಯ ಎಂದು ಹೇಳಲು ಕೂಡ ಸಾಧ್ಯವಿಲ್ಲ. ಆರ್ಥಿಕ ಸ್ವಾತಂತ್ರ್ಯ ಅನ್ನೋದು ದೀರ್ಘಾವಧಿಯ ಪ್ರಕ್ರಿಯೆ. ಇದಕ್ಕೆ ಸಾಕಷ್ಟು ತಯಾರಿ ಅಗತ್ಯ. ಹಾಗಾದ್ರೆ ಹಣಕಾಸಿನ ವಿಚಾರದಲ್ಲಿ ನಾವು ಸ್ವತಂತ್ರರಾಗೋದು ಹೇಗೆ? ಇದಕ್ಕಾಗಿ ಏನು ಮಾಡ್ಬೇಕು? ಇಲ್ಲಿದೆ ಟಿಪ್ಸ್.

1. ಗುರಿ ನಿಗದಿಪಡಿಸಿ: ಆರ್ಥಿಕ ಸ್ವಾತಂತ್ರ್ಯ ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಒಬ್ಬರಿಗೆ ಅದು ಸಾಲದಿಂದ ಮುಕ್ತರಾಗೋದು ಆಗಿರಬಹುದು. ಇನ್ನೊಬ್ಬರಿಗೆ ಬೇಗ ನಿವೃತ್ತಿಯಾಗೋದು ಆಗಿರಬಹುದು. ಮತ್ತೊಬ್ಬರಿಗೆ ಉದ್ಯೋಗಕ್ಕೆ ರಾಜೀನಾಮೆ ನೀಡಿ ಉದ್ಯಮ ಪ್ರಾರಂಭಿಸೋದು ಆಗಿರಬಹುದು. ಹೀಗಾಗಿ ನಿಮ್ಮ ಆರ್ಥಿಕ ಗುರಿ ಏನು ಎಂಬುದನ್ನು ಮೊದಲು ನಿರ್ಧರಿಸಿ. ಆಗ ಮಾತ್ರ ಆ ನಿಟ್ಟಿನಲ್ಲಿ ಸೂಕ್ತ ಹೆಜ್ಜೆಗಳನ್ನಿಡಲು ಸಾಧ್ಯವಾಗುತ್ತದೆ. ಗುರಿ ನಿಗದಿಯಾದ ಬಳಿಕ ಅದಕ್ಕಾಗಿಯೇ ಉಳಿತಾಯ ಮಾಡಲು ಪ್ರಾರಂಭಿಸಿ. 

Tap to resize

Latest Videos

ಶ್ರೀಮಂತರಾದ್ರೂ ಬೇಕಾಬಿಟ್ಟಿ ಖರ್ಚು ಮಾಡೋಲ್ಲ, ಇವನ್ನು ಮಾಡ್ಬೇಡಿ ಅಂತಾರೆ!

2.ಹಾಸಿಗೆ ಇದ್ದಷ್ಟೇ ಕಾಲು ಚಾಚಿ: ನೀವು ಗಳಿಕೆ ಮಾಡಿದ್ದಕ್ಕಿಂತ ಕಡಿಮೆ ಖರ್ಚು ಮಾಡೋದು ಅತ್ಯಗತ್ಯ. ಆಗ ಮಾತ್ರ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಆದರೆ, ಕೆಲವರಿಗೆ ಇದು ಕಷ್ಟದ ಕೆಲಸ ಕೂಡ ಹೌದು. ತಿಂಗಳ ಆದಾಯವನ್ನು ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡೋರು ಕೂಡ ಇದ್ದಾರೆ. ಕಂಡಿದ್ದನ್ನೆಲ್ಲ ಖರೀದಿಸುವ ಮನೋಭಾವ ಹೊಂದಿದ್ದರೆ ಉಳಿತಾಯ ಮಾಡೋದು ಕಷ್ಟವಾಗುತ್ತದೆ. ಅಲ್ಲದೆ, ಕೆಲವು ಕಷ್ಟದ ಸಂದರ್ಭಗಳಲ್ಲಿ ಸಾಲ ಕೂಡ ಮಾಡಬೇಕಾಗಬಹುದು. ಹೀಗಾಗಿ ಅದೆಷ್ಟೇ ಕಷ್ಟವಾದರೂ ಆದಾಯದ ಒಂದು ಸಣ್ಣ ಭಾಗವನ್ನು ಉಳಿತಾಯ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ನಿಮ್ಮ ತಿಂಗಳ ವೇತನದಲ್ಲಿ ಕನಿಷ್ಠ ಶೇ.10-20ರಷ್ಟು ಉಳಿತಾಯ ಮಾಡಿದರೆ ಸಾಕು, ಸುಲಭವಾಗಿ ನಿಮ್ಮ ಗುರಿ ತಲುಪಬಹುದು. 

3.ತುರ್ತು ನಿಧಿ ನಿರ್ವಹಿಸಿ: ಹಣಕಾಸಿನ ಮುಗ್ಗಟ್ಟು ಯಾವ ರೂಪದಲ್ಲಿ ಬೇಕಾದರೂ ಎದುರಾಗಬಹುದು. ಹೀಗಾಗಿ ಇಂಥ ಕಷ್ಟದ ಸಂದರ್ಭಗಳನ್ನು ಎದುರಿಸಲು ತುರ್ತು ನಿಧಿಯನ್ನು ನಿರ್ವಹಣೆ ಮಾಡೋದು ಅಗತ್ಯ. ಈ ನಿಧಿ ಕನಿಷ್ಠ 6 ತಿಂಗಳ ನಿಮ್ಮ ವೆಚ್ಚವನ್ನು ನಿರ್ವಹಿಸುವಷ್ಟು ಇರಬೇಕು. 

4.ಆದಾಯದ ಮೂಲ ಹೆಚ್ಚಿಸಿಕೊಳ್ಳಿ: ಒಂದೇ ಆದಾಯದ ಮೂಲವನ್ನು ಅವಲಂಬಿಸಿರೋದು ಅಪಾಯಕಾರಿ. ಹೀಗಾಗಿ ನಿಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಿ. ರಿಯಲ್ ಎಸ್ಟೇಟ್, ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡೋದ್ರಿಂದ ಅಥವಾ ಉದ್ಯೋಗದ ಜೊತೆಗೆ ಸಣ್ಣ ಉದ್ಯಮ ಪ್ರಾರಂಭಿಸುವ ಮೂಲಕ ಕೂಡ ನೀವು ನಿಮ್ಮ ಆದಾಯ ಹೆಚ್ಚಿಸಿಕೊಳ್ಳಬಹುದು. ಈ ರೀತಿ ಆದಾಯದ ಮೂಲವನ್ನು ಹೆಚ್ಚಿಸಿಕೊಂಡಾಗ ಹಣಕಾಸಿನ ಅಭದ್ರತೆಯ ಅಪಾಯ ತಗ್ಗುತ್ತದೆ. 

ಮೂರು ವರ್ಷದಲ್ಲಿ 50 ಲಕ್ಷ ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ನೆರವಾದ ಪಿಎಂ ಸ್ವನಿಧಿ ಯೋಜನೆ

5.ಸಾಲ ತಗ್ಗಿಸಿಕೊಳ್ಳಿ: ಹಣಕಾಸಿನ ಸ್ವಾತಂತ್ರ್ಯ ಸಾಧಿಸಲು ಸಾಲ ದೊಡ್ಡ ತೊಡಕಾಗಿ ಕಾಡುತ್ತದೆ. ಹೀಗಾಗಿ ನಿಮ್ಮ ಸಾಲವನ್ನು ವ್ಯವಸ್ಥಿತವಾಗಿ ಪಾವತಿಸಿ. ಪ್ರವಾಸಕ್ಕೆ ತೆರಳಲು ಅಥವಾ  ಮೊಬೈಲ್ ಫೋನ್ ಸೇರಿದಂತೆ ದುಬಾರಿ ವಸ್ತುಗಳ ಖರೀದಿಗೆ ಸಾಲ ಮಾಡೋದನ್ನು ತಪ್ಪಿಸಿ. 

6.ಜಾಣತನದಿಂದ ಹೂಡಿಕೆ ಮಾಡಿ: ಆದಾಯವನ್ನು ಹೆಚ್ಚಿಸಿಕೊಳ್ಳಲು ಇರುವ ಪರಿಣಾಮಕಾರಿ ವಿಧಾನಗಳಲ್ಲಿ ಹೂಡಿಕೆ ಕೂಡ ಒಂದು. ಹೀಗಾಗಿ ವಿವಿಧ ಹೂಡಿಕೆ ಆಯ್ಕೆಗಳ ಬಗ್ಗೆ ತಿಳಿಯಿರಿ ಹಾಗೂ ನಿಮಗೆ ಸೂಕ್ತವೆನಿಸುವ ಯೋಜನೆಗಳಲ್ಲಿ ಹೂಡಿಕೆ ಮಾಡಿ. 

7.ಹಣಕಾಸು ಶಿಸ್ತು ಅಳವಡಿಸಿಕೊಳ್ಳಿ: ವೈಯಕ್ತಿಕ ಹಣಕಾಸಿನ ಬಗ್ಗೆ ಎಚ್ಚರ ವಹಿಸಿ. ಹೀಗಾಗಿ ಹಣಕಾಸಿನ ಯೋಜನೆಗಳು, ಹೂಡಿಕೆಗಳು ಹಾಗೂ ತೆರಿಗೆಯ ಮೂಲತತ್ವಗಳ ಬಗ್ಗೆ ತಿಳಿದುಕೊಳ್ಳಿ. ಹಾಗೆಯೇ ಹಣಕಾಸಿನ ಶಿಸ್ತನ್ನು ರೂಢಿಸಿಕೊಳ್ಳಿ. ಇದಕ್ಕಾಗಿ ನಿರಂತರವಾಗಿ ಉಳಿತಾಯ, ಹೂಡಿಕೆ ಹಾಗೂ ಅನಗತ್ಯ ಸಾಲಗಳನ್ನು ನಿರ್ಲಕ್ಷಿಸಿ. 

click me!