ಅಂಬಾನಿಗೆ Z+ ಸೆಕ್ಯುರಿಟಿ ನೀಡುವ ಬಗ್ಗೆ ಮಹತ್ವದ ಆದೇಶ!

Published : Oct 28, 2020, 04:36 PM IST
ಅಂಬಾನಿಗೆ  Z+ ಸೆಕ್ಯುರಿಟಿ ನೀಡುವ ಬಗ್ಗೆ ಮಹತ್ವದ ಆದೇಶ!

ಸಾರಾಂಶ

ಸುಪ್ರೀಂ ಕೋರ್ಟ್ ಮಂಗಳವಾರ ಅಂಬಾನಿ ಸಹೋದರರಾದ ಮುಕೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿಯಿಂದ ಝಡ್ ಪ್ಲಸ್ ಸೆಕ್ಯುರಿಟಿ| ಸೆಕ್ಯುರಿಟಿ ಹಿಂಪಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ರದ್ದು|  ಬಾಂಬೆ ಹೈಕೋರ್ಟ್ ನೀಡಿದ್ದ ವಿವರಣೆಯನ್ನೂ ಸಮರ್ಥಿಸಿದ ಸುಪ್ರೀಂ ಕೋರ್ಟ್

ನವದೆಹಲಿ(ಅ.28): ಸುಪ್ರೀಂ ಕೋರ್ಟ್ ಮಂಗಳವಾರ ಅಂಬಾನಿ ಸಹೋದರರಾದ ಮುಕೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿಯಿಂದ ಝಡ್ ಪ್ಲಸ್ ಸೆಕ್ಯುರಿಟಿ ಹಿಂಪಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ರದ್ದುಗೊಳಿಸಿದೆ. ಅಲ್ಲದೇ ಯಾರ ಜೀವಕ್ಕೆ ಅಪಾಯವಿದೆಯೋ ಹಾಗೂ ಯಾರಿಗೆ ತಮ್ಮ ಭದ್ರತೆಯ ಖರ್ಚು ಪಾವತಿಸಲು ತಯಾರಿದ್ದಾರೋ ಅವರಿಗೆ ಉನ್ನತ ಮಟ್ಟದ ಭದ್ರತೆ ನೀಡುವುದು ಸರಿ ಎಂದು  ಬಾಂಬೆ ಹೈಕೋರ್ಟ್ ನೀಡಿದ್ದ ವಿವರಣೆಯನ್ನೂ ಸಮರ್ಥಿಸಿದೆ. ಇನ್ನು ಅರ್ಜಿ ಸಲ್ಲಿಸಿದ್ದ ವ್ಯಕ್ತಿ ಅಂಬಾನಿ ಸಹೋದರರು ತಮ್ಮ ಸ್ವಂತ ಹಣದಲ್ಲಿ ತಮ್ಮ ರಕ್ಷಣೆ ಮಾಡಲು ಸಮರ್ಥರಾಗಿದ್ದಾರೆಂಬ ಕಾರಣ ನೀಡಿ ಅರ್ಜಿ ಸಲ್ಲಿಸಿದ್ದರು.

ಬಾಂಬೆ ಹೈಕೋರ್ಟ್ ಈ ಸಂಬಂಧ ನೀಡಿದ್ದ ತೀರ್ಪಿನಲ್ಲಿ ಕಾನೂನು ಗಟ್ಟಿಯಾಗಿದೆ ಎಂಬುವುದು ಖಾತ್ರಿಪಡಿಸಿಕೊಳ್ಳುವುದು ರಾಜ್ಯದ ಜವಾಬ್ದಾರಿಯಾಗಿದೆ. ಹೀಗಿರುವಾಗ ಯಾರ ಜೀವಕ್ಕೆ ಅಪಾಆಯವಿದೆಯೋ ಅಂತಹ ನಾಗರಿಕರಿಗೆ ಭದ್ರತೆ ಒದಗಿಸುವುದೂ ಇದರಲ್ಲಿ ಶಾಮೀಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ರೆವೆನ್ಯೂ ಭಾರತದ ಜಿಡಿಪಿ ಪ್ರಭಾವ ಬಹಳಷ್ಟಿದೆ. ಇಂತಹವರ ಜೀವಕ್ಕೆ ಅಪಾಯವಿದೆ ಎಂಬುವುದನ್ನು ಸಾಮಾನ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದಿತ್ತು.

ಸುಪ್ರೀಂನಿಂದ ಅನೇಕ ಗಂಭೀರ ಪ್ರಶ್ನೆಗಳು

ಅಂಬಾನಿ ಸಹೋದರರ ಪರ ಕೋರ್ಟ್‌ನಲ್ಲಿ ವಾದಿಸಿದ ಹಿರಿಯ ವಕೀಲ ಮುಕುಲ್ ರೋಹ್ತಗಿ ಇಬ್ಬರೂ ಉದ್ಯಮಿ ಸಹೋದರರು ಹಾಗೂ ಅವರ ಕುಟುಂಬದವರಿಗೆ ಅಪಾಯವಿದೆ. ಅಲ್ಲದೇ ನಾವು ಸರ್ಕಾರದಿಂದ ಸಿಕ್ಕ ಭದ್ರತೆಗೆ ಹಣ ಪಾವತಿಸುತ್ತಿದ್ದೇವೆ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಸುಪ್ರೀಂ ಕೋರ್ಟ್‌ ಹಾಗಾದ್ರೆ ಜೀವಕ್ಕೆ ಅಪಾಯವಿರುವ ಹಾಗೂ ಸರ್ಕಾರ ನೀಡುವ ಭದ್ರತೆಗೆ ಹಣ ಪಾವತಿಸಲು ಕ್ಷಮತೆ ಇರುವ ಪ್ರತಿಯೊಬ್ಬರಿಗೂ ಭದ್ರತೆ ನಿಡಬೇಕಾ ಎಂದು ಕೇಳಿದೆ. 

ಮನಮೋಹನ್ ಸರ್ಕಾರವಿದ್ದಾಗ ಅಂಬಾನಿಗೆ ಸಿಕ್ಕಿತ್ತು ಭದ್ರತೆ:

ಇನ್ನು 2013ರಲ್ಲಿ ಮುಕೇಶ್ ಅಂಬಾನಿಗೆ ಝಡ್ ಪ್ಲಸ್ ಸೆಕ್ಯುರಿಟಿ ನೀಡುವ ವಿಚಾರ ಭಾರೀ ಸದ್ದು ಮಾಡಿತ್ತು. ಅಂದು ಸುಪ್ರೀಂ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗೆ ಇಂತಹ ಭದ್ರತೆ ನೀಡುವ ಬಗ್ಗೆ ಅಂದಿನ ಮನಮೋಹನ್ ಸರ್ಕಾರಕ್ಕೆ ಪ್ರಶ್ನೆಗಳನ್ನೆಸೆದಿತ್ತು. ಅಂದು ಸುಪ್ರೀಂ ಅಂಬಾನಿಗೆ ಝಡ್ ಪ್ಲಸ್ ಸೆಕ್ಯುರಿಟಿ ಯಾಕೆ ನೀಡಬೇಕು? ಇಂದಿನ ಪರಿಸ್ಥಿತಿಯಲ್ಲಿ ಸಾಮಾನ್ಯ ವ್ಯಕ್ತಿಗೂ ಜೀವದ ಅಪಾಯವಿರುತ್ತದೆಯಲ್ಲವೇ? ಎಂದು ಪ್ರಶ್ನಿಸಿತ್ತು. ಅಲ್ಲದೇ ಅಷ್ಟೊಂದು ಅಅಪಾಯವಿದೆ ಎಂದರೆ ಖಾಸಗಿ ಏಜೆನ್ಸಿಗಳ ಸೇವೆ ಪಡೆಯಬಹುದೆಂದಿತ್ತು. 

ಪಂಜಾಬ್‌ನಲ್ಲಿ ಖಾಸಗಿ ಉದ್ಯಮಿಗಳಿಗೆ ಭದ್ರತೆ ಒದಗಿಸುವ ವ್ಯವಸ್ಥೆ ಇತ್ತು. ಆದರೀಗ ಈ ಸಂಸ್ಕೃತಿ ಮುಂಬೈವರೆಗೆ ತಲುಪಿದೆ. ಹೀಗಿರುವಾಗ ಸುಪ್ರಿಂ ಕೋರ್ಟ್ ಒಬ್ಬ ವ್ಯಕ್ತಿಗೆ ಭದ್ರತೆ ಒದಗಿಸುವ ಸಂಬಂಧ ಯಾವುದೇ ತಕರಾರಿಲ್ಲ. ಆದರೆ ಸಾಮಾನ್ಯ ಜನರ ಸುರಕ್ಷತೆ ಕತೆ ಏನೆಂಬುವುದಷ್ಟೇ ನಮ್ಮ ಚಿಂತೆ ಎಂದಿತ್ತು. ಹೀಗಿರುವಾಗ ಸುಪ್ರೀಂ ಅಂತಿಮವಾಗಿ ಅಂಬಾನಿ ಈ ಭದ್ರತೆಯ ಖರ್ಚು ಖುದ್ದು ನೀಡಲಿದ್ದಾರೆ ಎಂದು ಸ್ಪಷ್ಟನೆ ನೀಡಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ
YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ