
ನವದೆಹಲಿ (ಮಾ.11): ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ಫೋಸಿಸ್‌ನ ಪ್ರತಿಸ್ಪರ್ಧಿಯಾಗಿರುವ ಟೆಕ್ ಮಹೀಂದ್ರಾ ಕಂಪನಿಯನ್ನು ಇವರು ಸೇರಿಕೊಳ್ಳಲಿದ್ದಾರೆ. ಎರಡೂ ಕಂಪನಿಗಳ ಸ್ಟಾಕ್ ಎಕ್ಸ್‌ಚೇಂಜ್‌ಗೆ ನೀಡಿರುವ ಮಾಹಿತಿಯಲ್ಲಿ ಈ ವಿಚಾರ ತಿಳಿಸಿದೆ. 2000 ಇಸವಿಯಿಂದ ಇನ್ಫೋಸಿಸ್ ಕಂಪನಿಯ ಭಾಗವಾಗಿದ್ದ ಮೋಹಿತ್ ಜೋಶಿ, ಟೆಕ್ ಮಹೀಂದ್ರಾ ಕಂಪನಿಯ ನೂತನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ವ್ಯವಸ್ಥಾಪಕ ಅಧಿಕಾರಿಯಾಗಿ ಸೇರಲಿದ್ದಾರೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ನೀಡಿದ ಮಾಹಿತಿಯಲ್ಲಿ, ಮೋಹಿತ್ ಜೋಶಿ ಮಾರ್ಚ್ 11 ರಿಂದ ರಜೆಯಲ್ಲಿರುತ್ತಾರೆ ಮತ್ತು 2023ರ ಜೂನ್ 9 ಅವರಿಗೆ ಕಂಪನಿಯಲ್ಲಿ ಕೊನೆಯ ದಿನವಾಗಿರಲಿದೆ ಎಂದು ಇನ್ಫೋಸಿಸ್ ಕಂಪನಿ ತಿಳಿಸಿದೆ."ಮುಂದಿನ ಪೀಳಿಗೆಯ ಡಿಜಿಟಲ್ ಸೇವೆಗಳು ಮತ್ತು ಕನ್ಸಲ್ಟಿಂಗ್‌ನಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಇಂದು ಅಧ್ಯಕ್ಷ ಮೋಹಿತ್ ಜೋಶಿ ಅವರ ರಾಜೀನಾಮೆಯನ್ನು ಘೋಷಿಸಿತು. 2023ರ ಮಾರ್ಚ್ 11 ರಿಂದ ಅವರು ರಜೆಯಲ್ಲಿರುತ್ತಾರೆ ಮತ್ತು ಕಂಪನಿಯೊಂದಿಗೆ ಅವರ ಕೊನೆಯ ದಿನಾಂಕ 2023ರ ಜೂನ್ 09 ಆಗಿರುತ್ತದೆ. ನಿರ್ದೇಶಕ ಮಂಡಳಿಯು ಮೋಹಿತ್ ಜೋಶಿ ಅವರು ಸಲ್ಲಿಸಿದ ಸೇವೆಗಳಿಗೆ ಮತ್ತು ಕಂಪನಿಗೆ ಅವರ ಕೊಡುಗೆಗಳಿಗಾಗಿ ಅಪಾರ ಮೆಚ್ಚುಗೆಯನ್ನು ಗಳಿಸಿದ್ದರು. ನಿಮ್ಮ ಮಾಹಿತಿ ಮತ್ತು ದಾಖಳೆಗಾಗಿ ಇದನ್ನು ತಿಳಿಸುತ್ತಿದ್ದೇವೆ"ಎಂದು ಪ್ರಕಟಣೆಯಲ್ಲಿ ಹೇಳಿದೆ.
ಅಧ್ಯಕ್ಷರಾಗಿ, ಮೋಹಿತ್ ಜೋಶಿ ಅವರು ಇನ್ಫೋಸಿಸ್‌ನಲ್ಲಿ ಹಣಕಾಸು ಸೇವೆಗಳು ಮತ್ತು ಆರೋಗ್ಯ/ಜೀವ ವಿಜ್ಞಾನ ವ್ಯವಹಾರಗಳನ್ನು ನಿರ್ವಹಣೆ ಮಾಡಿದ್ದರು.. ಅವರು ಎಡ್ಜ್‌ವರ್ವ್ ಸಿಸ್ಟಮ್ಸ್ ಲಿಮಿಟೆಡ್‌ನ ಅಧ್ಯಕ್ಷರೂ ಆಗಿದ್ದರು ಮತ್ತು ಸಂಸ್ಥೆಯ ಸಾಫ್ಟ್‌ವೇರ್ ವ್ಯವಹಾರವನ್ನು ಮುನ್ನಡೆಸಿದರು, ಇದು ಅದರ ಜಾಗತಿಕ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್, ಫಿನಾಕಲ್ ಅನ್ನು ಒಳಗೊಂಡಿದೆ. ಮೋಹಿತ್ ಜೋಶಿ ಅವರನ್ನು 2014 ರಲ್ಲಿ ವರ್ಲ್ಡ್ ಎಕನಾಮಿಕ್ ಫೋರಮ್‌ನಲ್ಲಿ ಗ್ಲೋಬಲ್ ಯಂಗ್ ಲೀಡರ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಅವರು ಬ್ರಿಟಿಷ್ ಇಂಡಸ್ಟ್ರಿ ಒಕ್ಕೂಟದ ಆರ್ಥಿಕ ಬೆಳವಣಿಗೆಯ ಮಂಡಳಿಯ ಉಪಾಧ್ಯಕ್ಷರಾಗಿದ್ದಾರೆ ಮತ್ತು ಯುವ ಅಧ್ಯಕ್ಷರ ಸಂಘಟನೆಯ ಸದಸ್ಯರಾಗಿದ್ದಾರೆ.
ದೆಹಲಿ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದಿರುವ ಜೋಶಿ ಅವರು ಈ ಹಿಂದೆ ಎಎನ್‌ಝಡ್ ಗ್ರಿಂಡ್ಲೇಸ್ ಮತ್ತು ಎಬಿಎನ್ ಆಮ್ರೋ ನೊಂದಿಗೆ ತಮ್ಮ ಕಾರ್ಪೊರೇಟ್ ಮತ್ತು ಹೂಡಿಕೆ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದಾರೆ. ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.