ಮೋದಿ ಪ್ಲ್ಯಾನ್ ಚೇಂಜ್: ರೈತರಿಗೆ 2 ಸಾವಿರ ರೂ. ಬದಲಿಗೆ....!

By Web DeskFirst Published Feb 14, 2019, 4:00 PM IST
Highlights

ಲೋಕ ಸಮರಕ್ಕೆ ಮುನ್ನ ಮೋದಿ ಸರ್ಕಾರದ ಪ್ಲ್ಯಾನ್ ಚೇಂಜ್| ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ನೀತಿಯಲ್ಲಿ ಬದಲಾವಣೆ| ಕಂತಿನ ಪ್ರಮಾಣ ಕಡಿತಗೊಳಿಸಿದ ಕೇಂದ್ರ ಸರ್ಕಾರ| ಮೊದಲ ಕಂತಿನಲ್ಲೇ 4 ಸಾವಿರ ರೂ. ಪಾವತಿಸಲು ಮುಂದಾದ ಕೇಂದ್ರ|

ನವದೆಹಲಿ(ಫೆ.14): ಕೇಂದ್ರದ ಮಧ್ಯಂತರ ಬಜೆಟ್ ಮಂಡನೆಯಾಗಿ ಈಗಿನ್ನೂ 14 ದಿನಗಳು ಸಂದಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದಾಗಲೇ ಬಜೆಟ್ ನಲ್ಲಿ ಘೋಷಿಸಿದ್ದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ನೀತಿಯಲ್ಲಿ ಬದಲಾವಣೆ ತಂದಿದೆ.

ಹಾಗಂತ ಮೋದಿ ಸರ್ಕಾರ ರೈತರಿಗೆ ಹಣ ನೀಡಲ್ಲ ಎಂದು ಭಾವಿಸಬೇಕಿಲ್ಲ. ಬದಲಿಗೆ ಈ ಮೊದಲಿದ್ದ ಕಂತಿನ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಹೌದು, ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ, ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯಲು ಮುಂದಾಗಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅನ್ವಯ ಸಣ್ಣ ಮತ್ತು ಮಧ್ಯಮ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ಸಿಗಲಿದೆ. ಈ ಹಣವನ್ನು 2 ಸಾವಿರ ರೂ.ನಂತೆ ಒಟ್ಟು ಮೂರು ಕಂತಿನಲ್ಲಿ ನೇರವಾಗಿ ರೈತರ ಖಾತೆಗೆ ಪಾವತಿಸಲು ಕೇಂದ್ರ ಸರ್ಕಾರ ಮುಂದಾಗಿತ್ತು.

ಆದರೆ ಇದೀಗ ಕಂತಿನ ಪ್ರಮಾಣ ಕಡಿಮೆ ಮಾಡಿರುವ ಕೇಂದ್ರ ಸರ್ಕಾರ, ಎರಡೇ ಕಂತಿನಲ್ಲಿ 6 ಸಾವಿರ ರೂ. ಹಣ ನೀಡಲು ಮುಂದಾಗಿದೆ. ಅಲ್ಲದೇ ಮೊದಲ ಕಂತಿನಲ್ಲೇ 4 ಸಾವಿರ ರೂ. ಪಾವತಿಸಲು ಸಜ್ಜಾಗಿದೆ.

ಉಳುವಾ ಯೋಗಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್: 6 ಸಾವಿರ ಸಹಾಯಧನ!

click me!