ನೀರವ್ ಮೋದಿ ಬಂಧನಕ್ಕೆ ವಿದೇಶಾಂಗ ಇಲಾಖೆ ಬಲೆ, 3 ರಾಷ್ಟ್ರಗಳಿಗೆ ಪತ್ರ!

First Published Jun 27, 2018, 4:17 PM IST
Highlights

ನೀರವ್ ಬಂಧನಕ್ಕೆ ಬಲೆ ಬೀಸಿದ ವಿದೇಶಾಂಗ ಇಲಾಖೆ

ಸಹಕಾರ ಕೋರಿ 3 ಯೂರೋಪಿಯನ್ ರಾಷ್ಟ್ರಗಳಿಗೆ ಪತ್ರ

ನೀರವ್ ಮೋದಿ ಯೂರೋಪ್ ನಲ್ಲಿರುವ ಸಾಧ್ಯತೆ ಶಂಕೆ

ಫ್ರಾನ್ಸ್, ಬ್ರಿಟನ್, ಬೆಲ್ಜಿಯಂ ರಾಷ್ಟ್ರಗಳಿಗೆ ಪತ್ರ ರವಾನೆ

ನವದೆಹಲಿ(ಜೂ.27): ಭಾರತೀಯ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆಭರಣ ಉದ್ಯಮಿ ನೀರವ್ ಮೋದಿ ಬಂಧನಕ್ಕಾಗಿ ಕೇಂದ್ರ ವಿದೇಶಾಂಗ ಇಲಾಖೆ ಬಲೆ ಬೀಸಿದೆ.

ನೀರವ್ ಬಂಧನಕ್ಕೆ ನೆರವು ಕೋರಿ ವಿದೇಶಾಂಗ ಇಲಾಖೆ ಮೂರು ರಾಷ್ಟ್ರಗಳಿಗೆ ಪತ್ರ ಬರೆದಿದೆ. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಮೂಲಗಳ ಪ್ರಕಾರ ಉದ್ಯಮಿ ನೀರವ್ ಮೋದಿ ಯೂರೋಪಿಯನ್ ದೇಶಗಳಲ್ಲಿ ತಲೆಮರೆಸಿಕೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಯೂರೋಪ್ ನ ಮೂರು ರಾಷ್ಟ್ರಗಳಿಗೆ ಕೇಂದ್ರ ವಿದೇಶಾಂಗ ಇಲಾಖೆ ಪತ್ರ ಬರೆದಿದೆ.

ಉದ್ಯಮಿ ನೀರವ್ ಮೋದಿ ಕುರಿತಂತೆ ಭಾರತೀಯ ತನಿಖಾ ಸಂಸ್ಥೆಗಳು ನಡೆಸುತ್ತಿರುವ ತನಿಖೆಗೆ ನೆರವು ನೀಡಬೇಕು ಮನವಿ ಮಾಡಿಕೊಂಡಿದೆ. ಈ ಸಂಬಂಧ ಕಳೆದ ವಾರವೇ ಫ್ರಾನ್ಸ್, ಬ್ರಿಟನ್ ಮತ್ತು ಬೆಲ್ಜಿಯಂ ಸರ್ಕಾರಗಳಿಗೆ ಪತ್ರ ಬರೆದಿದ್ದು, ನೀರವ್ ಮೋದಿ ಕುರಿತ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದೆ.

ಈಗಾಗಲೇ ಭಾರತೀಯ ತನಿಖಾ ಸಂಸ್ಥೆಗಳ ಬ್ರಿಟನ್ ನಲ್ಲಿ ತನಿಖೆ ನಡೆಸುತ್ತಿದ್ದು, ಲಂಡನ್ ನೀರವ್ ಮೋದಿ ತಲೆಮರೆಸಿಕೊಂಡಿರುವ ಕುರಿತು ಈ ಹಿಂದೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ನೀರವ್ ಮೋದಿ ವಿರುದ್ಧ ಕೋರ್ಟ್ ನಿಂದ ಜಾಮೀನು ರಹಿತ ವಾರಂಟ್ ಜಾರಿ ಮಾಡಿಸಿದ್ದವು. 

click me!