ರುಪೇ, ಭೀಮ್ ಬಳಕೆದಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ!

By Web DeskFirst Published Aug 4, 2018, 8:22 PM IST
Highlights

ಡಿಜಿಟಲ್ ಬ್ಯಾಂಕಿಂಗ್ ಉತ್ತೇಜನಕ್ಕೆ ಕ್ರಮ! ರುಪೇ, ಭೀಮ್ ಬಳಕೆದಾರರಿಗೆ ಸಿಹಿ ಸುದ್ದಿ! ಜಿಎಸ್‌ಟಿ ಯ ಶೇ. 20 ರಷ್ಟು ಕ್ಯಾಶ್ ಬ್ಯಾಕ್! ವಿತ್ತ ಸಚಿವ ಪಿಯೂಷ್ ಗೋಯಲ್ ಮಾಹಿತಿ! ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ

ನವದೆಹಲಿ(ಆ.4):ರುಪೇ, ಭೀಮ್ ಮತ್ತು ಯುಎಸ್‌ಎಸ್‌ಡಿ ಮೂಲಕ ವ್ಯವಹಾರ ನಡೆಸುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ನವದೆಹಲಿಯಲ್ಲಿ ಇಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, ರುಪೇ, ಭೀಮ್ ಮತ್ತು ಯುಎಸ್ಎಸ್‌ಡಿ ಮೂಲಕ ವ್ಯವಹಾರ ನಡೆಸುವವರಿಗೆ ಜಿಎಸ್‌ಟಿಯ ಶೇ.20 ರಷ್ಟು ಕ್ಯಾಶ್ ಬ್ಯಾಕ್ ನೀಡಲು ನಿರ್ಧರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಕೇಂದ್ರ ವಿತ್ತ ಸಚಿವ ಪಿಯೂಷ್ ಗೋಯಲ್, ಡಿಜಿಟಲ್ ಬ್ಯಾಂಕಿಂಗ್ ಗೆ ಉತ್ತೇಜನ ನೀಡಲು ರುಪೇ ಡೆಬಿಟ್ ಕಾರ್ಡ್, ಭೀಮ್  ಮತ್ತು ಯುಎಸ್‌ಎಸ್‌ಡಿಗಳ ಮೂಲಕ ವ್ಯವಹಾರ ನಡೆಸಿದೆ ಜಿಎಸ್ ಟಿಯ ಶೇ. 20 ರಷ್ಟು ಕ್ಯಾಶ್ ಬ್ಯಾಕ್ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ತಿಳಿಸಿದ್ದಾರೆ.

रूपे डेबिट कार्ड, भीम, USSD आदि द्वारा किये गये ट्रांसेक्शन के लिये गरीब वर्ग को सुविधा दी जायेगी कि यदि वह डिजिटल पेमेंट कर के वस्तु खरीदेंगे, तो उसमें GST का 20% कैशबैक के रूप में उपभोक्ता को मिले :

— Piyush Goyal Office (@PiyushGoyalOffc)

ಆದರೆ ಈ ವ್ಯವಸ್ಥೆ ಸದ್ಯ ದೇಶದ ಕೆಲವೇ ರಾಜ್ಯಗಳಿಗೆ ಸಿಮೀತವಾಗಿರಲಿದ್ದು, ಹಂತ ಹಂತವಾಗಿ ಈ ಯೋಜನೆಯನ್ನು ಇಡೀ ದೇಶಕ್ಕೆ ಅನ್ವಯಿಸಲಾಗುವುದು ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.

 

click me!