ಕೇಂದ್ರದ ಅನ್ಯಾಯದ ಮಧ್ಯೆಯೂ ರಾಜ್ಯಕ್ಕೆ ಉತ್ತಮ ಬಜೆಟ್‌: ಸಚಿವ ಎಂ.ಬಿ.ಪಾಟೀಲ್

Published : Feb 18, 2024, 08:30 AM IST
ಕೇಂದ್ರದ ಅನ್ಯಾಯದ ಮಧ್ಯೆಯೂ ರಾಜ್ಯಕ್ಕೆ ಉತ್ತಮ ಬಜೆಟ್‌: ಸಚಿವ ಎಂ.ಬಿ.ಪಾಟೀಲ್

ಸಾರಾಂಶ

ಗ್ಯಾರಂಟಿಗಳಿಗೆ ₹56,000 ಕೋಟಿ ಜೊತೆಗೆ ಇತರೆ ಯೋಜನೆಗಳಿಗೂ ಹಣ ನೀಡಲಾಗಿದೆ. ಬೆಂಗಳೂರು ಅಭಿವೃದ್ಧಿಯಿಂದ ಹಿಡಿದು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದರ ಜೊತೆಗೆ ವಿಜಯಪುರ ಜಿಲ್ಲೆಗೂ ಬಜೆಟ್‌ನಲ್ಲಿ ಕೊಡುಗೆ ನೀಡಲಾಗಿದೆ. ಧಾರವಾಡದಲ್ಲಿ ₹6000 ಕೋಟಿ ವೆಚ್ಚದಲ್ಲಿ ಕೇಂದ್ರ ರಾಜ್ಯ ಜಂಟಿಯಾಗಿ ಕೈಗಾರಿಕೆ ವಲಯ ಸ್ಥಾಪನೆ ಮಾಡಲಾಗುತ್ತದೆ. ಆರ್ಥಿಕ ಶಿಸ್ತನ್ನು ಮೀರಿ ನಾವು ಹೋಗಿಲ್ಲ: ಸಚಿವ ಎಂ.ಬಿ.ಪಾಟೀಲ್ 

ವಿಜಯಪುರ(ಫೆ.18): ನಮ್ಮೆಲ್ಲರ ನೆಚ್ಚಿನ ನಾಯಕ ಸಿಎಂ ಸಿದ್ದರಾಮಯ್ಯನವರು 15 ನೇ ಬಾರಿ ಮಂಡಿಸಿರುವ ಬಜೆಟ್ ಸಾಮಾಜಿಕ ಹಾಗೂ ಅಭಿವೃದ್ಧಿಯನ್ನು ಸರಿದೂಗಿಸುವ ಬಜೆಟ್ ಆಗಿದ್ದು, ಕಾಂಗ್ರೆಸ್ ಭರವಸೆ ನೀಡಿದ್ದ ಐದು ಗ್ಯಾರಂಟಿಗಳಿಗೆ ಹಾಗೂ ಎಲ್ಲಾ ಇಲಾಖೆಗಳಿಗೆ ಬಜೆಟ್‌ನಲ್ಲಿ ಹಣ ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಎಂ.ಬಿ.ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ಯಾರಂಟಿಗಳಿಗೆ ₹56,000 ಕೋಟಿ ಜೊತೆಗೆ ಇತರೆ ಯೋಜನೆಗಳಿಗೂ ಹಣ ನೀಡಲಾಗಿದೆ. ಬೆಂಗಳೂರು ಅಭಿವೃದ್ಧಿಯಿಂದ ಹಿಡಿದು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದರ ಜೊತೆಗೆ ವಿಜಯಪುರ ಜಿಲ್ಲೆಗೂ ಬಜೆಟ್‌ನಲ್ಲಿ ಕೊಡುಗೆ ನೀಡಲಾಗಿದೆ. ಧಾರವಾಡದಲ್ಲಿ ₹6000 ಕೋಟಿ ವೆಚ್ಚದಲ್ಲಿ ಕೇಂದ್ರ ರಾಜ್ಯ ಜಂಟಿಯಾಗಿ ಕೈಗಾರಿಕೆ ವಲಯ ಸ್ಥಾಪನೆ ಮಾಡಲಾಗುತ್ತದೆ. ಆರ್ಥಿಕ ಶಿಸ್ತನ್ನು ಮೀರಿ ನಾವು ಹೋಗಿಲ್ಲ ಎಂದು ಹೇಳಿದರು.

ಕರ್ನಾಟಕ ಬಜೆಟ್ 2024: ಕಲಬುರಗಿ ಪಾಲಿಗೆ ಚುರುಮುರಿ ಪ್ರಸಾದ ಸಿಕ್ಕಷ್ಟೇ ಶಿವಾಯನಮಃ!

ಕೇಂದ್ರದ ಹಣ ರಾಜ್ಯಕ್ಕೆ ಬರದಿರುವ ಕಾರಣ ಇದು ಕೊರತೆ ಬಜೆಟ್ ಆಗಿದೆ. ಸಾಲದ ಹೊರೆ ಹೆಚ್ಚಾಗಲು ಕೇಂದ್ರ ಹಣ ನೀಡದಿರುವುದೇ ಹಾಗೂ ನರೇಂದ್ರ ಮೋದಿಯೇ ಇದಕ್ಕೆ ಕಾರಣ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
ಕೇಂದ್ರ ಸರ್ಕಾರ ಮಾಡಿದ ಅನ್ಯಾಯದ ಮಧ್ಯೆಯೂ ರಾಜ್ಯದಿಂದ ಉತ್ತಮ ಬಜೆಟ್ ನೀಡಲಾಗಿದೆ. ಈ ಮಧ್ಯೆ ರಾಜ್ಯಕ್ಕೆ ಆದ ಅನ್ಯಾಯದ ವಿರುದ್ದ ದೆಹಲಿಗೆ ಹೋಗಿ ಪ್ರತಿ ಭಟನೆ ಮಾಡಿ ಬಂದಿದ್ದೇವೆ. 14ನೇ ಕಮೀಷನ್‌ನಿಂದ 15ನೇ ಕಮೀಷನ್‌ನಲ್ಲಿ ಅನುದಾನ ಹೆಚ್ಚಾಗಬೇಕಿತ್ತು. ಆದರೆ ₹62 ಸಾವಿರ ಕೋಟಿ ಕಡಿಮೆ ಬಂದಿದೆ. ಈ ಬಾರಿ ಬಜೆಟ್ ಗಾತ್ರ ಹೆಚ್ಚಾಗಿದೆ. ಆದರೂ ಕೇಂದ್ರದಿಂದ ಹಣ ಬಂದಿಲ್ಲ. ಸಿಎಂ ಬಜೆಟ್ ಮೂಲಕ ಶ್ವೇತ ಪತ್ರ ಹೊರಡಿಸಿದ್ದಾರೆ. ಆದರೆ ಬಜೆಟ್ ಮಂಡಣೆಯಲ್ಲಿ ಬಿಜೆಪಿಯವರು 10 ನಿಮಿಷ ಕೂಡ ಲಿಲ್ಲ, ಕೇಂದ್ರದ ಬಂಡವಾಳ ಹೊರ ಬರುತ್ತದೆ ಎಂದು ಪಲಾ ಯನ ಮಾಡಿ ಓಡಿ ಹೋದರು ಎಂದರು.

ಮುಸ್ಲಿಮರ ಜನಸಂಖ್ಯೆ ಶೇ.14 ಇದ್ದರೂ ಬಜೆಟ್‌ನಲ್ಲಿ ಕೇವಲ ಶೇ.0.8% ಅನುದಾನ ಕೊಟ್ಟಿದ್ದೇವೆ; ಸಿಎಂ ಸಿದ್ದರಾಮಯ್ಯ

ಕೃಷ್ಣಮೇಲ್ದಂಡೆ ಬಗ್ಗೆ ಸಿಎಂ ಸಭೆ:ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಹಾಗೂ ಪುನರ್‌ನಿರ್ಮಾಣ ವಿಚಾರದಲ್ಲಿ ಸಿಎಂ ಸಭೆ ಕರೆಯುತ್ತಾರೆ, ನಾವೆಲ್ಲರೂ ಜೊತೆಗೆ ಸಭೆ ನಡೆಸುತ್ತೇವೆ. 5 ವರ್ಷ8 ವರ್ಷ ಹಂತದ ಯೋಜನೆ ಮಾಡುತ್ತೇವೆ. ಅದಕ್ಕೂ ಮುನ್ನ ಕೃಷ್ಣಾ ಜಲ ವಿವಾದದ ಕುರಿತು ನ್ಯಾಯಾಧೀಕರಣ ಗೆಜೆಟ್ ನೋಟಿಫಿಕೇಷನ್ ಮಾಡಿಸಲಿ, ಈ ಮೂಲಕ ಗೆಜೆಟ್ ನೊಟಿಫಿಕೇಷನ್ ಮಾಡಿಸುವಂತೆ ಕೇಂದ್ರಕ್ಕೆ ಒತ್ತಾಯ ಮಾಡಿದರು.

ಯಡಿಯೂರಪ್ಪ ಸಿಎಂ ಆಗಿದ್ದಾಗ 606 ಭರವಸೆ ನೀಡಿದ್ದರು. ಅದರಲ್ಲಿ 50 ಭರವಸೆಗಳನ್ನು ಮಾತ್ರ ಈಡೇರಿಸಿ 550 ಭರವಸೆ ಈಡೇರಿಸಲಿಲ್ಲ. ಕೊಟ್ಟ ಭರವಸೆಗಳಲ್ಲಿ ಶೇ.10ರಷ್ಟು ಸಹ ಈಡೇರಿಸಲಿಲ್ಲ. ಯಡಿಯೂರಪ್ಪ ತಮ್ಮ ಮುಖ ಮೊದಲು ಕನ್ನಡಿಯಲ್ಲಿ ನೋಡಿಕೊಳ್ಳಲಿ. ₹1.5 ಲಕ್ಷ ಕೋಟಿ ಹಣವನ್ನು ಕೃಷ್ಣಯ ಯೋಜನೆಗೆ ಕೊಡುವುದಾಗಿ ರಕ್ತದಲ್ಲಿ ಬರೆದು ಕೊಡುವೆ ಎಂದು ಬಿಎಸ್‌ವೈ ಹುಬ್ಬಳ್ಳಿಯಲ್ಲಿ ಹೇಳಿದ್ದರು. ಆದರೆ ಎಲ್ಲಿ ಕೊಟ್ಟರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!