ಇಪಿಎಫ್ ಒ ನಿಯಮಗಳ ಪ್ರಕಾರ ಒಬ್ಬ ಉದ್ಯೋಗಿ ಒಂದೇ ಯುಎಎನ್ ಹೊಂದಿರಬೇಕು. ಹೀಗಾಗಿ ನೀವು ಎರಡು ಯುಎಎನ್ ಹೊಂದಿದ್ರೆ ಈ ವಿಧಾನಗಳ ಮೂಲಕ ವಿಲೀನಗೊಳಿಸಿ.
Business Desk: ತಿಂಗಳ ವೇತನ ಪಡೆಯೋ ಎಲ್ಲರೂ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆ ಹೊಂದಿರುತ್ತಾರೆ. ಈಗಿರುವ ನಿಯಮಗಳ ಪ್ರಕಾರ ವೇತನ ಪಡೆಯೋ ಉದ್ಯೋಗಿ ಕೇವಲ ಒಂದೇ ಒಂದು ಯುನಿವರ್ಸಲ್ ಖಾತೆ ಸಂಖ್ಯೆ ಹೊಂದಿರೋದು ಅಗತ್ಯ. ಆದರೆ, ಉದ್ಯೋಗಿ ಕಂಪನಿ ಬದಲಾಯಿಸಿದ ಸಂದರ್ಭದಲ್ಲಿ ಹೊಸ ಇಪಿಎಫ್ಒ ಖಾತೆಯನ್ನು ಹೊಸ ಕಂಪನಿ ತೆರೆಯುತ್ತದೆ. ಪ್ರತಿ ಇಪಿಎಫ್ ಖಾತೆ ಯುಎಎನ್ ಜೊತೆಗೆ ಲಿಂಕ್ ಆಗಿರುತ್ತದೆ. ಆದರೆ, ಇಪಿಎಫ್ ಒ ನಿಯಮಗಳ ಅನುಸಾರ ಒಬ್ಬ ಉದ್ಯೋಗಿ ಒಂದೇ ಸಮಯದಲ್ಲಿ ಎರಡು ಇಪಿಎಫ್ ಖಾತೆ ಹೊಂದಿರಬಾರದು. ಹೀಗಾಗಿ ಒಬ್ಬ ಉದ್ಯೋಗಿ ಎರಡು ಯುಎಎನ್ ಹೊಂದಿದ್ದರೆ ಆತ ಈ ಬಗ್ಗೆ ತನ್ನ ಈಗಿನ ಉದ್ಯೋಗದಾತ ಸಂಸ್ಥೆಗೆ ಮಾಹಿತಿ ನೀಡಬೇಕು ಹಾಗೂ ಹಳೆಯ ಯುಎಎನ್ ಅನ್ನು ನಿಷ್ಕ್ರಿಯಗೊಳಿಸಬೇಕು. ಇನ್ನು ಇಪಿಎಫ್ ಒ ಸದಸ್ಯ ಈ ಹಿಂದಿನ ಯುಎಎನ್ ಬ್ಲಾಕ್ ಮಾಡುವಂತೆ ಇಪಿಎಫ್ ಒಗೆ ಮನವಿ ಕೂಡ ಸಲ್ಲಿಸಬಹುದು. ಹಾಗೆಯೇ ಈಗಿರುವ ಇಪಿಎಫ್ ಬ್ಯಾಲೆನ್ಸ್ ಅನ್ನು ಸಕ್ರಿಯವಾಗಿರುವ ಯುಎಎನ್ ಗೆ ವರ್ಗಾವಣೆ ಮಾಡಬಹುದು.
ಹಳೆಯ ಹಾಗೂ ಹೊಸ ಯುಎಎನ್ ಸೇರಿಸೋದು ಹೇಗೆ?
ಈ ಕೆಳಗಿನ ಎರಡು ವಿಧಾನಗಳ ಮೂಲಕ ಎರಡು ಯುಎಎನ್ ಗಳನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ವಿಲೀನಗೊಳಿಸಬಹುದು.
ಪಿಎಫ್ ಬಡ್ಡಿದರ ಶೇ. 8.25ಕ್ಕೆ ಹೆಚ್ಚಳ : 3 ವರ್ಷದ ಗರಿಷ್ಠ
ಮೊದಲ ವಿಧಾನ
*ಎರಡು ಯುಎಎನ್ ಹೊಂದಿರುವ ಉದ್ಯೋಗಿಗಳು ಈ ಬಗ್ಗೆ ಹೊಸ ಉದ್ಯೋಗದಾತ ಸಂಸ್ಥೆ ಅಥವಾ ಇಪಿಎಫ್ ಒಗೆ ಮಾಹಿತಿ ನೀಡಬೇಕು.
*ಉದ್ಯೋಗಿ uanepf@epfindia.gov.in ಇಲ್ಲಿಗೆ ಇ-ಮೇಲ್ ಕಳುಹಿಸಬಹುದು. ಇದರಲ್ಲಿ ಈಗಿನ ಹಾಗೂ ಹೊಸ ಯುಎಎನ್ ನಮೂದಿಸಬೇಕು.
*ಈ ಸಮಸ್ಯೆ ಬಗೆಹರಿಸಲು ಇಪಿಎಫ್ ಒ ಪರಿಶೀಲನೆ ನಡೆಸುತ್ತದೆ.
*ಹಳೆಯ ಯುಎಎನ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಹಾಗೂ ಉದ್ಯೋಗಿಯ ಈಗಿನ ಯುಎಎನ್ ಅನ್ನು ಸಕ್ರಿಯಗೊಳಿಸಲಾಗುತ್ತದೆ.
*ನಿಷ್ಕ್ರಿಯವಾಗಿರುವ ಯುಎಎನ್ ಗೆ ಲಿಂಕ್ ಆಗಿರುವ ಇಪಿಎಫ್ ಖಾತೆಯನ್ನು ಹೊಸ ಸಕ್ರಿಯ ಖಾತೆಗೆ ವರ್ಗಾಯಿಸಲು ಕ್ಲೇಮ್ ಸಲ್ಲಿಕೆ ಮಾಡಬೇಕು.
*ಈ ಮೇಲಿನ ಪ್ರಕ್ರಿಯೆ ತುಸು ಸಂಕೀರ್ಣವಾಗಿದೆ. ಹೀಗಾಗಿ ಇಪಿಎಫ್ಒ ಸರಳವಾದ ಪ್ರಕ್ರಿಯೆಯೊಂದನ್ನು ಪರಿಚಯಿಸಿದೆ. ಇದರ ಮೂಲಕ ಸದಸ್ಯರು ತಮ್ಮ ಎರಡು ಯುಎಎನ್ ಗಳನ್ನು ಸುಲಭವಾಗಿ ವಿಲೀನಗೊಳಿಸಬಹುದು ಹಾಗೂ ಇಪಿಎಫ್ ಅನ್ನು ಕೂಡ ಯಾವುದೇ ಸಮಸ್ಯೆಯಿಲ್ಲದೆ ವರ್ಗಾವಣೆ ಮಾಡಬಹುದು.
ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ನಿಷೇಧ ಹೇರಿದ ಇಪಿಎಫ್ಒ; ಈ ಬ್ಯಾಂಕ್ ಖಾತೆ ಹೊಂದಿರೋ ಇಪಿಎಫ್ ಸದಸ್ಯರೇನು ಮಾಡ್ಬೇಕು?
ಎರಡನೇ ವಿಧಾನ
*ಇಪಿಎಫ್ಒ ಸದಸ್ಯರು ಇಪಿಎಫ್ ಮೊತ್ತವನ್ನು ಹಳೆಯ ಯುಎಎನ್ ನಿಂದ ಹೊಸದಕ್ಕೆ ವರ್ಗಾವಣೆ ಮಾಡಲು ಮನವಿ ಸಲ್ಲಿಕೆ ಮಾಡಬೇಕು.
*ಒಮ್ಮೆ ಒಬ್ಬ ಉದ್ಯೋಗಿ ಇಪಿಎಫ್ ವರ್ಗಾವಣೆಗೆ ಮನವಿ ಮಾಡಿದ ಬಳಿಕ ವ್ಯವಸ್ಥೆ ಸ್ವಯಂ ಆಗಿ ಡೂಪ್ಲಿಕೇಟ್ ಯುಎಎನ್ ಅನ್ನು ಪತ್ತೆ ಹಚ್ಚುತ್ತದೆ.
*ಇನ್ನು ಒಮ್ಮೆ ಗುರುತಿಸಿದ ಬಳಿಕ ಹಳೆಯ ಯುಎಎನ್ ನಿಷ್ಕ್ರಿಯಗೊಳ್ಳುತ್ತದೆ ಹಾಗೂ ಉದ್ಯೋಗಿಯ ಹಳೆಯ ಸದಸ್ಯತ್ವ ಐಡಿ ಹೊಸ ಯುಎಎನ್ ಗೆ ಲಿಂಕ್ ಆಗುತ್ತದೆ.
*ಉದ್ಯೋಗಿಗಳು ಹಳೆಯ ಯುಎಎನ್ ನಿಷ್ಕ್ರಿಯಗೊಂಡಿರುವ ಸ್ಟೇಟಸ್ ಅನ್ನು ಎಸ್ ಎಂಎಸ್ ಮೂಲಕ ಪಡೆಯುತ್ತಾರೆ.
*ಒಂದು ವೇಳೆ ಸದಸ್ಯರು ತಮ್ಮ ಹೊಸ ಯುಎಎನ್ ಸಕ್ರಿಯಗೊಳಿಸದಿದ್ರೆ, ಹೊಸ ಯುಎಎನ್ ಸಕ್ರಿಯಗೊಳಿಸುವಂತೆ ಸದಸ್ಯರು ಮನವಿ ಸ್ವೀಕರಿಸುತ್ತಾರೆ.
ಬಡ್ಡಿದರ ಹೆಚ್ಚಳ
023-24ನೇ ಸಾಲಿಗೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.15ರಿಂದ ಶೇ.8.25ಕ್ಕೆ ಹೆಚ್ಚಿಸಲಾಗಿದೆ. ಈ ಬಡ್ಡಿ ದರವು 3 ವರ್ಷದ ಗರಿಷ್ಠವಾಗಿದೆ.ಸರ್ಕಾರದ ಅನುಮೋದನೆಯ ನಂತರ, 2023-24ರ ಬಡ್ಡಿ ದರ 6 ಕೋಟಿ ಚಂದಾದಾರರ ಖಾತೆಗಳಿಗೆ ಜಮೆ ಆಗಲಿದೆ.