ಕರ್ನಾಟಕದಲ್ಲಿ ಘಟಕ ತೆರೆಯಲು ಟೆಸ್ಲಾ ಸಂಸ್ಥೆಗೆ ಎಂ.ಬಿ.ಪಾಟೀಲ್‌ ಆಹ್ವಾನ

Published : Jun 24, 2023, 03:30 AM IST
ಕರ್ನಾಟಕದಲ್ಲಿ ಘಟಕ ತೆರೆಯಲು ಟೆಸ್ಲಾ ಸಂಸ್ಥೆಗೆ ಎಂ.ಬಿ.ಪಾಟೀಲ್‌ ಆಹ್ವಾನ

ಸಾರಾಂಶ

ಎಲಾನ್‌ ಮಸ್ಕ್‌ ಅವರು ಕರ್ನಾಟಕದಲ್ಲಿ ಯಾವುದೇ ಉದ್ಯಮ ಸ್ಥಾಪಿಸಿದರೂ ಅದಕ್ಕೆ ಸಹಕಾರ ನೀಡುತ್ತೇವೆ: ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌

ಬೆಂಗಳೂರು(ಜೂ.24):  ಎಲೆಕ್ಟ್ರಿಕ್‌ ಕಾರುಗಳ ತಯಾರಿಕಾ ಸಂಸ್ಥೆಯಾದ ಅಮೆರಿಕದ ಟೆಸ್ಲಾ ಕಂಪನಿಯು ದೇಶದಲ್ಲಿ ತನ್ನ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾದರೆ, ಕರ್ನಾಟಕ ರಾಜ್ಯ ಅದಕ್ಕೆ ಪ್ರಶಸ್ತ ತಾಣವಾಗಿದೆ. ಟೆಸ್ಲಾ ಸಂಸ್ಥೆಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

ಟ್ವೀಟ್‌ ಮೂಲಕ ಟೆಸ್ಲಾ ಸಂಸ್ಥೆಯ ಉತ್ಪಾದನಾ ಘಟಕವನ್ನು ರಾಜ್ಯದಲ್ಲಿ ತೆರೆಯಲು ಆಹ್ವಾನಿಸಿರುವ ಎಂ.ಬಿ. ಪಾಟೀಲ್‌, ಟೆಸ್ಲಾ ಸಂಸ್ಥೆಯು ಎಲೆಕ್ಟ್ರಿಕ್‌ ಕಾರುಗಳ ಜತೆಗೆ ಸೌರಫಲಕಗಳು ಸೇರಿದಂತೆ ಮತ್ತಿತರ ಪರ್ಯಾಯ ಇಂಧನ ಉತ್ಪನ್ನಗಳನ್ನು ತಯಾರಿಸುತ್ತದೆ. ಸ್ಪೇಸ್‌ ಎಕ್ಸ್‌ ಸಂಸ್ಥೆಯ ಮೂಲಕ ಉಪಗ್ರಹ ಅಂತರ್ಜಾಲ ಸೇವೆ (ಸ್ಟಾರ್‌ ಲಿಂಕ್‌) ಒದಗಿಸುತ್ತಿದೆ. 

ಟ್ವೀಟರ್‌ ಸ್ಥಳೀಯ ನಿಯಮ ಪಾ​ಲಿ​ಸ​ಬೇ​ಕು: ಎಲಾನ್‌ ಮಸ್ಕ್‌

ಈ ಸಂಸ್ಥೆಯ ಮುಖ್ಯಸ್ಥರಾದ ಎಲಾನ್‌ ಮಸ್ಕ್‌ ಅವರು ಕರ್ನಾಟಕದಲ್ಲಿ ಯಾವುದೇ ಉದ್ಯಮ ಸ್ಥಾಪಿಸಿದರೂ ಅದಕ್ಕೆ ಸಹಕಾರ ನೀಡುತ್ತೇವೆ. ಕರ್ನಾಟಕವು ತಂತ್ರಜ್ಞಾನ ಮತ್ತು ತಯಾರಿಕಾ ಕ್ಷೇತ್ರದಲ್ಲಿ 5.0 ಪ್ರಮಾಣೀಕೃತ ಮಟ್ಟ ಅಳವಡಿಸಿಕೊಂಡು ಕೈಗಾರಿಕಾ ಬೆಳವಣಿಗೆ ಸಾಧಿಸುತ್ತಿದೆ. ಹೀಗಾಗಿ ಟೆಸ್ಲಾ ಘಟಕ ಸ್ಥಾಪಿಸಲು ರಾಜ್ಯ ಸೂಕ್ತವಾದ ತಾಣವಾಗಿದೆ ಎಂದಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಸ್ಟಾರ್‌ಲಿಂಕ್‌ ಇಂಟರ್ನೆಂಟ್‌ ವೆಬ್‌ಸೈಟ್‌ ಆರಂಭ, 30 ದಿನದ ಫ್ರೀ ಟ್ರಯಲ್‌ ಜೊತೆ ರಿಚಾರ್ಜ್‌ ಘೋಷಿಸಿದ ಮಸ್ಕ್‌ ಕಂಪನಿ!
Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ