ವಿಮಾನಯಾನ, ರೈಲು, ಬ್ಯಾಂಕಿಂಗ್‌ಗೆ ಭಾರೀ ಹೊಡೆತ.. ಏನಿದು ಬ್ಲ್ಕೂಸ್ಕ್ರೀನ್‌ ಆಫ್‌ ಡೆತ್‌?

By Kannadaprabha News  |  First Published Jul 20, 2024, 7:44 AM IST

ಆಸ್ಟ್ರೇಲಿಯಾದಲ್ಲಿ ಎಬಿಸಿ, ಸ್ಕೈನ್ಯೂಸ್‌ ಚಾನೆಲ್‌ಗಳಿಗೆ ತಮ್ಮ ಟೀವಿ ಮತ್ತು ರೇಡಿಯೋ ಕಾರ್ಯಕ್ರಮ ಪ್ರಸಾರ ಮಾಡಲು ಆಗಲಿಲ್ಲ. ಕಾರ್ಯಕ್ರಮದ ಪ್ರಸಾರದ ವೇಳೆಯೇ ತೊಂದರೆ ಕಾಣಿಸಿಕೊಂಡ ಪರಿಣಾಮ ನೇರ ಪ್ರಸಾರದಲ್ಲಿದ್ದ ಆ್ಯಂಕರ್‌ಗಳು ಕಂಗೆಡುವಂತಾಯಿತು.


ನ್ಯೂಯಾರ್ಕ್‌/ನವದೆಹಲಿ (ಜು 20): ಮೈಕ್ರೋಸಾಫ್ಟ್‌ ಸಾಫ್ಟ್‌ವೇರ್‌ನಲ್ಲಿ ಕಂಡುಬಂದ ವ್ಯತ್ಯಯ ಶುಕ್ರವಾರ ಭಾರತ ಸೇರಿದಂತೆ ಜಗತ್ತಿನಾದ್ಯಂತ ವಿಮಾನಯಾನ, ರೈಲ್ವೆ, ಬ್ಯಾಂಕಿಂಗ್, ಮಾದ್ಯಮ ವಲಯಗಳನ್ನು ಬಹುವಾಗಿ ಬಾಧಿಸಿದೆ. ಹೀಗಾಗಿ ವಿಶ್ವಾದ್ಯಂತ ಸಾವಿರಾರು ವಿಮಾನಗಳು ರದ್ದಾಗಿವೆ ಅಥವಾ ವಿಳಂಬವಾಗಿ ಸಂಚರಿಸಿವೆ. ಇದರಿಂದ ಪ್ರಯಾಣಿಕರು ಗಂಟೆಗಟ್ಟಲೆ ತಾವು ತೆರಳಬೇಕಾಗಿದ್ದ ಸ್ಥಳ ಬಿಟ್ಟು ಹೊರಟ ಸ್ಥಳದಲ್ಲೇ ಗಂಟೆಗಟ್ಟಲೆ ಉಳಿಯುವಂತಾಯಿತು. ಬ್ಯಾಂಕ್‌ಗಳಲ್ಲೂ ತೊಂದರೆ ಆದ ಕಾರಣ ಕೋಟ್ಯಂತರ ಗ್ರಾಹಕರು ಭಾರೀ ತೊಂದರೆಗೆ ತುತ್ತಾದರು.

ಭಾರತದಲ್ಲಿ..:

Latest Videos

undefined

ಭಾರತದಲ್ಲಿ ಪ್ರಮುಖವಾಗಿ ವಿಮಾನಯಾನ ಸಂಸ್ಥೆಗಳು ದೊಡ್ಡಮಟ್ಟಿನ ತೊಂದರೆಗೆ ಒಳಗಾದವು. ಇಂಡಿಗೋ, ಸ್ಪೈಸ್‌ಜೆಟ್‌, ಅಕಾಸಾ ಏರ್‌, ವಿಸ್ತಾರಾ ಕಂಪನಿಗಳ ಟಿಕೆಟ್‌ ಬುಕಿಂಗ್‌, ಚೆಕ್‌ ಇನ್‌ ಮತ್ತು ಸಂಚಾರದ ಮಾಹಿತಿ ಸೇವೆಗೆ ತೊಂದರೆ ಆಯಿತು. ಹೀಗಾಗಿ ಪ್ರಯಾಣಿಕರ ಚೆಕ್‌ ಇನ್‌ ಪ್ರಕ್ರಿಯೆಯನ್ನು ವಿಮಾನಯಾನ ಕಂಪನಿಗಳು ಮ್ಯಾನ್ಯುಯಲ್‌ ಆಗಿ ನಡೆಸುವಂತಾಯಿತು. ದೇಶದಲ್ಲಿ ಶುಕ್ರವಾರ ಸಂಜೆಯವರೆಗೆ ಒಟ್ಟಾರೆ ಸುಮಾರು 140 ವಿಮಾನ ರದ್ದಾದ ಅಥವಾ ವಿಳಂಬವಾದ ವರದಿಗಳು ಲಭಿಸಿವೆ. ಹೀಗಾಗಿ ಪ್ರಯಾಣಿಕರು ಏರ್‌ಪೋರ್ಟ್‌ಗಳಲ್ಲಿ ಭಾರಿ ಪರದಾಟ ಅನುಭವಿಸುವಂತಾಯಿತು.

ವಿದೇಶಗಳಲ್ಲಿ:

ಅಮೆರಿಕದಲ್ಲಿ, ಡೆಲ್ಟಾ, ಅಮೆರಿಕನ್‌, ಅಲಿಗೆಂಟ್‌ ಕಂಪನಿಗಳ ವಿಮಾನ ಸೇವೆ ಪೂರ್ಣ ಸ್ಥಗಿತಗೊಂಡಿತು. ಉಳಿದ ಕಂಪನಿಗಳು ಕೂಡಾ ಸಾಕಷ್ಟು ಪ್ರಮಾಣದಲ್ಲಿ ವ್ಯತ್ಯಯಕ್ಕೆ ತುತ್ತಾದವು. ಅಮೆರಿಕವೊಂದರಲ್ಲೇ ಸಾವಿರಾರು ವಿಮಾನಗಳ ಸಂಚಾರ ರದ್ದು, ಮುಂದೂಡಿಕೆಯಂಥ ಘಟನೆಗಳಿಗೆ ಸಾಕ್ಷಿ ಆಯಿತು. ವಿಮಾನಯಾನ ಸಿಬ್ಬಂದಿ, ಪ್ರಯಾಣಿಕರು ಏರ್‌ಪೋರ್ಟ್‌ನಲ್ಲೇ ನಿದ್ದೆ ಹೋದ ದೃಶ್ಯಗಳು ಎಲ್ಲೆಡೆ ಕಂಡುಬಂದವು.

ಆಸ್ಟ್ರೇಲಿಯಾದಲ್ಲಿ ವಿಮಾನ, ದೂರಸಂಪರ್ಕ, ಬ್ಯಾಂಕ್‌, ಮಾಧ್ಯಮ ಸಂಸ್ಥೆಗಳು ಮೈಕ್ರೋಸಾಫ್ಟ್‌ ಶಾಕ್‌ನಿಂದ ಕಂಗೆಟ್ಟವು. ಇದೇ ಪರಿಸ್ಥಿತಿ ಭಾರತ, ಬ್ರಿಟನ್‌, ನ್ಯೂಜಿಲೆಂಡ್‌, ನೆದರ್‌ಲೆಂಡ್‌, ಯುರೋಪ್‌, ಜರ್ಮನಿ, ಸ್ವಿಜರ್ಲೆಂಡ್‌, ಆಫ್ರಿಕಾ, ಇಸ್ರೇಲ್‌, ಇಟಲಿ ಸೇರಿದಂತೆ ಹಲವ ದೇಶಗಳಲ್ಲೂ ಪ್ರತಿಧ್ವನಿಸಿತು.

ಮಾಧ್ಯಮ/ಇತರ ಸೇವೆಗಳು:

ಬ್ರಿಟನ್‌ನಲ್ಲಿ ವಿಮಾನ, ರೈಲು, ಮಾಧ್ಯಮ, ಆರೋಗ್ಯ ಸೇವೆಗಳಲ್ಲಿ ತೊಂದರೆ ಉಂಟಾಯಿತು. ಆಸ್ಟ್ರೇಲಿಯಾದಲ್ಲಿ ಎಬಿಸಿ, ಸ್ಕೈನ್ಯೂಸ್‌ ಚಾನೆಲ್‌ಗಳಿಗೆ ತಮ್ಮ ಟೀವಿ ಮತ್ತು ರೇಡಿಯೋ ಕಾರ್ಯಕ್ರಮ ಪ್ರಸಾರ ಮಾಡಲು ಆಗಲಿಲ್ಲ. ಕಾರ್ಯಕ್ರಮದ ಪ್ರಸಾರದ ವೇಳೆಯೇ ತೊಂದರೆ ಕಾಣಿಸಿಕೊಂಡ ಪರಿಣಾಮ ನೇರ ಪ್ರಸಾರದಲ್ಲಿದ್ದ ಆ್ಯಂಕರ್‌ಗಳು ಕಂಗೆಡುವಂತಾಯಿತು.

ಜಗತ್ತಿನೆಲ್ಲೆಡೆ ಹಠಾತ್ ಆಫ್ ಆದ ಮೈಕ್ರೋಸಾಫ್ಟ್‌ ವಿಂಡೋ ಸಿಸ್ಟಂ: ವಿಮಾನಯಾನ, ಬ್ಯಾಂಕ್ ಸೇವೆಗಳಿಗೆ ತೀವ್ರ ಅಡ್ಡಿ

ಏನಿದು ಕ್ರೌಡ್‌ಸ್ಟ್ರೈಕ್‌ ಸಮಸ್ಯೆ?

ಇದು ಬಳಕೆದಾರರಿಗೆ ಸೈಬರ್‌ ದಾಳಿಯಿಂದ ಹಿಡಿದು ನಾನಾ ರೀತಿಯ ಸೈಬರ್‌ ಭದ್ರತೆ ನೀಡುವ ಸಂಸ್ಥೆ. ಮೈಕ್ರೋಸಾಫ್ಟ್‌ನ ಕ್ಲೌಡ್‌ ಸೇವೆಗಳಿಗೆ ಇದು ಭದ್ರತೆ ನೀಡುತ್ತದೆ. ಹೀಗೆ ಭದ್ರತೆ ನೀಡುವ ಕ್ರೌಡ್‌ಸ್ಟ್ರೈಕ್‌ ಸಾಫ್ಟ್‌ವೇರ್‌, ಸಮಸ್ಯೆಯೊಂದನ್ನು ನಿವಾರಣೆ ಮಾಡಿ, ಆ ಸಂಬಂಧ ಸಾಫ್ಟ್‌ವೇರ್‌ ಅಪ್ಡೇಟ್‌ ಮಾಡಿದಾಗ ಅದರಲ್ಲಿ ಸಮಸ್ಯೆ ಕಾಣಿಸಿಕೊಂಡು, ಇಡೀ ಮೈಕ್ರೋಸಾಫ್ಟ್‌ ಕ್ಲೌಡ್‌ ಸೇವೆಗಳಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ.

ಏನಿದು ಬ್ಲ್ಕೂಸ್ಕ್ರೀನ್‌ ಆಫ್‌ ಡೆತ್‌?

ಇದು ವಿಂಡೋಸ್‌ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ತೊಂದರೆ ಕಾಣಿಸಿಕೊಂಡಾಗ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಪರದೆ ಮೇಲೆ ಮೂಡುವ ಸಂದೇಶ. ವಿಂಡೋಸ್‌ ಆಪರೇಟಿಂಗ್‌ ಸಿಸ್ಟಮ್‌ ಸುರಕ್ಷಿತವಾಗಿ ಕಾರ್ಯನಿರ್ವಹಣೆ ಮಾಡುವುದು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ಸಿಸ್ಟಮ್‌ ಕ್ರ್ಯಾಶ್‌ ಆಗಿ ಈ ಸಂದೇಶ ಪರದೆ ಮೇಲೆ ಮೂಡುತ್ತದೆ. ಹೀಗೆ ಸಿಸ್ಟಮ್‌ ಕ್ರ್ಯಾಶ್‌ ಆದ ವೇಳೆ ಕಂಪ್ಯೂಟರ್ ತಂತಾನೆ ಆಫ್‌ ಆಗುತ್ತದೆ ಮತ್ತು ರೀಸ್ಟಾರ್ಟ್‌ ಆಗುತ್ತದೆ. ಈ ವೇಳೆ ಸೇವ್‌ ಮಾಡದೇ ಇರುವ ಡಾಟಾ ನಷ್ಟವಾಗುತ್ತದೆ.

ಅನಂತ್ ಅಂಬಾನಿ ಮದುವೆ ಬೆನ್ನಲ್ಲೇ ಜಿಯೋಗೆ 5,445 ಕೋಟಿ ರೂ ತ್ರೈಮಾಸಿಕ ಲಾಭ!

click me!