ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ. ಮದುವೆ ಬೆನ್ನಲ್ಲೇ ಅಂಬಾನಿ ಕುಟುಂಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಜಿಯೋಗೆ ಬರೋಬ್ಬರಿ 5,445 ಕೋಟಿ ರೂಪಾಯಿ ತ್ರೈಮಾಸಿಕ ಲಾಭ ಪಡೆದಿದೆ.
ಮುಂಬೈ(ಜು.19) ಭಾರತದ ಅತೀ ಅದ್ಧೂರಿ ಮದುವೆಯಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಪ್ರೀ ವೆಡ್ಡಿಂಗ್, ಮದುವೆ, ಸಂಗೀತ್ ಸೆರಮನಿ ಸೇರಿದಂತೆ ಒಂದರ ಮೇಲೊಂದರಂತೆ ಸಮಾರಂಭಗಳಿಗೆ ದೇಶ ವಿದೇಶಗಳ ಗಣ್ಯರು ಪಾಲ್ಗೊಂಡಿದ್ದಾರೆ. ಆಗಮಿಸಿದ ಗಣ್ಯರಿಗೂ ಕೋಟಿ ಕೂಟಿ ರೂಪಾಯಿ ಉಡುಗೊರೆಯನ್ನು ನೀಡಲಾಗಿದೆ. ಮದುವೆಯಾದ ಬೆನ್ನಲ್ಲೇ ಅಂಬಾನಿ ಕುಟುಂಬಕ್ಕೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಜಿಯೋ ತ್ರೈಮಾಸಿಕ ಲಾಭ ಬರೋಬ್ಬರಿ 5,445 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಕಳೆದ ತ್ರೈಮಾಸಿಕದಲ್ಲಿ ಜಿಯೋ 5,337 ಕೋಟಿ ರೂಪಾಯಿ ನಿವ್ವಳ ಲಾಭ ಪಡೆದುಕೊಂಡಿತ್ತು. ಈ ತ್ರೈಮಾಸಿಕದಲ್ಲಿ ಈ ಲಾಭ 5,445 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇತ್ತೀಚೆಗೆ ಜಿಯೋ ರಿಚಾರ್ಜ್ ಬೆಲೆ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಹಲವು ಬಳಕೆದಾರರು ಇತರ ಟೆಲಿಕಾಂ ಕಂಪನಿಗಳಿಗೆ ಪೋರ್ಟ್ ಮಾಡಿಕೊಂಡಿದ್ದಾರೆ. ಆದರೆ ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಜಿಯೋಗೆ 90 ಲಕ್ಷ ಬಳಕೆದಾರರು ಸೇರ್ಪಡೆಯಾಗಿದ್ದರು.
ಮಗನ ಮದುವೆ ಬೆನ್ನಲ್ಲೇ ಭಾರತೀಯರೆಲ್ಲರಿಗೂ ಬಂಪರ್ ಗಿಫ್ಟ್ ಕೊಟ್ಟ ಮುಕೇಶ್ ಅಂಬಾನಿ..!
ಜಿಯೋ ಆಪರೇಶನ್ ಮೂಲಕ ಬರುವ ಆದಾಯ 26,478 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಜಿಯೋ ಆಪರೇಶನ್ ಮೂಲಕ 25,959 ಕೋಟಿ ರೂಪಾಯಿ ಆದಾಯ ಪಡೆದಿತ್ತು. ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ ಜಿಯೋ 24,042 ರೂಪಾಯಿ ಕೋಟಿ ರೂಪಾಯಿ ಆದಾಯ ಪಡೆದಿತ್ತು. ಇದೇ ವೇಳೆ ಪ್ರತಿ ಬಳಕೆದಾರರಿಂದ ಬರುತ್ತಿರುವ ಸರಾಸರಿ ಆದಾಯ (ಆವರೇಜ್ ರೆವನ್ಯೂ ಪರ್ ಯೂಸರ್)ದಲ್ಲೂ ಹೆಚ್ಚಳವಾಗಿದೆ.
ಇದೇ ವೇಳೆ ಜಿಯೋ ಮತ್ತೊಂದು ಮಹತ್ವದ ಮೈಲಿಗಲ್ಲು ನಿರ್ಮಾಣಕ್ಕೆ ಮುಂದಾಗಿದೆ. ಮುಂದಿನ ವರ್ಷ ಐಪಿಒ ಲಿಸ್ಟ್ ಆಗುವ ಸಾಧ್ಯತೆ ಇದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಟೆಲಿಕಾಂ ಘಟಕವಾಗಿರುವ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಮುಂದಿನ ವರ್ಷ ಅಂದರೆ 2025ರಲ್ಲಿ ಅತಿದೊಡ್ಡ ಐಪಿಒಗೆ (ಇನಿಷಿಯಲ್ ಪಬ್ಲಿಕ್ ಆಫರ್)ಸಾಧ್ಯವಾಗಲಿದೆ. 9.3 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಸಂಭಾವ್ಯ ಮೌಲ್ಯಮಾಪನದೊಂದಿಗೆ ಸೇರಿಕೊಳ್ಳುವ ಸಾಧ್ಯತೆ ಇದೆ.
ಇಂದು(ಶುಕ್ರವಾರ)ಷೇರು ಮಾರುಕಟ್ಟೆ ಅಂತ್ಯದ ವೇಳೆ ರಿಲಯನ್ಸ್ ಇಂಡಸ್ಟ್ರಿ ಪ್ರತಿ ಷೇರು 3,116.95 ರೂಪಾಯಿಗೆ ಅಂತ್ಯ ಕಂಡಿದೆ. ಷೇರು ಮೌಲ್ಯ ಶೇ1.78ರಷ್ಟು ಇಳಿಕೆಯಾಗಿದೆ. ಐಪಿಒ ಬಳಿಕ ಷೇರು ಮೌಲ್ಯಗಳು ಶೇಕಡಾ 5 ರಿಂದ 17 ರಷ್ಟ ಏರಿಕೆಯಾಗುವ ಸಾಧ್ಯತೆ ಇದೆ.
ಇಂದು ಅಂಬಾನಿ ಮಗನ ವೈಭವದ ಮದುವೆ: ವಿವಾಹಕ್ಕೆ 5000 ಕೋಟಿ ಖರ್ಚು?