ಮೈಕ್ರೋಸಾಫ್ಟ್ ವಿಶ್ವಾದ್ಯಂತ ಉದ್ಯೋಗಿಗಳಿಗೆ ಬೋನಸ್ ವೇತನವನ್ನು ನೀಡುತ್ತಿದೆ. ಸಾಂಕ್ರಾಮಿಕ ವರ್ಷದಲ್ಲಿ ಮಾಡಿದ ಕೆಲಸಕ್ಕೆ ಪ್ರತಿಫಲವಾಗಿ ಇದನ್ನು ನೀಡಲಾಗುತ್ತಿದೆ.
ಅತ್ಯಂತ ಕಷ್ಟಕರವಾಗಿದ್ದ ಆರ್ಥಿಕ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಬೋನಸ್ ನೀಡಲಾಗುತ್ತಿದೆ ಎನ್ನಲಾಗಿದೆ.
undefined
ಮೈಕ್ರೋಸಾಫ್ಟ್‌ನಲ್ಲಿದ್ದ ಬಗ್ ಹುಡುಕಿದ 20ರ ಯುವತಿಗೆ ಸಿಕ್ತು 22 ಲಕ್ಷ...
150,000 ಉದ್ಯೋಗಿಗಳನ್ನು ಹೊಂದಿದ್ದು ಕಾರ್ಪೊರೇಟ್ ಉಪಾಧ್ಯಕ್ಷರ ಮಟ್ಟಕ್ಕಿಂತ ಕೆಳಗಿರುವ ಕಾರ್ಮಿಕರು ಬೋನಸ್‌ಗೆ ಅರ್ಹರಾಗಿದ್ದಾರೆ. ಮೈಕ್ರೋಸಾಫ್ಟ್ ಅಂಗಸಂಸ್ಥೆಗಳಾದ ಲಿಂಕ್ಡ್‌ಇನ್, ಗಿಟ್‌ಹಬ್ ಮತ್ತು ಝೆನಿಮ್ಯಾಕ್ಸ್‌ನ ನೌಕರರನ್ನು ಇದರಿಂದ ಹೊರಗಿಡಲಾಗಿದೆ.
ಮೈಕ್ರೋಸಾಫ್ಟ್ ಪ್ರತಿನಿಧಿಯೊಬ್ಬರು ಇಮೇಲ್ನಲ್ಲಿ ಬೋನಸ್ ನೀಡಿದ್ದಾರೆ ಎಂದು ದೃಢಪಡಿಸಿದ್ದಾರೆ., ಆದರೆ ಮೊತ್ತವನ್ನು ದೃಢಪಡಿಸಿಲ್ಲ. ಸವಾಲಿನ ವರ್ಷದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿದ ಉದ್ಯೋಗಿಗಳಿಗೆ ನಮ್ಮ ಮೆಚ್ಚುಗೆಯ ಸಂಕೇತವಾಗಿ ವಿತ್ತೀಯ ಉಡುಗೊರೆ ನೀಡಲು ನಾವು ಹೆಮ್ಮೆಪಡುತ್ತೇವೆ ಎಂದು ವಕ್ತಾರರು ಹೇಳಿದ್ದಾರೆ.