
ಬೆಂಗಳೂರು (ಆ.22): ಸಿಲಿಕಾನ್ ಸಿಟಿ ಬೆಂಗಳೂರಿನ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾಗಿರುವ ಬಿಲ್ ಗೇಟ್ಸ್ ಫಿದಾ ಆಗಿದ್ದಾರೆ. ಭಾರತದ ಡಿಜಿಟಲೀಕರಣಕ್ಕೆ ಮನಸೋತಿರುವ ಬಿಲ್ ಗೇಟ್ಸ್ ಸ್ವತಃ ತಾವೇ ತನ್ನ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ಮಾಡುತ್ತಿರುವ ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್ನು ಬಿಲ್‌ಗೇಟ್ಸ್ ಬೆಂಗಳೂರಿನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಕುಸುಮಾ ಅವರನ್ನ ಹಾಡಿ ಹೊಗಳಿದ್ದಾರೆ. ಮೈಕ್ರೊಸಾಫ್ಟ್ ಸಿಇಒ ಬಿಲ್ ಗೇಟ್ಸ್ ಅಂಚೆ ಕಚೇರಿ ನೌಕರಳ ಜೊತೆಗೆ ನಗುನಗುತ್ತಾ ಮಾತನಾಡುತ್ತಿರುವ ಬಿಲ್ ಗೇಟ್ಸ್ ಆಕೆಯ ಕೆಲಸದ ಬಗ್ಗೆ ಲಿಂಕ್ಡ್ ಇನ್ ಅಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಕುಸುಮಾ ಮಾಡುವ ಕೆಲಸದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಒಂದು ಲಿಂಕ್ ಅನ್ನು ಕೂಡ ಹಂಚಿಕೊಂಡಿದ್ದು, ‘ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್’ನ ವೆಬ್ಸೈಟ್ ಲಿಂಕ್ ಅಲ್ಲಿ ವೀಡಿಯೋ ಪ್ರಕಟವಾಗುತ್ತಿದೆ.
ಆರ್‌ಸಿ-ಬಿಲ್ ಗೇಟ್ಸ್ ಭೇಟಿ : ಕೃತಕ ಬುದ್ಧಿಮತ್ತೆ ಬಗ್ಗೆ ಚರ್ಚೆ
ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಕಥೆ ಮತ್ತು ಯುವತಿಯ ವೃತ್ತಿಜೀವನದ ಹಾದಿ ಎಂಬ ಶೀರ್ಷಿಕೆಯಡಿ ಮಾಹಿತಿ ಪ್ರಕಟ ಮಾಡಲಾಗಿದೆ. ಭಾರತದಲ್ಲಿ ಅಳವಡಿಕೆ ಮಾಡಿರುವ ಡಿಜಿಟಲಿಕರಣಕ್ಕೆ ಫಿದಾ ಆಗಿರುವ ಬಿಲ್ ಗೇಟ್ಸ್ ಫಿದಾ ಆಗಿದ್ದು, ಅವರು ಈ ರೀತಿ ಬರೆದುಕೊಂಡಿದ್ದಾರೆ.
ಬಿಲ್ ಗೇಟ್ಸ್ ಪೋಸ್ಟ್ ನಲ್ಲಿ ಏನಿದೆ?
"ನನ್ನ ಭಾರತ ಪ್ರವಾಸದಲ್ಲಿ ನಾನು ನಂಬಲಾಗದ ಶಕ್ತಿಯೊಂದನ್ನು ಭೇಟಿಯಾದೆ. ಆ ಶಕ್ತಿಯೇ ಕುಸುಮಾ. ತನ್ನ ಸ್ಥಳೀಯ ಅಂಚೆ ಇಲಾಖೆಯಲ್ಲಿ ಅದ್ಭುತ ಕೆಲಸ ಮಾಡುತ್ತಿರುವ ಗಮನಾರ್ಹ ಯುವತಿ ಈಕೆ. ಹಣಕಾಸು ಅಭಿವೃದ್ಧಿಯನ್ನು ವೇಗಗೊಳಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಕುಸುಮಾರಂತಹ ಅಂಚೆ ಕಚೇರಿ ಪೋಸ್ಟ್‌ಮಾಸ್ಟರ್‌ಗಳು ಭಾರತದಾದ್ಯಂತ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಸ್ಮಾರ್ಟ್‌ಫೋನ್ ಸಾಧನಗಳು ಮತ್ತು ಬಯೋಮೆಟ್ರಿಕ್‌ಗಳನ್ನು ಬಳಕೆ ಮಾಡುತ್ತಿರುವುದು ಗಮನಾರ್ಹ. ಆಕೆ ಕೇವಲ ಹಣಕಾಸು ಸೇವೆಗಳನ್ನು ಒದಗಿಸುತ್ತಿಲ್ಲ, ಬದಲಾಗಿ ತನ್ನ ಸಮುದಾಯಕ್ಕೆ ಭರವಸೆ ಮತ್ತು ಆರ್ಥಿಕ ಸಬಲೀಕರಣವನ್ನು ನೀಡುತ್ತಿದ್ದಾಳೆ" ಅಂತ ಪೋಸ್ಟ್ ಮಾಡಿದ್ದಾರೆ.
- ಬಿಲ್ ಗೇಟ್ಸ್, ಮೈಕ್ರೋಸಾಫ್ಟ್ ಸಿಇಒ
ಬಿಲ್‌ಗೇಟ್ಸ್ ಹಂಚಿಕೊಂಡಿರುವ ಪೋಸ್ಟ್ ಲಿಂಕ್: https://www.linkedin.com/posts/williamhgates_g20india-activity-7098734833002024960-UhlY?trk=public_profile_share_view
ಡಿಜಿಟಲ್ ಬ್ಯಾಂಕಿಂಗ್ ಮತ್ತು ಭರವಸೆಯ ಹಾದಿ:
ಇನ್ನು ಬಿಲ್ ಅಂಡ್ ಮೆಲಿಂಗಾ ಗೇಟ್ಸ್ ಫೌಂಡೇಶನ್ ಮೂಲಕ ಹಂಚಿಕೊಂಡಿರುವ ವಿಡಿಯೋದ ಕೆಳಗಡೆ ಒಂದಿಷ್ಟು ಮಾಹಿತಿಯನ್ನೂ ಬರೆದುಕೊಂಡಿದ್ದಾರೆ. ಈ ವಿಡಿಯೋಗೆ 'ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಕಥೆ ಮತ್ತು ಯುವತಿ ವೃತ್ತಿಜೀವನದ ಭರವಸೆಯ ಹಾದಿ' ಎಂದು ಶೀರ್ಷಿಕೆಯನ್ನೂ ನಿಡಿದ್ದಾರೆ. "ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ 70 ಮಿಲಿಯನ್ ಜನರಿಗೆ ನಗದು ಹಿಂಪಡೆಯುವಿಕೆ ಮತ್ತು ಠೇವಣಿಗಳು, ರವಾನೆಗಳು ಮತ್ತು ಉಪಯುಕ್ತತೆಯ ಪಾವತಿಗಳಂತಹ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿದೆ. ದೇಶವು ತನ್ನ ಡಿಜಿಟಲ್ ಸೇವೆ ಮೂಲಕ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿದೆ. ಆದ್ದರಿಂದ ಸಾರ್ವಜನಿಕ ವಲಯ ಮತ್ತು ವ್ಯವಹಾರಗಳು ದೇಶದ ಎಲ್ಲಿಂದಲಾದರೂ ಪ್ರವೇಶಿಸಬಹುದಾದ ಸುರಕ್ಷಿತ ಮತ್ತು ತಕ್ಷಣದ ಕಾಗದರಹಿತ ಮತ್ತು ನಗದುರಹಿತ ಸೇವೆಗಳನ್ನು ಒದಗಿಸಬಹುದು. ಇದು ಜನರು ತಮ್ಮ ದೈನಂದಿನ ಕೆಲಸವನ್ನು ಕಳೆದುಕೊಳ್ಳದೆ ಡಿಜಿಟಲ್ ಬ್ಯಾಂಕಿಂಗ್ ಮೂಲಕ ವ್ಯವಹಾರ ಮಾಡಲು ಅನುವು ಮಾಡಿಕೊಡುತ್ತದೆ. ಜೊತೆಗೆ, ಕೆಲವು ಸಮಯಗಳಲ್ಲಿ ಅವರ ಉಳಿತಾಯವನ್ನು ಹೆಚ್ಚಿಸುತ್ತದೆ" ಎಂದು ಬರೆದುಕೊಂಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ ಲಿಂಕ್: https://www.gatesfoundation.org/video/kusuma-ippb-india?utm_source=linkedin&utm_medium=social&utm_campaign=dpi2023&utm_content=BG
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.