ಕಡಿಮೆ ಭೂಮಿಯಲ್ಲಿ ಅಧುನಿಕ ತಂತ್ರಜ್ಞಾನ ಬಳಸಿ ಹೆಚ್ಚು ಲಾಭ ಗಳಿಸುವ ವಿಧಾನಗಳನ್ನು ತಿಳಿಯಿರಿ 5 ಕೆಲಸಗಳನ್ನು ಏಕಕಾಲದಲ್ಲಿ ಮಾಡುವ ಮೂಲಕ ತಿಂಗಳಿಗೆ ಲಕ್ಷ ರೂ. ಆಧಿಕ ಗಳಿಸಬಹುದು.
ಬೆಂಗಳೂರು: ಕೃಷಿ ಭಾರತದ ಅತ್ಯಂತ ಹಳೆಯ ಬ್ಯುಸಿನೆಸ್ ಆಗಿದೆ. ಈ ಹಿಂದಿನಿಂದಲೂ ಜನರು ಕೃಷಿಯಲ್ಲಿ ಅದ್ಭುತವಾದ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಂದಿಗೂ ಕೃಷಿ ಮೂಲಕವೇ ಕೋಟ್ಯಧಿಪತಿಗಳಾದವರ ಉದಾಹರಣೆಗಳಿವೆ. ಭೂಮಿ ತಾಯಿ ನಂಬಿದವರ ಕೈ ಬಿಡಲ್ಲ ಎಂದು ರೈತರು ಹೇಳುತ್ತಾರೆ. ಕಡಿಮೆ ಭೂಮಿಯಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನ ಮಾಡಿ ಕೈ ತುಂಬಾ ಹಣ ಸಂಪಾದಿಸಬಹುದಾಗಿದೆ. ನೀವು ಬಯಸಿದರೆ ನಿಮ್ಮ ಬುದ್ಧಿವಂತಿಕೆಯಿಂದ ನೀವು ಒಂದು ಎಕರೆ ಭೂಮಿಯಿಂದ ತಿಂಗಳಿಗೆ 1 ಲಕ್ಷ ರೂಪಾಯಿ ಆದಾಯವನ್ನು ಗಳಿಸಬಹುದು. ಇದಕ್ಕಾಗಿ ನೀವು ಹೆಚ್ಚು ಲಾಭದಾಯಕ ಕೃಷಿಯನ್ನು ಮಾಡಬೇಕು.
ಲಕ್ಷ ಲಕ್ಷ ಹಣ ಸಂಪಾನೆ ಮಾಡಬೇಕಾದ್ರೆ ನಿಮ್ಮ ಭೂಮಿಯಲ್ಲಿ ಈ 5 ಕೆಲಸಗಳನ್ನು ಏಕಕಾಲದಲ್ಲಿ ಪ್ರಾರಂಭಿಸಬೇಕು. ಇವುಗಳಿಗೆ ಸರ್ಕಾರವು ರೈತರಿಗೆ ಆರ್ಥಿಕ ನೆರವು ಮತ್ತು ತರಬೇತಿ ಸೌಲಭ್ಯಗಳನ್ನು ಸಹ ನೀಡುತ್ತದೆ. ಆ ಐದು ಕೆಲಸಗಳು ಏನು ಎಂಬುದರ ಮಾಹಿತಿ ಇಲ್ಲಿದೆ.
1.ಮರಗಳ ಕೃಷಿ
ಒಂದು ಎಕರೆ ಜಮೀನಿನಲ್ಲಿ ಮೊದಲು ವಾಣಿಜ್ಯ ಗಿಡಗಳನ್ನು ನೆಡಬೇಕು. ಜಮೀನಿನ ಕೃಷಿಯು ಸುತ್ತಲೂ ಗಿಡಗಳನ್ನು ಹಚ್ಚಿಕೊಳ್ಳಬೇಕು. ಇದು ನಿಮ್ಮ ಜಮೀನಿನ ಗಡಿಯನ್ನು ಸಹ ಗುರುತಿಸಲು ಸಹಾಯವಾಗುತ್ತದೆ. ರೋಸ್‌ವುಡ್, ಶ್ರೀಗಂಧ, ಸಾಗುವಾನಿ, ಮಹಾಗನಿಮ, ಖರ್ಜೂರು, ಮಾವು ಹೀಗೆ ಉತ್ತಮ ಆದಾಯ ಕೊಡುವಂತಹ ಮರಗಳನ್ನು ನೆಡಬೇಕು. ಈ ಮರಗಳು ಕೆಲವು ವರ್ಷಗಳ ನಂತರ ನಿಮಗೆ ಆದಾಯ ನೀಡುತ್ತವೆ. ನಿಮ್ಮ ಪ್ರದೇಶದ ಮಣ್ಣು ಮತ್ತು ತಾಪಮಾನಕ್ಕೆ ಅನುಗುಣವಾಗಿ ಹಣ್ಣಿನ ಮರಗಳನ್ನು ನೆಡಬಹುದು. ಇದರಿಂದ ನಿಮಗೆ ಋತುಮಾನಕ್ಕೆ ತಕ್ಕಂತೆ ಹೆಚ್ಚುವರಿ ಆದಾಯ ನೀಡುತ್ತದೆ.
2.ಪಶುಪಾಲನೆ
ಕೃಷಿ ಭೂಮಿಗೆ ಬೇಲಿ ಹಾಕಿಕೊಂಡ ನಂತರ ಪಶುಪಾಲನೆ ಮಾಡಲು ಯೋಜನೆ ರೂಪಿಸಿಕೊಳ್ಳಬೇಕು. ಇಂದು ಹೈನ್ಯೋದ್ಯಮವೂ ಸಹ ಹೆಚ್ಚಿನ ಆದಾಯದ ಮೂಲವಾಗಿದೆ. ಹಸು, ಎಮ್ಮೆಯ ಶುದ್ಧ ಹಾಲನ್ನು ಲೀಟರ್‌ಗೆ 80 ರೂ.ವರೆಗೂ ಮಾರಾಟ ಮಾಡಬಹುದು. ಪ್ರಾಣಿಗಳಿಂದ ಉತ್ಪತ್ತಿಯಾದ ತ್ಯಾಜ್ಯ ಜಮೀನಿಗೆ ಸಾವಯವ ಗೊಬ್ಬರವಾಗುತ್ತದೆ. ಪ್ರಾಣಿಗಳನ್ನು ನಿಮ್ಮದೇ ಹೊಲದ ಬದುವಿನಲ್ಲಿ ಮೇಯಿಸಬಹುದು. ಹಾಲು ಮಾರಾಟದಿಂದ
3.ಋತುಮಾನ ತರಕಾರಿ
1 ಎಕರೆ ಜಮೀನಿನಲ್ಲಿ ಸ್ವಲ್ಪ ಸ್ಥಳದಲ್ಲಿಯೇ ಋತುಮಾನಕ್ಕೆ ತಕ್ಕಂತೆ ತರಕಾರಿ ಬೆಳೆಯಬಹುದು. ಉದಾಹರಣೆಗೆ ಟೊಮೆಟೋ, ಬದನೆ, ಆಲೂಗಡ್ಡೆ, ಸೊಪ್ಪು ಬೆಳೆದುಕೊಂಡು ಮಾರಾಟ ಮಾಡಬಹುದು. ಇದು ಸಹ ನಿಮಗೆ ಆದಾಯದ ಮೂಲವಾಗಲಿದೆ. ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾದಾಗ ನಿರೀಕ್ಷೆಗಿಂತ ಲಾಭದ ಪ್ರಮಾಣ ಹೆಚ್ಚಾಗುತ್ತದೆ. ಈ ತರಕಾರಿ ನಿಮ್ಮ ಮನೆಯ ಅವಶ್ಯಕತೆಯನ್ನು ಪೂರೈಸುವದರಿಂದ ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ರೈತರಿಗೆ ಯಾವೆಲ್ಲಾ ವಸ್ತುಗಳ ಮೇಲೆ ಸಬ್ಸಿಡಿ ಸಿಗುತ್ತೆ? ಹೊಸ ವರ್ಷಕ್ಕೆ ಭಾರತ ಸರ್ಕಾರದಿಂದ ಸಿಕ್ಕಿದೆ ಸ್ಪೆಷಲ್ ಗಿಫ್ಟ್
4.ದವಸ, ಧಾನ್ಯಗಳು
ತರಕಾರಿ, ಹೈನೋದ್ಯಮದೊಂದಿಗೆ ದವಸ ಧಾನ್ಯಗಳನ್ನು ಬೆಳೆದುಕೊಳ್ಳಬೇಕು. ಗೋಧಿ, ಸಜ್ಜೆ, ಜೋಳ, ರಾಗಿ ಅಂತಹ ಬೆಳೆಗಳನ್ನು ಬೆಳೆದುಕೊಳ್ಳಬೇಕು. ಈ ರೀತಿಯ ಬೆಳೆ ಋತುಮಾನದ ಪ್ರಕಾರ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಅಥವಾ ಧಾನ್ಯಗಳ ಕೃಷಿ ಮಾಡಬೇಕು. ಈ ಮೂರು ಬೆಳೆಗಳಲ್ಲಿ ಒಂದನ್ನು ಪ್ರತಿ ಋತುವಿನಲ್ಲಿ ಬೆಳೆಯುವ ಮೂಲಕ ಪ್ರತಿ 4-5 ತಿಂಗಳಿಗೊಮ್ಮೆ ಉತ್ತಮ ಉತ್ಪಾದನೆ ಮತ್ತು ಸ್ಥಿರ ಆದಾಯವನ್ನು ಪಡೆಯಬಹುದು.
5.ಸೌರ ಫಲಕ ಅಳವಡಿಕೆ
ಇತ್ತೀಚಿನ ದಿನಗಳಲ್ಲಿ ಸೌರಶಕ್ತಿಯ ಬಳಕೆ ಹೆಚ್ಚುತ್ತಿದೆ. ಅನೇಕ ರಾಜ್ಯ ಸರ್ಕಾರಗಳು ಸೋಲಾರ್ ಪ್ಯಾನಲ್ ಅಳವಡಿಸಲು ರೈತರಿಗೆ ಹಣ ನೀಡುತ್ತಿದ್ದು, ಇದರಿಂದ ರೈತರು ವಿದ್ಯುತ್ ಮತ್ತು ನೀರಾವರಿ ವೆಚ್ಚವನ್ನು ಉಳಿಸಬಹುದು. ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಇದರಿಂದ ರೈತರಿಗೆ ಪ್ರತಿ ತಿಂಗಳು ಹೆಚ್ಚುವರಿ ಆದಾಯ ದೊರೆಯಲಿದೆ. ಖಾಲಿ ಜಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಗೆ ಮಾಡಿಕೊಂಡು ಇದರ ಜೊತೆಯಲ್ಲಿಯೇ ತರಕಾರಿ ಬೆಳೆದುಕೊಳ್ಳಬಹುದು.
ಇದನ್ನೂ ಓದಿ: ರೈತರೇ ಅಪ್ಪಿ ತಪ್ಪಿಯೂ ಈ 2 ತಪ್ಪುಗಳನ್ನ ಮಾಡಬೇಡಿ; ಇಲ್ಲವಾದ್ರೆ ಸರ್ಕಾರದ ಹಣ ಬರಲ್ಲ