10 ಸರ್ಕಾರಿ ಬ್ಯಾಂಕ್‌ಗಳ ವಿಲೀನ ಏ.1ರಿಂದ ಜಾರಿಗೆ!

By Kannadaprabha NewsFirst Published Mar 5, 2020, 7:41 AM IST
Highlights

10 ಸರ್ಕಾರಿ ಬ್ಯಾಂಕ್‌ಗಳ ವಿಲೀನ ಏ.1ರಿಂದ ಜಾರಿಗೆ| ಕರ್ನಾಟಕದ ಕೆನರಾದೊಂದಿಗೆ ಸಿಂಡಿಕೇಟ್‌ ಬ್ಯಾಂಕ್‌ ವಿಲೀನ| ಜಾಗತಿಕ ಬ್ಯಾಂಕ್‌ಗಳಿಗೆ ಸ್ಪರ್ಧೆಯೊಡ್ಡಲು ಈ ಕ್ರಮ ಸಹಕಾರಿ

ನವದೆಹಲಿ[ಮಾ.05]: 10 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ, ಅವುಗಳ ಸಂಖ್ಯೆಯನ್ನು 4ಕ್ಕೆ ಸೀಮಿತಗೊಳಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಹೀಗಾಗಿ 2017ರಲ್ಲಿ ದೇಶದಲ್ಲಿ 27ರಷ್ಟಿದ್ದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಂಖ್ಯೆ ಇನ್ನು 12ಕ್ಕೆ ಇಳಿಯಲಿದೆ. ಹೊಸ ವಿಲೀನ ಪ್ರಕ್ರಿಯೆ ಏ.1ರಿಂದ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಂಪುಟ ಸಭೆ ಬಳಿಕ ತಿಳಿಸಿದರು.

ಮೊದಲ ಸುತ್ತಿನಲ್ಲಿ ಎಸ್‌ಬಿಐ, ಬ್ಯಾಂಕ್‌ ಬರೋಡಾ, ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ಗಳೊಂದಿಗೆ ಇತರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ್ದ ಕೇಂದ್ರ ಸರ್ಕಾರ, ಜಾಗತಿಕ ಮಟ್ಟದ ದೊಡ್ಡ ಬ್ಯಾಂಕ್‌ಗಳನ್ನು ರಚಿಸುವ ನಿಟ್ಟಿನಲ್ಲಿ ಇದೀಗ ಮತ್ತೊಂದು ಸುತ್ತಿನಲ್ಲಿ ಬ್ಯಾಂಕ್‌ಗಳ ವಿಲೀನ ಮಾಡುತ್ತಿದೆ.

ಕೇಂದ್ರದಿಂದ ಇನ್ನಷ್ಟು ಬ್ಯಾಂಕ್‌ಗಳ ವಿಲೀನ?

ಸರ್ಕಾರದ ಪ್ರಸ್ತಾಪದ ಅನ್ವಯ, ಓರಿಯಂಟಲ್‌ ಬ್ಯಾಂಕ್‌ ಕಾಮರ್ಸ್‌ ಹಾಗೂ ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ಗಳು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ವಿಲೀನವಾಗಲಿವೆ. ಸಿಂಡಿಕೇಟ್‌ ಬ್ಯಾಂಕ್‌ ಕೆನರಾದೊಂದಿಗೆ, ಆಂಧ್ರ ಬ್ಯಾಂಕ್‌ ಹಾಗೂ ಕಾರ್ಪೊರೇಷನ್‌ ಬ್ಯಾಂಕ್‌ಗಳು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಾಗೂ ಅಲಹಾಬಾದ್‌ ಬ್ಯಾಂಕ್‌ ಅನ್ನು ಇಂಡಿಯನ್‌ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗುತ್ತದೆ.

ಟಾಪ್‌ 5: ವಿಲೀನದ ಬಳಿಕ 52 ಲಕ್ಷ ಕೋಟಿ ರು.ಗಿಂತ ಹೆಚ್ಚು ವ್ಯವಹಾರ ನಡೆಸುವ ಎಸ್‌ಬಿಐ ನಂ.1, 18 ಲಕ್ಷ ಕೋಟಿ ರು.ನೊಂದಿಗೆ ಪಿಎನ್‌ಬಿಗೆ ನಂ.2, ಬ್ಯಾಂಕ್‌ ಆಫ್‌ ಬರೋಡಾ ನಂ.3, ಕೆನರಾ ಬ್ಯಾಂಕ್‌ ನಂ.4, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ನಂ.5 ಆಗಿ ಹೊರಹೊಮ್ಮಲಿದೆ.

ಕೇಂದ್ರದಿಂದ ಇನ್ನಷ್ಟು ಬ್ಯಾಂಕ್‌ಗಳ ವಿಲೀನ?

click me!