ಮರ್ಸಿಡಿಸ್-ಬೆಂಜ್‌ ಇ-ಕಾರ್‌: ಲುಕ್ ಹೇಗಿದೆ?

First Published Jun 22, 2018, 11:25 AM IST
Highlights

ಬರಲಿದೆ ಮರ್ಸಿಡಿಸ್-ಬೆಂಜ್‌ ಇ-ಕಾರ್‌

ಪುಣೆಯ ಚಕನ್ ಫ್ಯಾಕ್ಟರಿಯಲ್ಲಿ ಉತ್ಪಾದನೆ

ಭಾರತದ ಮೊದಲ ಲಕ್ಸುರಿ ಇಲೆಕ್ಟ್ರಿಕ್ ಕಾರು

ಭಾರತದ ವಿದ್ಯುತ್ ವಾಹನ ನಿತಿಗೆ ಬೆಂಬಲ

ನವದೆಹಲಿ(ಜೂ.22): ವಿಶ್ವದ ನಂಬರ್ ಒನ್ ಐಶಾರಾಮಿ ಕಾರು ತಯಾರಿಕಾ ಕಂಪನಿ, ಮರ್ಸಿಡಿಸ್-ಬೆಂಜ್‌  ಹೊಸ ಪ್ರಾಜೆಕ್ಟ್ ಗೆ ಮುನ್ನುಡಿ ಬರೆದಿದೆ. ಕಾರು ತಯಾರಿಕ ದೈತ್ಯ ಕಂಪನಿ ಬೆಂಜ್‌ ಭಾರತದ ಪುಣೆಯ ಚಕನ್‌ನಲ್ಲಿನ ಫ್ಯಾಕ್ಟರಿಯಲ್ಲಿ ಇಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಸಜ್ಜಾಗುತ್ತಿದೆ.

ಜರ್ಮನಿಯು ಭಾರತದ ಲಕ್ಷುರಿ ಕಾರುಗಳ ಮಾರುಕಟ್ಟೆಯನ್ನು ಆಳುತ್ತಿದ್ದು, ಮುಂಬರುವ ವರ್ಷಗಳಲ್ಲಿ ಭಾರತವು ಎಲೆಕ್ಟ್ರಿಕ್ ವಾಹನಗಳಿಗೆ  ಪ್ರಮುಖ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ ಎನ್ನಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ   ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು, ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯವಿರುವ ದಹನ ತಂತ್ರಜ್ಞಾನಗಳ ಮೇಲೆ ಸರ್ಕಾರ ಗಮನಹರಿಸುತ್ತಿದೆ. ಈ ನಿಟ್ಟಿನಲ್ಲಿ ಬೆಂಜ್‌ನ  ಹೊಸ ಯೋಜನೆ ಭಾರತದಲ್ಲಿ ಯಶಸ್ವಿಯಾಗುವ ಸಾಧ್ಯತೆ ಇದೆ.

The technical experts make it to , which is also the headquarters to Mercedes-Benz India.
Here's a look at our customers getting to know their Stars better by understanding the inspection process at Trinity Motors, . pic.twitter.com/0fLofBdvya

— Mercedes-Benz India (@MercedesBenzInd)

ಈ ಕುರಿತು ಮಾಹಿತಿ ನೀಡಿರುವ ಮರ್ಸಿಡಿಸ್-ಬೆನ್ಜ್ ಇಂಡಿಯಾ ವಿ.ಪಿ. (ಸೇಲ್ಸ್ ಅ್ಯಂಡ್ ಮಾರ್ಕೆಟಿಂಗ್) ಆಗಿರುವ ಮೈಕೆಲ್ ಜೋಪ್, ಭಾರತದ ಮಾರುಕಟ್ಟೆಯಲ್ಲಿ ದೀರ್ಘಕಾಲದ ದೃಷ್ಟಿಕೋನ ಇಟ್ಟುಕೊಂಡು ನಾವು ಇಲ್ಲಿ ಇ-ಕಾರುಗಳನ್ನು ತಯಾರಿಸಲು ಬಯಸುತ್ತೇವೆ ಎಂದು  ಹೇಳಿದ್ದಾರೆ. ಸರ್ಕಾರದ ಕಡೆಯಿಂದ ಸೂಕ್ತ ಸೌಲಭ್ಯ ಒದಗಿಸುವ ಭರವಸೆ ಸಿಕ್ಕ ಮೇಲೆ ಪ್ರಾಜೆಕ್ಟ್ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಭಾರತ ಸರ್ಕಾರದ ವಿದ್ಯುತ್ ವಾಹನ ನೀತಿಯತ್ತ ಚಿತ್ತ ಹರಿಸುತ್ತಿರುವ ಬೆಂಜ್‌ ,  ಮುಂದಿನ ವರ್ಷದಿಂದ ಹೊಸ ಇಲೆಕ್ಟ್ರಿಕ್ ಉಪ ಬ್ರಾಂಡ್ 'ಇಕ್ಯೂ' ನ ಜಾಗತಿಕ ಮಾರಾಟವನ್ನು ಪ್ರಾರಂಭಿಸಲಿದೆ.

click me!