ಮೈಂಡ್ ಬ್ಲೊಯಿಂಗ್ ಈ ಹೋಂಡಾ ಗೋಲ್ಡ್ ವಿಂಗ್..!

First Published Jun 20, 2018, 12:29 PM IST
Highlights

ಬಿಡುಗಡೆಯಾಯ್ತು ಹೋಂಡಾ ಗೋಲ್ಡ್ ವಿಂಗ್

ಜೈಪುರದ ಮೊದಲ ಗ್ರಾಹಕನಿಗೆ ಕೀ ಹಸ್ತಾಂತರ

ನೂತನವಾಗಿ ಅಭಿವೃದ್ಧಿಪಡಿಸಿದ 6 ಸಿಲಿಂಡರ್‌ನ ಎಂಜಿನ್

7 ಸ್ಪೀಡ್‌ನ ಡ್ಯುಯೆಲ್ ಕ್ಲಚ್ ಟ್ರಾನ್ಸ್ ಮಿಷನ್

ಆ್ಯಪೆಲ್ ಕಾರ್ ಪ್ಲೇ ಸೌಲಭ್ಯ ಹೊಂದಿರುವ ಗೋಲ್ಡ್ ವಿಂಗ್

ಬೆಂಗಳೂರು(ಜೂ.20): ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಪ್ರೈವೇಟ್ ಲಿಮಿಟೆಡ್ ತನ್ನ ಗೋಲ್ಡ್ ವಿಂಗ್ ಮಾದರಿಯ ಬೈಕ್‌ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ವರ್ಷದ ಆರಂಭದಲ್ಲಿ ನಡೆದಿದ್ದ ಆಟೊಎಕ್ಸ್‌ಪೋದಲ್ಲಿ ಈ ಬೈಕ್ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದ ಕಂಪನಿ, ಇದೀಗ ಜೈಪುರ್‌ನಲ್ಲಿ ಮೊದಲ ಗ್ರಾಹಕನಿಗೆ ಕೀ ಹಸ್ತಾಂತರಿಸುವ ಮೂಲಕ ದೇಶಾದ್ಯಂತ ಮುಕ್ತ ಮಾರುಕಟ್ಟೆಗೆ ಬೈಕ್ ಲಗ್ಗೆ ಇರಿಸಿದೆ.

ಗೋಲ್ಡ್‌ವಿಂಗ್ ಬೈಕ್‌ ವಿಶೇಷತೆಗಳು:
ನೂತನವಾಗಿ ಅಭಿವೃದ್ಧಿಪಡಿಸಿದ 6 ಸಿಲಿಂಡರ್‌ನ ಎಂಜಿನ್

7 ಸ್ಪೀಡ್‌ನ ಡ್ಯುಯೆಲ್ ಕ್ಲಚ್ ಟ್ರಾನ್ಸ್ ಮಿಷನ್ (ಡಿಸಿಟಿ)

ಆ್ಯಪೆಲ್ ಕಾರ್ ಪ್ಲೇ ಸೌಲಭ್ಯ (ಇದು ಮೋಟರ್ ಸೈಕಲ್ ಇತಿಹಾಸದಲ್ಲೇ ಮೊದಲು)

ಆ್ಯಪೆಲ್ ಕಾರ್ ಪ್ಲೇ ಇಂಟಗ್ರೇಷನ್ ನಿಂದ ಐಫೋನ್ ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್ ಜೊತೆಗೆ ನೇರ ಸಂಪರ್ಕಹೊಂದುವ ಅವಕಾಶ

ಮುಂಭಾಗದಲ್ಲಿ ವಿದ್ಯುನ್ಮಾನ ವಿಶಾಲ ಪರದೆ, ಎತ್ತರ, ನೋಟ ಹೊಂದಾಣಿಸಲು ಅವಕಾಶ

7 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ಹೊಂದಿದೆ.

ವೈರ್ ಮೂಲಕ ಕ್ರ್ಯೂಸ್ ಕಂಟ್ರೋಲ್ ಸೌಲಭ್ಯ (ಟಿಬಿಡಬ್ಲ್ಯೂ)

ಪೂರ್ಣ ಪ್ರಮಾಣದ ಎಲ್‌ಇಡಿ ಲೈಟಿಂಗ್, ಸ್ವಯಂಚಾಲಿತವಾಗಿ ಕ್ಯಾನ್ಸಲ್ ಆಗುವ ಇಂಡಿಕೇಟರ್‌ಗಳು.

ಸ್ಮಾರ್ಟ್ ಕೀ ಕಂಟ್ರೋಲ್, ಇಗ್ನಿಷನ್, ಲಗೇಜ್‌ಗೆ ಹಿಂಬದಿಯಲ್ಲಿ ವಿಶೇಷ ವಿನ್ಯಾಸ.

ಸದ್ಯ ಕೆಂಪು ವರ್ಣದಲ್ಲಿ ಬೈಕ್ ಲಭ್ಯವಿದ್ದು, ಇದರ ಬೆಲೆ 26.85 ಲಕ್ಷದಿಂದ ಆರಂಭವಾಗಲಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

click me!