Viral: ಎರಡನೇ ಸಲ ಕೆಲಸ ಹೋಯ್ತು, ಐಟಿ ಜಾಬ್‌ಗೆ ಬೇಸತ್ತು ರೆಸ್ಟೋರೆಂಟ್ ತೆರೆದ, ಈಗ ತಿಂಗಳಿಗೆ 1.3 ಕೋಟಿ ದುಡಿತಿದ್ದಾನೆ ಟೆಕ್ಕಿ!

Published : Apr 14, 2026, 12:24 PM IST
From Tech Layoff to 1 3 Crore Monthly Income Zeeshans Taco Success Story

ಸಾರಾಂಶ

ನ್ಯೂಯಾರ್ಕ್‌ನಲ್ಲಿ ಐಟಿ ಕೆಲಸ ಕಳೆದುಕೊಂಡ 34 ವರ್ಷದ ಜೀಶಾನ್ ಬಕ್ರಾನಿ, ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದರು. ತಮ್ಮ ಉಳಿತಾಯದ ಹಣದಿಂದ 'ನಿಶಾನ್' ಎಂಬ ಪಾಕಿಸ್ತಾನಿ-ಅಮೆರಿಕನ್ ಫ್ಯೂಷನ್ ರೆಸ್ಟೋರೆಂಟ್ ತೆರೆದು, ಇಂದು ತಿಂಗಳಿಗೆ 1.3 ಕೋಟಿ ರೂ.ಗೂ ಹೆಚ್ಚು ಸಂಪಾದಿಸುತ್ತಿದ್ದಾರೆ.

ಕಾರ್ಪೊರೇಟ್ ಜಗತ್ತಿನ ಕಳೆದುಕೊಂಡಿದ್ದು, ಫುಡ್ ವರ್ಲ್ಡ್‌ ಸಿಕ್ಕಿದೆ. 34 ವರ್ಷದ ಜೀಶಾನ್ ಬಕ್ರಾನಿ, ನ್ಯೂಯಾರ್ಕ್‌ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ರು. ಪ್ರಾಡಕ್ಟ್ ಮ್ಯಾನೇಜ್‌ಮೆಂಟ್, ದಿನಾ ಮೀಟಿಂಗ್, ಸ್ಟ್ರಾಟಜಿ ಅಂತಾ ಬ್ಯುಸಿ ಇರ್ತಿದ್ರು. ಆದರೆ, ಆಗಸ್ಟ್ 2025ರಲ್ಲಿ ಎರಡನೇ ಬಾರಿಗೆ ಕೆಲಸದಿಂದ ತೆಗೆದಾಗ, ಅವರಿಗೆ '9-ರಿಂದ-5'ರ ಈ ಐಟಿ ಕೆಲಸ ಇನ್ನು ಸಾಕಾಗಿ ಹೋಯ್ತು. ಬೇರೆ ಏನು ಕೆಲಸ ಮಾಡುವುದು, ಯಾರಾದರೂ ಕೈತುಂಬಾ ಸಂಬಳ ನೀಡುವ ಐಟಿ ಕೆಲಸ ಬಿಡುವುದುಂಟೇ? ಹೌದು ಜೀಶಾನ್ ಬಕ್ರಾನಿ ಐಟಿ ಕೆಲಸಕ್ಕೆ ಗುಡ್‌ಬೈ ಹೇಳಲು ನಿರ್ಧರಿಸಿದ.

CNBC ವರದಿ ಪ್ರಕಾರ, ಬಕ್ರಾನಿ ಅದುವರೆಗೆ ದುಡಿದು ಕೂಡಿಟ್ಟಿದ್ದ ತಮ್ಮ ಸ್ವಂತ ಹಣದಲ್ಲಿ 70,000 ಡಾಲರ್ (ಸುಮಾರು 65 ಲಕ್ಷ ರೂ.) ಹೂಡಿಕೆ ಮಾಡಿ, ಮ್ಯಾನ್‌ಹ್ಯಾಟನ್‌ನಲ್ಲಿ 'ನಿಶಾನ್' ಅನ್ನೋ ಹೊಸ ರೆಸ್ಟೋರೆಂಟ್ ಶುರುಮಾಡಿದ್ರು. ಇವತ್ತು ಅವರ ಈ ಸಾಹಸಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ತಿಂಗಳಿಗೆ 1,40,000 ಡಾಲರ್ (ಸುಮಾರು 1.3 ಕೋಟಿ ರೂ.) ಸಂಪಾದನೆ ಮಾಡ್ತಿದ್ದಾರೆ.

ಚಿಕಾಗೋದಲ್ಲಿ ಪಾಕಿಸ್ತಾನಿ-ಅಮೆರಿಕನ್ ಕುಟುಂಬದಲ್ಲಿ ಬೆಳೆದ ಬಕ್ರಾನಿಗೆ, ಎರಡು ಸಂಸ್ಕೃತಿಗಳ ರುಚಿ ಬೆರೆತಿತ್ತು. ಅವರ ತಾಯಿ ಅಮೆರಿಕನ್ ಖಾದ್ಯಗಳಿಗೆ ದಕ್ಷಿಣ ಏಷ್ಯಾದ ಮಸಾಲೆಗಳನ್ನು ಹಾಕಿ ಹೊಸ ರುಚಿ ಕೊಡ್ತಿದ್ರು. ಇದೇ ಅವರ ಇವತ್ತಿನ ಅಡುಗೆಯ ಸ್ಪೂರ್ತಿ.

 

 

ನಿಶಾನ್ ಸ್ಪೆಷಾಲಿಟಿ ಏನು?

ನಿಶಾನ್‌ನಲ್ಲಿ ಸಿಗೋದು ಸಾಮಾನ್ಯ ಫಾಸ್ಟ್ ಫುಡ್ ಅಲ್ಲ. ಬದಲಿಗೆ, ಬಕ್ರಾನಿ 'ಪಾಕಿಸ್ತಾನಿ-ಅಮೆರಿಕನ್ ಸ್ಟ್ರೀಟ್ ಫುಡ್' ಮಾರಾಟ ಮಾಡ್ತಾರೆ. ಬಿಹಾರಿ-ಶೈಲಿಯ ಬಾರ್ಬಕೋವಾ ಟ್ಯಾಕೋಸ್, ಪಾಕಿಸ್ತಾನಿ ಚಾಪ್ಡ್ ಚೀಸ್, ಮತ್ತು ಬಫಲೋ ತಂದೂರಿ ಚಿಕನ್ ಸ್ಯಾಂಡ್‌ವಿಚ್‌ಗಳು ಇಲ್ಲಿನ ಸ್ಪೆಷಲ್. ಮನೆಯಲ್ಲಿ ಟೋರ್ಟಿಲ್ಲಾಗಳ ಬದಲು ಪರಾಠ ಬಳಸಿ, ಬರ್ಗರ್‌ಗಳಿಗೆ ಖಾರವಾದ ಚಟ್ನಿ ಹಾಕಿ ಮಾಡ್ತಿದ್ದ ಅಡುಗೆಯನ್ನೇ ಇಲ್ಲಿ ಪರಿಚಯಿಸಿದ್ದಾರೆ.

ತಮ್ಮ ಹಳೆಯ ಟೆಕ್ ಕೆಲಸಕ್ಕೆ ಹೋಲಿಸಿದರೆ, ಈಗಿನ ಕೆಲಸದಲ್ಲಿ ತುಂಬಾ ವ್ಯತ್ಯಾಸವಿದೆ ಅಂತ ಬಕ್ರಾನಿ ಹೇಳ್ತಾರೆ. ಹಿಂದೆ ಉದ್ದುದ್ದ ಮೀಟಿಂಗ್‌ಗಳು, ಬದಲಾಗೋ ಗುರಿಗಳಿದ್ದವು. ಆದ್ರೆ ಈಗ ಸಂಪೂರ್ಣ ಕ್ರಿಯೇಟಿವ್ ಕಂಟ್ರೋಲ್ ಅವರ ಕೈಯಲ್ಲಿದೆ. ಅವರ ಉದ್ಯಮಕ್ಕೆ ಅವರೇ ಬಾಸ್.

ದಿನಕ್ಕೆ 14 ಗಂಟೆ ಕೆಲಸ ಮಾಡಿದ್ರೂ, ಈ ಸ್ವಾತಂತ್ರ್ಯ ಮತ್ತು ಮಾಲೀಕತ್ವದ ಭಾವನೆ ತುಂಬಾ ಖುಷಿ  ಕೊಡುತ್ತೆ ಅಂತಾರೆ ಬಕ್ರಾನಿ. ವಿಡಿಯೋ ನೋಡಿ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಬಟ್ಟೆ ಬಳಸಿ ಬೇಜಾರು ಬಂದ್ರೆ ಇಲ್ಲಿ ಬರಬಹುದು!
ಯುದ್ಧದ ಸಂಕಷ್ಟಕ್ಕೆ ನಲುಗಿದ ಅಂಬಾನಿ, ಭಾರೀ ಮೊತ್ತಕ್ಕೆ ಅಂಗಸಂಸ್ಥೆಯನ್ನು ಮಾರಿದ ರಿಲಯನ್ಸ್‌ ಇಂಡಸ್ಟ್ರೀಸ್‌