ಅಪ್ಪ ಕಟ್ಟಿದ ಉದ್ಯಮ ಸಾಮ್ರಾಜ್ಯವನ್ನು ಮಕ್ಕಳು ಮುನ್ನಡೆಸಿಕೊಂಡು ಹೋಗುತ್ತಿರೋದಕ್ಕೆ ಭಾರತದಲ್ಲಿ ಅನೇಕ ನಿದರ್ಶನಗಳು ಸಿಗುತ್ತವೆ. ಇಂಥವರಲ್ಲಿ ಅಕ್ಷಾಲಿ ಶಾ ಕೂಡ ಒಬ್ಬರು. ಈಕೆ ಪರಾಗ್ ಮಿಲ್ಕ್ ಫುಡ್ಸ್ ಸ್ಥಾಪಕ ದೇವೇಂದ್ರ ಶಾ ಅವರ ಮಗಳು.
Business Desk: ದೇಶದಲ್ಲಿ ಅನೇಕ ಉದ್ಯಮಿಗಳಿಗೆ ಅವರ ಮಕ್ಕಳು ಉದ್ಯಮ ಮುನ್ನಡೆಸಲು ನೆರವು ನೀಡುತ್ತಿದ್ದಾರೆ. ದೇಶದ ಅತೀ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಮೂವರು ಮಕ್ಕಳು ಕೂಡ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಇಂಥ ಅನೇಕ ನಿದರ್ಶನಗಳು ಸಿಗುತ್ತವೆ. ಕುಟುಂಬದ ಉದ್ಯಮವನ್ನು ಮುನ್ನಡೆಸಲು ಅನೇಕರು ಉತ್ತಮ ಉದ್ಯೋಗದ ಆಫರ್ ಗಳನ್ನು ತಿರಸ್ಕರಿಸಿರೋದು ಕೂಡ ಇದೆ. ಈ ರೀತಿ ತಂದೆಗೆ ಉದ್ಯಮದಲ್ಲಿ ನೆರವು ನೀಡುತ್ತಿರುವ ಮಕ್ಕಳಲ್ಲಿ ಅಕ್ಷಾಲಿ ಶಾ ಕೂಡ ಒಬ್ಬರು. ಅಕ್ಷಾಲಿ ಶಾ ಪರಾಗ್ ಮಿಲ್ಕ್ ಫುಡ್ಸ್ ಸಂಸ್ಥಾಪಕ ದೇವೇಂದ್ರ ಶಾ ಅವರ ಮಗಳು. ದೇವೇಂದ್ರ ಶಾ ಅವರ 2,475 ಕೋಟಿರೂ. ಮೌಲ್ಯದ ಕಂಪನಿಯನ್ನು ಮುನ್ನಡೆಸಲು ಅಕ್ಷಾಲಿ ಶಾ ನೆರವು ನೀಡುತ್ತಿದ್ದಾರೆ. ಅಕ್ಷಾನಿ ಬ್ರ್ಯಾಂಡ್ ಮ್ಯಾನೇಜ್ಮೆಂಟ್, ಪ್ಲ್ಯಾನಿಂಗ್ ಹಾಗೂ ಬ್ಯುಸಿನೆಸ್ ಡೆವಲಪ್ ಮೆಂಟ್ ನಲ್ಲಿ ಸಾಕಷ್ಟು ಪರಿಣತಿ ಹೊಂದಿದ್ದಾರೆ.
ಅಪ್ಪನ ಕಂಪನಿಗೆ 2010ರಲ್ಲಿ ಮ್ಯಾನೇಜ್ಮೆಂಟ್ ಟ್ರೈನಿಯಾಗಿ ಸೇರಿದ ಅಕ್ಷಾನಿ ಆ ಬಳಿಕ ಒಂದೊಂದೇ ಹುದ್ದೆಗಳನ್ನು ಮೇಲೇರುತ್ತ ಪ್ರಸ್ತುತ ಉಪಾಧ್ಯಕ್ಷೆ ಹುದ್ದೆ ನಿರ್ವಹಿಸುತ್ತಿದ್ದಾರೆ.
ಬ್ರ್ಯಾಂಡ್ ಮ್ಯಾನೇಜ್ಮಂಟ್, ಪ್ಲಾನಿಂಗ್, ಬ್ಯುಸಿನೆಸ್ ಡೆವಲಪ್ ಮೆಂಟ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಕ್ಷಾಲಿ ಪರಿಣತಿ ಹೊಂದಿದ್ದಾರೆ. 33 ವರ್ಷದ ಅಕ್ಷಾಲಿ ಎಸ್ .ಪಿ. ಜೈನ್ ವಿಶ್ವವಿದ್ಯಾಲಯದಿಂದ ಫ್ಯಾಮಿಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಪುಣೆ ಸಮೀಪದ ಮ್ಯಾನ್ ಚಾರ್ ನಲ್ಲಿ 1992ರಲ್ಲಿ ಸಣ್ಣ ಡೈರಿ ಯುನಿಟ್ ಅನ್ನು ಅಕ್ಷಾಲಿ ತಂದೆ ಪ್ರಾರಂಭಿಸಿದ್ದರು. ಗೋವರ್ಧನ್, ಗೋ, ಪ್ರೈಡ್ ಆಫ್ ಕೌಸ್ ಹಾಗೂ ಟಾಪ್ ಅಪ್ ಈ ಕಂಪನಿಯ ಪ್ರಮುಖ ಬ್ರ್ಯಾಂಡ್ ಗಳಾಗಿವೆ.
ದಿನಕ್ಕೆ 20ರೂ. ಗಳಿಸುತ್ತಿದ್ದ ಈಕೆ ಇಂದು 40 ಕೋಟಿ ವಹಿವಾಟು ನಡೆಸೋ ಕಂಪನಿ ಒಡತಿ
ಪರಾಗ್ ಮಿಲ್ಕ್ ಫುಡ್ಸ್ ಪ್ರಸ್ತುತ 2,475 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿದೆ. ಪರಾಗ್ ಮಿಲ್ಕ್ ಫುಡ್ಸ್ ಬೆಳವಣಿಗೆಯಲ್ಲಿ ಅಕ್ಷಾಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದೇ ಹೇಳಬಹುದು. ಹೈನುಗಾರರಿಂದ ನೇರ ಮನೆಗಳಿಗೆ ಉತ್ಪನ್ನಗಳ ಪೂರೈಕೆ, ಅವತಾರ ಕ್ರೀಡಾ ನ್ಯೂಟ್ರಿಷಿಯನ್ ಬ್ರ್ಯಾಂಡ್, ಪಾನೀಯಗಳ ಉದ್ಯಮ ಸೇರಿದಂತೆ ಅನೇಕ ಅಧಿಕ ಮೌಲ್ಯದ ಉತ್ಪನ್ನಗಳ ಉದ್ಯಮದ ಬೆಳವಣಿಗೆಯಲ್ಲಿ ಅಕ್ಷಾಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಇನ್ನು ಸೇಲ್ಸ್ , ಮಾರ್ಕೇಟಿಂಗ್, ಫೈನಾನ್ಸ್ ಹಾಗೂ ಬ್ಯುಸಿನೆಸ್ ತಂತ್ರಗಳ ರಚನೆ, ಅನುಷ್ಠಾನ ಸೇರಿದಂತೆ ವಿವಿಧ ಉದ್ಯಮ ಚಟುವಟಿಕೆಗಳಲ್ಲಿ ಕೂಡ ಅಕ್ಷಾಲಿ ಅನುಭವ ಹೊಂದಿದ್ದಾರೆ.
ಕ್ಷೀರ ಕ್ರಾಂತಿ ಪರಿಣಾಮ ಮಹಾರಾಷ್ಟ್ರದ ಪುಣೆ ಪ್ರದೇಶದಲ್ಲಿ ಹಾಲಿನ ಉತ್ಪಾದನೆಯಲ್ಲಿ ಭಾರೀ ಹೆಚ್ಚಳ ಕಂಡುಬಂತು. ಹೈನುಗಾರರಿಂದ ದೊಡ್ಡ ಪ್ರಮಾಣದಲ್ಲಿ ಹಾಲನ್ನು ಖರೀದಿಸಲು ಸಹಕಾರ ಸಂಘಗಳು ನಿರಾಕರಿಸಿದವು. ಇದರಿಂದ ಈ ಪ್ರದೇಶದ ಹೈನುಗಾರರು ಸಂಕಷ್ಟಕ್ಕೆ ಸಿಲುಕಿದರು. ಇಂಥ ಸಮಯದಲ್ಲಿ ಅಲ್ಲಿನ ಹೈನುಗಾರರ ಕೈಹಿಡಿದವರೇ ದೇವೇಂದ್ರ ಶಾ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದ ಶಾ, ತಾವೇ ಹೈನುಗಾರರಿಂದ ಹಾಲು ಖರೀದಿಸಲು ಪ್ರಾರಂಭಿಸಿದರು. ಅದಕ್ಕಾಗಿ ಪರಾಗ್ ಮಿಲ್ಕ್ ಫುಡ್ಸ್ ಲಿಮಿಟೆಡ್ ಅನ್ನು 1992ರಲ್ಲಿ ಪ್ರಾರಂಭಿಸಿದರು. ಆರಂಭದ ದಿನಗಳಲ್ಲಿ 20,000 ಲೀಟರ್ ಹಾಲನ್ನು ಸಂಸ್ಕರಿಸುತ್ತಿದ್ದ ಈ ಸಂಸ್ಥೆ ಈಗ 20 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುತ್ತಿದೆ.
ಡಿಜಿಟಲ್ ವೆಬ್‌ಸೈಟ್ ಸ್ಥಾಪಿಸಿ ಫೋರ್ಬ್ಸ್ ಗುರುತಿಸಿದ ಭಾರತದ ಮಹಿಳಾ ಉದ್ಯಮಿ ಆಸ್ತಿ ಮೌಲ್ಯ 24,980 ಕೋಟಿ ರೂ!
ಡೊಮಿನೋಸ್ , ಪಿಜ್ಜಾ ಹಟ್ ಜೊತೆಗೆ ಸಹಭಾಗಿತ್ವ
ಪಿಜ್ಜಾ ಹಟ್, ಡೊಮಿನೋಸ್ ಪಿಜ್ಜಾ ಹಾಗೂ ಪಾಪ ಜಾನ್ಸ್ ಮುಂತಾದ ಜನಪ್ರಿಯ ಚೈನ್ ಉದ್ಯಮಗಳಿಗೆ ಪರಾಗ್ ಮಿಲ್ಕ್ ಫುಡ್ಸ್ ಹಾಲಿನ ಪೌಡರ್ ಪೂರೈಕೆ ಮಾಡುತ್ತಿದೆ. ಈ ರೀತಿ ಜನಪ್ರಿಯ ಬ್ರ್ಯಾಂಡ್ ಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ದೇವೇಂದ್ರ ಶಾ ಹಾಗೂ ಅಕ್ಷಾಲಿ ತಮ್ಮ ಉದ್ಯಮವನ್ನು ವಿಸ್ತರಿಸಿಕೊಂಡಿದ್ದಾರೆ.