ಇಶಾ ಅಂಬಾನಿ ಕಂಪನಿ ಪ್ರತಿಸ್ಪರ್ಧಿ ಸಂಸ್ಥೆಗೆ ಫಾಲ್ಗುಣಿ ನಾಯರ್ ಮಗ ಸಿಇಒ;ಈತನ ಸಂಪತ್ತು 22,000 ಕೋಟಿ ರೂ.!

Published : Nov 07, 2023, 12:21 PM IST
ಇಶಾ ಅಂಬಾನಿ ಕಂಪನಿ ಪ್ರತಿಸ್ಪರ್ಧಿ ಸಂಸ್ಥೆಗೆ  ಫಾಲ್ಗುಣಿ ನಾಯರ್ ಮಗ ಸಿಇಒ;ಈತನ ಸಂಪತ್ತು 22,000 ಕೋಟಿ ರೂ.!

ಸಾರಾಂಶ

ನೈಕಾ ಸಂಸ್ಥಾಪಕಿ ಫಾಲ್ಗುಣಿ ನಾಯರ್ ಅವರಿಗೆ ಉದ್ಯಮದಲ್ಲಿ ಮಗ ಅಂಚಿತ್ ನಾಯರ್ ಕೂಡ ನೆರವು ನೀಡುತ್ತಿದ್ದಾರೆ. ನೈಕಾದ ಸಿಇಒ ಆಗಿರುವ ಅವರು, ಸಂಸ್ಥೆಯ ಯಶಸ್ಸಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಕೂಡ.   

Business Desk: ಭಾರತದ ಬಹುತೇಕ  ಶ್ರೀಮಂತ ಉದ್ಯಮಿಗಳ ಉದ್ಯಮದಲ್ಲಿ ಅವರ ಮಕ್ಕಳು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಇನ್ನು ಕೆಲವು ಉದ್ಯಮಿಗಳು ಈಗಾಗಲೇ ತಮ್ಮ ಮಕ್ಕಳಿಗೆ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ. ರಿಲಯನ್ಸ್ ಸಂಸ್ಥೆ ಮುಖ್ಯಸ್ಥ, ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಈಗಾಗಲೇ ಮೂವರು ಮಕ್ಕಳಿಗೆ ಉದ್ಯಮದ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ. ಹಾಗೆಯೇ ಎಚ್ ಸಿಎಲ್ ಸ್ಥಾಪಕ ಶಿವ ನಡಾರ್ ಪುತ್ರಿ ರೋಶ್ನಿ ನಡಾರ್ ಕೂಡ ತಂದೆಯ ಉದ್ಯಮ ಮುನ್ನಡೆಸುತ್ತಿದ್ದಾರೆ. ಹೀಗೆ ಉದ್ಯಮ ವಲಯದಲ್ಲಿ ಕೂಡ ಹೊಸ ತಲೆಮಾರಿನವರು ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಭಾರತದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರಲ್ಲಿ ಒಬ್ಬರಾಗಿರುವ ನೈಕಾ ಸಂಸ್ಥಾಪಕಿ ಫಾಲ್ಗುಣಿ ನಾಯರ್ ಅವರಿಗೂ ಉದ್ಯಮ ಮುನ್ನಡೆಸಲು ಮಕ್ಕಳಾದ ಅಂಚಿತ್ ಹಾಗೂ ಅದ್ವೈತಾ ನಾಯರ್ ನೆರವು ನೀಡುತ್ತಿದ್ದಾರೆ. ಫಾಲ್ಗುಣಿ ನಾಯರ್ ಅವರ ಮಗ ಅಂಚಿತ್ ನೈಕಾದ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಲಂಬಿಯಾ ಯುನಿವರ್ಸಿಟಿಯಲ್ಲಿ ಓದಿರುವ ಅಂಚಿತ್, ಮೋರ್ಗನ್ ಸ್ಟ್ಯಾನ್ಲೆ ರಿಟೇಲ್ ಟೀಮ್ ಹಾಗೂ ಆಫ್ ಲೈನ್ ಮಾರಾಟವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ಅಂಚಿತ್ ನಾಯರ್ ನ್ಯೂಯಾರ್ಕ್ ನಲ್ಲಿ ಮೋರ್ಗನ್ ಸ್ಟ್ಯಾನ್ಲೆಯಲ್ಲಿ 7 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಮಾಧ್ಯಮ ಹಾಗೂ ಟೆಲಿಕಾಮ್ ಬ್ಯಾಂಕಿಂಗ್, ಹೈ ಯೀಲ್ಡ್ ಹಾಗೂ ಇಕ್ವಿಟೀಸ್ ವಿಭಾಗಗಳಲ್ಲಿ ಇವರು ಸುಮಾರು 7 ವರ್ಷಗಳ ಅನುಭವ ಹೊಂದಿದ್ದಾರೆ. ಇನ್ನು ಅದ್ವೈತಾ ನಾಯರ್ ಅವರು ಅಂಚಿತ್ ನಾಯರ್ ಅವಳಿ ಸಹೋದರಿ. ಅದ್ವೈತಾ ನಾಯರ್ ನೈಕಾ ಫ್ಯಾಷನ್ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇನ್ನು ಅಂಚಿತ್ ನಾಯರ್ ನೈಕಾ ಬ್ಯೂಟಿ ಹಾಗೂ ಇ-ಕಾಮರ್ಸ್ ವಿಭಾಗದ ಸಿಇಒ ಆಗಿದ್ದಾರೆ. ಇವರಿಬ್ಬರೂ ತಾಯಿ ಫಾಲ್ಗುಣಿ ನಾಯರ್ ಅವರ ನಿವ್ವಳ ಸಂಪತ್ತು 22,470 ಕೋಟಿ ರೂ. ತಲುಪಲು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. 

ಸ್ವಂತ ಉದ್ಯಮಕ್ಕಾಗಿ 28ಲಕ್ಷ ರೂ.ವೇತನದ ಉದ್ಯೋಗ ತ್ಯಜಿಸಿದ ಐಐಟಿ ಪದವೀಧರ, ಈಗ ಈತನ ತಿಂಗಳ ಆದಾಯ1 ಕೋಟಿ ರೂ.!

ನೈಕಾದ ಮೌಲ್ಯ ಸುಮಾರು 1.08ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಂಚಿತ್ ಹಾಗೂ ಅದ್ವೈತಾ ಇಬ್ಬರನ್ನೂ ಶ್ರೀಮಂತ ಜೆನ್ ಝುಡ್ (Gen Z) ಉದ್ಯಮಿಗಳು ಎಂದು ಗುರುತಿಸಲಾಗಿದೆ. ಅಲ್ಲದೆ, ಇವರಿಬ್ಬರನ್ನೂ 2022ರ ಫಾರ್ಚೂನ್ 40 ಅಂಡರ್ 40 ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂಚಿತ್ ನಾಯರ್ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ವೃತ್ತಿ ತ್ಯಜಿಸಿದ ಬಳಿಕ ನೈಕಾಗೆ ಸೇರ್ಪಡೆಗೊಂಡು ಇ-ರಿಟೇಲ್ ವಿಭಾಗದ ಉಸ್ತುವಾರಿ ವಹಿಸಿಕೊಂಡರು. ಕಳೆದ 2.5 ವರ್ಷಗಳಿಂದ ಅಂಚಿತ್ ನೈಕಾದ ರಿಟೇಲ್ ಸ್ಟೋರ್ ನೆಟ್ ವರ್ಕ್ ಹಾಗೂ ಬ್ರ್ಯಾಂಡ್ ರೆಕಗ್ನೇಷನ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇನ್ನು ಸಂಸ್ಥೆಯ ಲಾಭಕ್ಕೆ ಸಂಬಂಧಿಸಿ ಅವರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಪರಿಣಾಮ ನೈಕಾ ಇಂದು ಭಾರತದ ಏಕೈಕ ಸಂಪೂರ್ಣ ಆನ್ ಲೈನ್ ಬ್ಯೂಟಿ ರಿಟೇಲರ್ ಆಗಿ ಗುರುತಿಸಿಕೊಂಡಿದೆ. 2020ರಲ್ಲಿ ಅಂಚಿತ್ ನೈಕಾದ ಮಾರುಕಟ್ಟೆ ವಿಭಾಗಕ್ಕೆ ಹೊಸ ದಿಕ್ಕು ತೋರುವಲ್ಲಿ ಕೂಡ ಕೊಡುಗೆ ನೀಡಿದ್ದಾರೆ. 

2021ರ ಜನವರಿಯಲ್ಲಿ ಅಂಚಿತ್ ನೈಕಾ ಬ್ಯೂಟಿ ಇ-ಕಾಮರ್ಸ್ ವಿಭಾಗದ ಸಿಇಒ ಆಗಿ ನೇಮಕಗೊಂಡರು. ನೈಕಾ ಅನ್ನು ವಿಶಿಷ್ಟ ಉದ್ಯಮ ಮಾದರಿಯನ್ನಾಗಿ ಮಾಡಲು ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ. 'ಆರ್ಟ್ ಆಫ್ ರಿಟೇಲಿಂಗ್' ಮೂಲಕ ಗ್ರಾಹಕರ ವಿಶಿಷ್ಟ ಅನುಭವಗಳನ್ನು ಅವರು ಕಲೆ ಹಾಕುತ್ತಿದ್ದಾರೆ. ಇನ್ನು ನೈಕಾದ ಹೂಡಿಕೆದಾರರ ಜೊತೆಗೆ ಸಂಬಂಧ ವೃದ್ಧಿಯಲ್ಲಿ ಕೂಡ ಅಂಚಿತ್ ಗಮನಾರ್ಹ ಪಾತ್ರ ವಹಿಸುತ್ತಿದ್ದಾರೆ. 

ಬ್ರಿಟನ್ ಜನಪ್ರಿಯ ಉದ್ಯಮಿ ಭಾರತದ ಬಿಲಿಯನೇರ್ ಅಳಿಯ;ಇವರ ಸಂಪತ್ತು ಎಷ್ಟು ಕೋಟಿ ಗೊತ್ತಾ?

ಫಾಲ್ಗುಣಿ ನಾಯರ್ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿದ್ದರು. ಉದ್ಯಮ ರಂಗದ ಜೊತೆಗೆ ಯಾವುದೇ ನಂಟು ಇಲ್ಲದಿದ್ದರೂ ಇಂದು ಬಿಲಿಯನೇರ್ ಉದ್ಯಮಿಯಾಗಿ ಬೆಳೆದಿದ್ದಾರೆ. 2023ರಲ್ಲಿ ನಾಯರ್ ಅವರನ್ನು ಭಾರತದ ಶ್ರೀಮಂತ ಸೆಲ್ಫ್ ಮೇಡ್ ವಿಮೆನ್ ಎಂದು ಗುರುತಿಸಲಾಗಿದೆ ಕೂಡ. ಇನ್ನು ಅದ್ವೈತಾ ನಾಯರ್  ಕಳೆದ 10 ವರ್ಷಗಳಿಂದ ನೈಕಾದ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೈಕಾ ಆನ್ ಲೈನ್ ಶಾಪಿಂಗ್ ಸಂಸ್ಥೆಯನ್ನು ಸ್ಥಾಪಿಸಲು ನೆರವಾಗುವ ಜೊತೆಗೆ ಅದನ್ನು ಮುನ್ನಡೆಸುವ ಮೂಲಕ ಅದ್ವೈತಾ ಅಮ್ಮನಿಗೆ ಸಾಥ್ ನೀಡುತ್ತಿದ್ದಾರೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?