ಲೀಡ್ ಸಂಸ್ಥೆ ಬಗ್ಗೆ ಬಹುತೇಕರಿಗೆ ತಿಳಿದಿದೆ. ಇಂದು ಲೀಡ್ ದೇಶಾದ್ಯಂತ 500 ನಗರಗಳಲ್ಲಿ ಕೈಗೆಟುಕುವ ಶುಲ್ಕ ಹೊಂದಿರುವ 5000 ಖಾಸಗಿ ಶಾಲೆಗಳಲ್ಲಿ ಸಹಭಾಗಿತ್ವ ಹೊಂದಿದೆ. ಈ ಸಂಸ್ಥೆ 2000ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. ಈ ಸಂಸ್ಥೆಯನ್ನು ಸ್ಥಾಪಿಸಿದವರು ಮುಂಬೈ ಮೂಲದ ಸ್ಮಿತಾ ಡಿಯೋರಾ ಎಂಬ ಮಹಿಳೆ. ಪುಟ್ಟ ಶಾಲೆಯೊಂದಿಗೆ ಪ್ರಾರಂಭವಾದ ಅವರ ಈ ಸ್ಟಾರ್ಟ್ ಅಪ್ ಇಂದು 9024 ಕೋಟಿ ರೂ. ಮೌಲ್ಯದ ಸಂಸ್ಥೆಯಾಗಿ ಬೆಳೆದು ನಿಂತಿದೆ.
Business Desk:ಶಿಕ್ಷಣ ಪ್ರತಿ ಮಗುವಿನ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕೂಡ ದುಬಾರಿಯಾಗಿದೆ. ನಗರ ಪ್ರದೇಶಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಮಕ್ಕಳ ಶೈಕ್ಷಣಿಕ ವೆಚ್ಚದ ಹೊರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ. ಇದೇ ಕಾರಣಕ್ಕೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಆದಾಯದ ಬಹುಪಾಲು ಶಾಲೆಗಳ ಪಾಲಾಗುತ್ತಿದೆ. ಇನ್ನು ಭಾರತದಲ್ಲಿನ ಶಾಲೆಗಳು ಕಲಿಕೆಗೆ ಸಾಂಪ್ರದಾಯಿಕ ವಿಧಾನಗಳನ್ನೇ ಅನುಸರಿಸುತ್ತಿವೆ. ಈ ಎಲ್ಲ ಪರಿಸ್ಥಿತಿಯನ್ನು ಅವಲೋಕಿಸಿದ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಮುಂಬೈ ಮೂಲದ ಮಹಿಳೆಯೊಬ್ಬರು ವಿನೂತನ ಸ್ಟಾರ್ಟ್ ಅಪ್ ವೊಂದನ್ನು ಪ್ರಾರಂಭಿಸುತ್ತಾರೆ. ಆ ಮೂಲಕ ಬೋಧನೆಯ ವಿಧಾನಗಳಲ್ಲಿ ಬದಲಾವಣೆ ತರಲು ಪ್ರಯತ್ನಿಸುವ ಜೊತೆಗೆ ಕೈಗೆಟುಕುವ ದರದಲ್ಲಿ ಶಿಕ್ಷಣ ನೀಡಲು ಪ್ರಯತ್ನಿಸುತ್ತಾರೆ. ಇಂದು ಅಕೆ ಭಾರತದ ಯಶಸ್ವಿ ಮಹಿಳಾ ಉದ್ಯಮಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಅವರೇ 'ಲೀಡ್ ಸ್ಕೂಲ್ 'ಸಹ ಸಂಸ್ಥಾಪಕಿ ಹಾಗೂ ಸಹ ಸಿಇಒ ಸ್ಮಿತಾ ಡಿಯೋರಾ. ಇಂದು ಅವರ ಈ ಶೈಕ್ಷಣಿಕ ಸ್ಟಾರ್ಟ್ ಅಪ್ ಮೌಲ್ಯ 9024ಕೋಟಿ ರೂ.
ಇಂದು ಲೀಡ್ ದೇಶಾದ್ಯಂತ 500 ನಗರಗಳಲ್ಲಿ ಕೈಗೆಟುಕುವ ಶುಲ್ಕ ಹೊಂದಿರುವ 5000 ಖಾಸಗಿ ಶಾಲೆಗಳಲ್ಲಿ ಸಹಭಾಗಿತ್ವ ಹೊಂದಿದೆ. ಈ ಸಂಸ್ಥೆ 2000ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. ಈ ಸ್ಟಾರ್ಟ್ ಅಪ್ ನ ಮುಖ್ಯ ಆಲೋಚನೆ ಏನೆಂದ್ರೆ ಯಾವುದೇ ಪದವಿ ಹೊಂದಿರುವ ವ್ಯಕ್ತಿ ಉತ್ತಮ ಶಿಕ್ಷಕರಾಗಬಹುದು. ಇದೇ ಕಾರಣಕ್ಕೆ ಲೀಡ್ ಸಹಭಾಗಿತ್ವದ ಶಾಲೆಗಳು ಇತರ ಶಾಲೆಗಳಿಗಿಂತ ಭಿನ್ನವಾಗಿ ಕಾರ್ಯನಿರ್ವಹಿಸುತ್ತಿವೆ. ಕೌಶಲ್ಯ ಆಧರಿತ ಶಿಕ್ಷಣಕ್ಕೆ ಲೀಡ್ ಹೆಚ್ಚಿನ ಮಹತ್ವ ನೀಡುತ್ತಿದೆ.
ಪತಿಯ ಕೂದಲು ಉದುರುವಿಕೆ ಸಮಸ್ಯೆಯೇ ಪತ್ನಿ ಹೆಲ್ತ್ ಕೇರ್ ಕಂಪನಿ ಸ್ಥಾಪಿಸಲು ನಾಂದಿಯಾಯ್ತು!
ಚಾರ್ಟೆಡ್ ಅಕೌಂಟೆಂಟ್ ಆಗಿರುವ ಸ್ಮಿತಾ ಡಿಯೋರಾ, ಪ್ರೊಕ್ಟರ್ ಹಾಗೂ ಗ್ಯಾಂಬಲ್ ಸಂಸ್ಥೆಯಲ್ಲಿಕಾರ್ಯನಿರ್ವಹಿಸಿದ್ದರು. ಆ ಸಂದರ್ಭದಲ್ಲೇ ಆಕೆ ಸುಮಿತ್ ಮೆಹ್ತಾ ಅವರನ್ನು ಭೇಟಿಯಾಗುತ್ತಾರೆ. ನಂತರ ಅವರನ್ನೇ ವಿವಾಹವಾಗುತ್ತಾರೆ ಕೂಡ. ಇವರಿಬ್ಬರು ಸಿಂಗಾಪುರ ಹಾಗೂ ಭಾರತದಲ್ಲಿ ವಿವಿಧ ಸಂಸ್ಥೆಗಳಲ್ಲಿ ಒಂಭತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಸ್ಮಿತಾ ಹಣಕಾಸು ಹಾಗೂ ಖಜಾನೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆದರೂ ಕೂಡ ಅವರಿಗೆ ಶೈಕ್ಷಣಿಕ ಕ್ಷೇತ್ರದತ್ತ ಹೆಚ್ಚಿನ ಒಲವಿತ್ತು. ಇಲ್ಲಿ ಏನಾದರೂ ಸಾಧಿಸಬೇಕು ಎಂಬ ಹಂಬಲವನ್ನು ಅವರು ಹೊಂದಿದ್ದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ಪ್ರಾರಂಭದಲ್ಲಿ ಸ್ಮಿತಾ ಡಿಯೋರಾ, ಸ್ಪರ್ಶ ಎಂಬ ಎನ್ ಜಿಒ ಪ್ರಾರಂಭಿಸಿದರು. ಅವರ ಪತಿ ಸುಮಿತ್ ಮೆಹ್ತಾ ಬೇರೆಯೇ ಶಾಲೆಯೊಂದನ್ನು ಪ್ರಾರಂಭಿಸಿದರು. 2012ರಲ್ಲಿ ಲೀಡ್ ಪ್ರಾರಂಭಿಸಿದ ಬಳಿಕ ಸುಮಿತ್ ಮೆಹ್ತಾ ಕೂಡ ಸ್ಮಿತಾ ಅವರ ಜೊತೆಗೆ ಕೈಜೋಡಿಸಿದರು. ಉತ್ತಮ ಶಿಕ್ಷಣ ಪ್ರತಿ ಮಗುವಿನ ಹಕ್ಕು ಎಂಬ ಯೋಚನೆಯೊಂದಿಗೆ ಲೀಡ್ ಸಂಸ್ಥೆ ಪ್ರಾರಂಭಿಸಿದರು. ಅರು ಅಹಮದಾಬಾದ್ ನಲ್ಲಿ ಮೊದಲ ಶಾಲೆ ಪ್ರಾರಂಭಿಸಿದರು, ಅದರಲ್ಲಿ 14 ವಿದ್ಯಾರ್ಥಿಗಳಿದ್ದರು. ಈಗ ಲೀಡ್ ಸಂಸ್ಥೆ ದೇಶಾದ್ಯಂತ 1.2 ಮಿಲಿಯನ್ ಗಿಂತಲೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದೆ. ಹಾಗೆಯೇ ಈ ಸಂಸ್ಥೆಯಲ್ಲಿ 25,000ಕ್ಕೂ ಅಧಿಕ ಶಿಕ್ಷಕರಿದ್ದಾರೆ.
ಸ್ಮಿತಾ ಡಿಯೋರಾ ELGA (English Language and General Awareness) ಎಂಬ ಕಾರ್ಯಕ್ರಮ ರೂಪಿಸಿದ್ದು, ಇದು ಕೌಶಲ್ಯಯುತ ಇಂಗ್ಲಿಷ್ ಕಲಿಕೆಯನ್ನು ಒಳಗೊಂಡಿದೆ. ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಕಡಿಮೆ ಅವಧಿಯಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಯಲು ನೆರವು ನೀಡುತ್ತದೆ. ಈ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಕೂಡ ಗಳಿಸಿದೆ. 2026ರ ವೇಳೆಗೆ ಲೀಡ್ ನೆಟ್ ವರ್ಕ್ ಅನ್ನು 60,000 ಶಾಲೆಗಳು ಹಾಗೂ 25 ಮಿಲಿಯನ್ ವಿದ್ಯಾರ್ಥಿಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ.
2021-2022ನೇ ಸಾಲಿನಲ್ಲಿ ಈ ಕಂಪನಿಯ ಆದಾಯ 133 ಕೋಟಿ ರೂ. ಇನ್ನು ಕಳೆದ ಸಾಲಿನಲ್ಲಿ ಈ ಸಂಸ್ಥೆ 9024 ಕೋಟಿ ರೂ. ಮೌಲ್ಯವನ್ನು ತೋರಿಸಿ 100 ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿತ್ತು ಕೂಡ.