ಎಲ್.ವಿ. ವೈದ್ಯನಾಥನ್ ಜುಲೈ 2022 ರಿಂದ ಈ ಉನ್ನತ ಸ್ಥಾನದಲ್ಲಿದ್ದಾರೆ. ಅವರು 1995 ರಲ್ಲಿ ಇಂಟರ್ನ್ ಆಗಿ P&G ಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ನವದೆಹಲಿ (ಅಗಸ್ಟ್ 28, 2023): ಸಾಮಾನ್ಯ ದರ್ಜೆಯ ಪ್ರೊಫೈಲ್‌ನಲ್ಲಿ ಕೆಲಸ ಮಾಡಿ, ನಂತರ ಅದೇ ಕಂಪನಿಯ ಯಶಸ್ವಿ ಸಿಇಒಗಳು ಮತ್ತು ಎಂ.ಡಿ.ಗಳಾಗಿರೋ ಹಲವಾರು ಉದಾಹರಣೆಗಳಿವೆ. ಕೆಲವರು ತಮ್ಮ ಕಂಪನಿಗಳಲ್ಲಿ ಇಂಟರ್ನ್ ಆಗಿ ಸೇರಿಕೊಂಡವರಿದ್ದಾರೆ.. ಅಂತಹ ಒಂದು ಉದಾಹರಣೆಯೆಂದರೆ ಎಲ್.ವಿ. ವೈದ್ಯನಾಥನ್, ಇವರು P&G ಹೈಜೀನ್ ಅಂಡ್ ಹೆಲ್ತ್ (PGHH), ಭಾರತ ಮತ್ತು ಇಂಡೋನೇಷ್ಯಾದ ವ್ಯವಸ್ಥಾಪಕ ನಿರ್ದೇಶಕರು (MD) ಆಗಿದ್ದಾರೆ.
ಎಲ್.ವಿ. ವೈದ್ಯನಾಥನ್ ಜುಲೈ 2022 ರಿಂದ ಈ ಉನ್ನತ ಸ್ಥಾನದಲ್ಲಿದ್ದಾರೆ. ಅವರು 1995 ರಲ್ಲಿ ಇಂಟರ್ನ್ ಆಗಿ P&G ಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ 1996 ರಲ್ಲಿ, ಅವರು ಭಾರತದಲ್ಲಿ ಕಂಪನಿಯ ಸೇಲ್ಸ್ ತಂಡವನ್ನು ಸೇರಿದರು. MD ಹುದ್ದೆಗೆ ಬಡ್ತಿ ಪಡೆಯುವ ಮೊದಲು ಅವರು ವಿವಿಧ ನಾಯಕತ್ವದ ಪಾತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಇದನ್ನು ಓದಿ: ಟಾಟಾ ಗ್ರೂಪ್‌ನಲ್ಲಿ ಉದ್ಯೋಗ ಪಡೆಯಲು ರತನ್ ಟಾಟಾ ರೆಸ್ಯೂಮ್ ರೆಡಿ ಮಾಡಿದ ಸೀಕ್ರೆಟ್ ಬಯಲು!
.
ವೈದ್ಯನಾಥನ್ ಈಗ PGHH ನ ಮುಖ್ಯಸ್ಥರಾಗಿದ್ದಾರೆ, ಇದು ಆಗಸ್ಟ್ 28 ರ ಹೊತ್ತಿಗೆ 53,236 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳ ಹೊಂದಿದೆ. ಕಂಪನಿಯ ಷೇರು ಬೆಲೆ ಸೋಮವಾರ NSE ನಲ್ಲಿ 16,400 ರೂ. ಆಗಿದೆ. ಇನ್ನು, ಈ ಕಂಪನಿಯು ವಿಕ್ಸ್ ಮತ್ತುವಿಸ್ಪರ್‌ನಂತಹ ಜನಪ್ರಿಯ ಬ್ರ್ಯಾಂಡ್‌ಗಳನ್ನು ಹೊಂದಿದೆ.
ವೈದ್ಯನಾಥನ್ ಅವರು ನಾಗ್ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಅಹಮದಾಬಾದ್‌ನ ಐಐಎಂನ ಹಳೆಯ ವಿದ್ಯಾರ್ಥಿಯೂ ಹೌದು. ಭಾರತ, ಸಿಂಗಾಪುರ, ಫಿಲಿಪೈನ್ಸ್, ಥೈಲ್ಯಾಂಡ್ ಮತ್ತು ವಿಯೆಟ್ನಾಂನಂತಹ ದೇಶಗಳಲ್ಲಿ ಅವರು 26 ವರ್ಷಗಳ ಅನುಭವ ಹೊಂದಿದ್ದಾರೆ.
ಇದನ್ನೂ ಓದಿ: Reliance AGM 2023: ವಿಮೆ, ಹಣಕಾಸು ಸೇವಾ ಕ್ಷೇತ್ರಕ್ಕೂ ಲಗ್ಗೆ ಇಟ್ಟ ಜಿಯೋ; ಇತರೆ ಕಂಪನಿಗಳಿಗೆ ಶುರುವಾಯ್ತು ನಡುಕ!
PGHH ಜೂನ್ ತ್ರೈಮಾಸಿಕದಲ್ಲಿ ತೆರಿಗೆಯ ನಂತರದ ಲಾಭದಲ್ಲಿ (PAT) ಮೂರು ಪಟ್ಟು ಹೆಚ್ಚಳವನ್ನು ಅಂದರೆ 151.24 ಕೋಟಿ ರೂ. ಲಾಭ ವರದಿ ಮಾಡಿದೆ. ಇನ್ನು, PGHH ಸೋಮವಾರ ನಡೆದ ಸಭೆಯಲ್ಲಿ ತನ್ನ ಮಂಡಳಿಯು ಜೂನ್ 30, 2023 ಕ್ಕೆ ಕೊನೆಗೊಂಡ ಹಣಕಾಸು ವರ್ಷಕ್ಕೆ ಪ್ರತಿ ಈಕ್ವಿಟಿ ಷೇರಿಗೆ 105 ರೂಪಾಯಿಗಳ ಅಂತಿಮ ಲಾಭಾಂಶ ಪಾವತಿಸಲು ಶಿಫಾರಸು ಮಾಡಿದೆ.