84 ಲಕ್ಷ ರೂ. ಸಂಬಳದ ಕೆಲಸ ಬಿಟ್ಟು 100 ಕೋಟಿ ರೂ. ಉದ್ಯಮ ಕಟ್ಟಿದ ಐಐಟಿ ಪದವೀಧರ

By Suvarna NewsFirst Published Feb 6, 2024, 2:38 PM IST
Highlights

ವಾರ್ಷಿಕ 84 ಲಕ್ಷ ರೂ. ಸಂಬಳ ಬರುವ ಉದ್ಯೋಗ ಬಿಡೋದಂದ್ರೆ ಸುಮ್ಮನೆ ಅಲ್ಲ. ಅದಕ್ಕೆ ಧಮ್ ಬೇಕು.  ತನ್ನ ಶಕ್ತಿಯ ಮೇಲೆ ಅಪಾರ ನಂಬಿಕೆ ಬೇಕು. ಅಂಥ ನಂಬಿಕೆಯಿಂದ ಕೆಲಸ ಬಿಟ್ಟ ಈತ ಈಗ 100 ಕೋಟಿ ರೂ. ಉದ್ಯಮದ ಮಾಲೀಕ!

ಪ್ರತಿ ದಿನ ಬಟ್ಟೆ ಒಗೆಯೋದಂದ್ರೆ ಅದೆಂಥಾ ಜಂಜಡದ ಕೆಲಸ ಎಂದು ಅನುಭವಿಸಿದವರಿಗಷ್ಟೇ ಗೊತ್ತು. ಇಂಥಾ ಈ ಬಟ್ಟೆ ಒಗೆಯುವುದನ್ನೇ ಉದ್ಯಮ ಮಾಡಿಕೊಂಡು ನೂರಾರು ಕೋಟಿ ಸಂಪಾದನೆ ಮಾಡಬಹುದೆಂದು ಕಲ್ಪಿಸಿಕೊಳ್ಳುವುದೂ ಕಷ್ಟ. ಆದರೆ, ಇಂದಿನ ಯುಗದಲ್ಲಿ ಯಾವುದೂ ಕಷ್ಟವಲ್ಲ. ಸಣ್ಣ ಸಣ್ಣ ವಿಷಯಗಳಲ್ಲೇ ದೊಡ್ಡ ಮಟ್ಟದ ಸಾಧನೆ ಸಾಧ್ಯ ಎಂಬುದನ್ನು ಕಂಡುಕೊಂಡವರು ಅರುಣಾಭ್ ಸಿನ್ಹಾ. ಏಕೆಂದರೆ, ಬಟ್ಟೆ ಒಗೆಯುವುದು ಪ್ರತಿಯೊಬ್ಬರ ಅಗತ್ಯ.

ಐಐಟಿ ಬಾಂಬೆಯಿಂದ ಪದವೀಧರರಾದ ಈ ಅರುಣಾಬ್ ಸಿನ್ಹಾ 84 ಲಕ್ಷ ರೂ. ಬೃಹತ್ ಸ್ಯಾಲರಿಯ ಕೆಲಸ ಬಿಟ್ಟು ಈ ಲಾಂಡ್ರಿ ಬಿಸ್ನೆಸ್ ಶುರು ಮಾಡಿ ಇಂದು 100 ಕೋಟಿ ವಹಿವಾಟನ್ನು ನಡೆಸುತ್ತಿದ್ದಾರೆ ಎಂದರೆ ಸಣ್ಣ ಮಾತಲ್ಲ. ಅಷ್ಟೊಂದು ಸಂಬಳದ ಕೆಲಸ ಬಿಡುವಾಗ ತನ್ನ ಶಕ್ತಿಯ ಮೇಲೆ ನಿಜವಾದ ನಂಬಿಕೆ ಇದ್ದರಷ್ಟೇ ಧೈರ್ಯ ಬರುತ್ತದೆ. ಅದು ಇದ್ದ ಕಾರಣದಿಂದಲೇ ಅರುಣಭ್ ಈ ಮಟ್ಟಿನ ಯಶಸ್ಸು ಸಾಧಿಸಲು ಸಾಧ್ಯವಾಗಿದೆ.

ಇಂದು ಇವರ ಕಂಪನಿ ಯುಕ್ಲೀನ್ ಲಾಂಡ್ರಿಯು ಕೇವಲ ಆರು ವರ್ಷಗಳಲ್ಲಿ, 100 ಕೋಟಿ ರೂಪಾಯಿಗಳ ವಹಿವಾಟು ಸಾಧಿಸಿದೆ ಮತ್ತು 93 ನಗರಗಳಲ್ಲಿ 323-ಸ್ಟೋರ್ ನೆಟ್‌ವರ್ಕ್‌ಗೆ ವಿಸ್ತರಿಸಿದೆ.

ಮಡದಿಯ ಮುಡಿಗೆ ಮಲ್ಲಿಗೆ ಮುಡಿಸಿ 'ಹೂವೇ ಹೂ ಮುಡಿದಂತಿದೆ' ಎಂದ ಗೌತಮ್! ಕಳೆದೇ ಹೋದ್ಲು ಭೂಮಿ..

ಅರುಣಾಭ್ ಅವರು ಆಗಸ್ಟ್ 2016ರಲ್ಲಿ ತಮ್ಮ ಕೆಲಸವನ್ನು ತೊರೆದ ನಂತರ, ಅವರು ಜನವರಿ 2017ರಲ್ಲಿ ಪತ್ನಿ ಗುಂಜನ್ ಸಿನ್ಹಾ ಜೊತೆ ಸೇರಿ ಲಾಂಡ್ರೊಮ್ಯಾಟ್ ವ್ಯವಹಾರ UClean ಅನ್ನು ಪ್ರಾರಂಭಿಸಲು 20 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರು. ಇದರ ಮೊದಲ ಮಳಿಗೆಯು ವಸಂತ್ ಕುಂಜ್‌ನಲ್ಲಿ ಪ್ರಾರಂಭವಾಯಿತು. ಅವರ ಸಂಬಂಧಿಕರು ವ್ಯವಹಾರದ ಬಗ್ಗೆ ನಂಬಿಕೆ ತೋರಲಿಲ್ಲ. ಅರುಣಾಭ್ ತನ್ನ ಉತ್ತಮ ಸಂಬಳದ ವೃತ್ತಿಜೀವನವನ್ನು 'ಜನರ ಕೊಳಕು ಲಿನಿನ್ ಬಟ್ಟೆ ತೊಳೆಯಲು' ತೊರೆದದ್ದು ಅವರ ಕುಟುಂಬವನ್ನು ಅಸಮಾಧಾನಗೊಳಿಸಿತು. ಆದರೆ ಅರುಣಾಭ್ ಎದೆಗುಂದಲಿಲ್ಲ. ಫರಿದಾಬಾದ್‌ನ ನಿವಾಸಿಗಳಾದ ಗುಂಜನ್ ಮತ್ತು ಅರುಣಾಭ್ ಅವರು ಧೈರ್ಯದಿಂದ ಮುನ್ನುಗ್ಗಿದರು.
 
ಲಾಂಡ್ರಿಯತ್ತ ಹೊರಳಿದ ಬಳಿಕ ಮೊದಲ ಎರಡು UClean ಸ್ಥಳಗಳಿಗೆ ಕೊಡುಗೆ ನೀಡಲು ಮತ್ತು ಪ್ರಾರಂಭಿಸಲು ಡ್ರೈ ಕ್ಲೀನರ್ ಅನ್ನು ಮನವೊಲಿಸುವಲ್ಲಿ ಅವರು ಯಶಸ್ವಿಯಾದರು. ಅವರು ಹೂಡಿಕೆದಾರರನ್ನು ಹುಡುಕಲು 100 ದಿನಗಳನ್ನು ತೆಗೆದುಕೊಂಡರು. ಆ ಕ್ಷಣದ ಬಳಿಕ ಅವರು ಹಿಂದೆ ಸರಿಯಲಿಲ್ಲ. 

ಶೀಘ್ರ ನೀರಜ್ ಚೋಪ್ರಾ- ಪಿವಿ ಸಿಂಧು ಮದುವೆ? ಫೋಟೋ ಹಾಕಿ ಫ್ಯಾನ್ಸ್ ತಲೆಗೆ ಹುಳ ಬಿಟ್ರು ಸ್ಪೋರ್ಟ್ ಸ್ಟಾರ್ಸ್ !

UClean ಪ್ರಸ್ತುತ ಡೋರ್-ಸ್ಟೆಪ್ ಲಾಂಡ್ರಿ ಸೇವೆಯನ್ನು ಒದಗಿಸುತ್ತದೆ. ಗ್ರಾಹಕರು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಬಳಸಿ ಅಥವಾ UClean ಕಾಲ್ ಸೆಂಟರ್ ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ, UClean whatsapp ಬೋಟ್ ಮೂಲಕ ಅಥವಾ ಅಂಗಡಿಗಳಲ್ಲಿ ತಮ್ಮ ಲಾಂಡ್ರಿಯನ್ನು ಡ್ರಾಪ್ ಮಾಡುವ ಮೂಲಕ ಬಟ್ಟೆ ಒಗೆಸಿಕೊಳ್ಳಬಹುದು. ಪ್ರಸ್ತುತ ಪ್ರತಿದಿನ ಸುಮಾರು 3000 ಪ್ಲಸ್ ಆರ್ಡರ್‌ಗಳನ್ನು ಪೂರೈಸುತ್ತಿದೆ ಯು ಕ್ಲೀನ್.

click me!