ವಿಭಿನ್ನ ಪ್ರಯತ್ನಕ್ಕೆ ಒಲಿದ ಯಶಸ್ಸು; ರತನ್ ಟಾಟಾ ಬೆಂಬಲದಿಂದ ಕಟ್ಟಿದ ಈ ಕಂಪನಿ ಮೌಲ್ಯ ಈಗ 3,650 ಕೋಟಿ ರೂ.

Published : Feb 17, 2024, 03:40 PM IST
ವಿಭಿನ್ನ ಪ್ರಯತ್ನಕ್ಕೆ ಒಲಿದ ಯಶಸ್ಸು; ರತನ್  ಟಾಟಾ ಬೆಂಬಲದಿಂದ ಕಟ್ಟಿದ ಈ ಕಂಪನಿ ಮೌಲ್ಯ ಈಗ 3,650 ಕೋಟಿ ರೂ.

ಸಾರಾಂಶ

ವಿಭಿನ್ನ ಯೋಚನೆಗಳು ಉದ್ಯಮದಲ್ಲಿ ಯಶಸ್ಸು ತಂದುಕೊಡಬಲ್ಲವು ಎಂಬುದಕ್ಕೆ ಗೌರವ್ ಕುಶ್ವಾಹ ಉತ್ತಮ ನಿದರ್ಶನ. ಇವರ ಆನ್ ಲೈನ್ ಜ್ಯುವೆಲ್ಲರಿ ಕಂಪನಿ ಬ್ಲೂ ಸ್ಟೋನ್ ಇಂದು 3, 650 ಮೌಲ್ಯದ ಸಂಸ್ಥೆಯಾಗಿ ಬೆಳೆದು ನಿಂತಿದೆ.   

Business Desk:ಗುರಿ ಸ್ಪಷ್ಟವಾಗಿದ್ದರೆ, ಸಾಧಿಸುವ ಛಲ ಹಾಗೂ ಸಂಕಲ್ಪ ಜೊತೆಗಿದ್ದರೆ ಬದುಕಿನಲ್ಲಿ ಯಾವುದು ಕೂಡ ಅಸಾಧ್ಯವಲ್ಲ. ವಯಸ್ಸು ಕೂಡ ಗಣನೆಗೆ ಬರೋದಿಲ್ಲ. ಇದಕ್ಕೆ ಬ್ಲೂಸ್ಟೋನ್ ಜ್ಯುವೆಲ್ಲರಿ ಸಂಸ್ಥಾಪಕ ಹಾಗೂ ಸಿಇಒ ಗೌರವ್ ಕುಶ್ವಾಹ ಅವರೇ ಸಾಕ್ಷಿ. ಇಂದು ಬ್ಲೂ ಸ್ಟೋನ್ ಆನ್ ಲೈನ್ ಜ್ಯುವೆಲ್ಲರಿ ಕ್ಷೇತ್ರದಲ್ಲಿ ಜನಪ್ರಿಯ ಬ್ರ್ಯಾಂಡ್ ಆಗಿ ಬೆಳೆದು ನಿಂತಿದೆ. ಬ್ಲೂ ಸ್ಟೋನ್ ಗೆ ಭಾರತದ ಜನಪ್ರಿಯ ಉದ್ಯಮಿ ರತನ್ ಟಾಟಾ ಹಾಗೂ ಜೆರೋಧ ಸಹಸಂಸ್ಥಾಪಕ ನಿಖಿಲ್ ಕಾಮತ್ ಬೆಂಬಲವಾಗಿ ನಿಂತಿದ್ದಾರೆ. ಇವರಿಬ್ಬರೂ ಈ ಸಂಸ್ಥೆಯಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದಾರೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ ಈ ಕಂಪನಿಯು ಐಪಿಒ ಮೂಲಕ ಅಂದಾಜು 2,000  ಕೋಟಿ ರೂ. ಸಂಗ್ರಹಿಸುವ ಯೋಜನೆ ಹೊಂದಿದೆ. ಈ ಮೂಲಕ ಬ್ಲೂ ಸ್ಟೋನ್ ಜ್ಯುವೆಲ್ಲರಿ ಮಾರುಕಟ್ಟೆಯಲ್ಲಿ ಇತರ ಕಂಪನಿಗಳಿಗೆ ಭಾರೀ ಪೈಪೋಟಿ ನೀಡೋದು ಖಚಿತ. ಜ್ಯುವೆಲ್ಲರಿ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ತನಿಷ್ಕ್ ಬ್ರ್ಯಾಂಡ್, ಕಲ್ಯಾಣ್ ಜ್ಯುವೆಲ್ಲರ್ಸ್ ಹಾಗೂ ಸೆನ್ಕೊ ಗೋಲ್ಡ್ ಗೆ ಭಾರೀ ಪೈಪೋಟಿ ನೀಡಲಿದೆ. ಇನ್ನು ಬ್ಲೂ ಸ್ಟೋನ್ ಜ್ಯುವೆಲ್ಲರಿ ಮೌಲ್ಯ 3,650 ಕೋಟಿ ರೂ. ಅಥವಾ 440 ಮಿಲಿಯನ್ ಡಾಲರ್ ಇದೆ.

ಗೌರವ್ ಕುಶ್ವಾಹ ತಮ್ಮ 27ನೇ ವಯಸ್ಸಿನಲ್ಲಿ ಮೊದಲ ವೆಬ್ ಸೈಟ್ ಪ್ರಾರಂಭಿಸಿದ್ದರು. ನಾಲ್ಕು ವರ್ಷಕ್ಕಿಂತಲೂ ಹೆಚ್ಚು ಸಮಯ ಗೌರವ್ ಕುಶ್ವಾಹ ಅಮೆಜಾನ್ ನಲ್ಲಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ 2011ರಲ್ಲಿ ಅವರು ಬ್ಲೂ ಸ್ಟೋನ್ ಜ್ಯುವೆಲ್ಲರಿ ಪ್ರಾರಂಭಿಸಿದ್ದರು. ಬೆಂಗಳೂರು ಮೂಲದ ಈ ಕಂಪನಿ ಭಾರತದ ದಿಗ್ಗಜ ಉದ್ಯಮಿ ರತನ್ ಟಾಟಾ ಅವರ ಗಮನ ಸೆಳೆದಿತ್ತು. ಅವರು ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ರತನ್ ಟಾಟಾ ಅವರನ್ನು ಗೌರವ್ ಕುಶ್ವಾಹ ಮುಂಬೈನಲ್ಲಿ ಭೇಟಿಯಾಗಿದ್ದರು. ಈ ಸಮಯದಲ್ಲಿ ಗೌರವ್ ಕುಶ್ವ ಅವರ ಪತ್ನಿ ರತನ್ ಟಾಟಾ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಬಯಸಿದ್ದರು. ಈ ಸಮಯದಲ್ಲಿ ರತನ್ ಟಾಟಾ ಅವರೇ ಕುಶ್ವಾಹ ಅವರೊಂದಿಗೆ ಮಾತಿಗಿಳಿದಿದ್ದರು. ಈ ಸಮಯದಲ್ಲಿ ಬ್ಲೂ ಸ್ಟೋನ್ ನಲ್ಲಿ ಹೂಡಿಕೆ ಮಾಡಲು ಟಾಟಾ ಆಸಕ್ತಿ ತೋರುವ ಜೊತೆಗೆ ಗೌರವ್ ಅವರಿಗೆ ಕೆಲವೊಂದು ಬ್ಯುಸಿನೆಸ್ ಟಿಪ್ಸ್ ಕೂಡ ನೀಡಿದ್ದರು.

Nadia Chauhan: ಅಪ್ಪನ ಕೈ ಹಿಡಿದ ಮಗಳು; ಬುದ್ಧಿವಂತಿಕೆಯಿಂದ್ಲೇ ಲಕ್ಷ ಕೋಟಿ ವ್ಯವಹಾರ ನಡೆಸ್ತಿದೆ ಕಂಪನಿ

ರತನ್ ಟಾಟಾ ಅವರು ಗೌರವ್ ಕುಶ್ವಾಹ ಅವರಿಗೆ ಒಂದೇ ಒಂದು ಸಲಹೆ ನೀಡಿದ್ದರಂತೆ ಅದೇನೆಂದ್ರೆ 'ಗ್ರಾಹಕರಿಗೆ ಮೌಲ್ಯಯುತ ಸೇವೆ ನೀಡುವ ಕಡೆಗೆ ಗಮನ ಕೇಂದ್ರೀಕರಿಸು. ಇನ್ನು ಉತ್ಪನ್ನ, ಸೇವೆ ಹಾಗೂ ಕಲೆ ವಿಚಾರದಲ್ಲಿ ಏನಾದರೂ ವಿಭಿನ್ನವಾದದ್ದನ್ನು ನಿರ್ಮಿಸಲು ಪ್ರಯತ್ನಿಸು.' ರತನ್ ಟಾಟಾ ಅವರು ಕಂಪನಿಯ ಆನ್ ಲೈನ್ ವಿಚಾರದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು  ಜೆರೋಧಾ ಸಹಸಂಸ್ಥಾಪಕ ನಿಖಿಲ್ ಕಾಮತ್ ಕೂಡ ಬ್ಲೂ ಸ್ಟೋನ್ ನಲ್ಲಿ ಕಳೆದ ವರ್ಷ 100 ಕೋಟಿ ರೂ. ಹೂಡಿಕೆ ಮಾಡಿದ್ದರು. 

ನಿಖಿಲ್ ಕಾಮತ್, ರಂಜನ್ ಪೈ, ಅಮಿತ್ ಜೈನ್, ದೀಪಿಂದರ್ ಗೋಯಲ್ಹಾಗೂ 360 ಒನ್ ಸೇರಿದಂತೆ ವಿವಿಧ ಹೊಸ ಹಾಗೂ ಜನಪ್ರಿಯ ಹೂಡಿಕೆದಾರರಿಂದ ಬ್ಲೂ ಸ್ಟೋನ್ 550 ಕೋಟಿ ರೂ. ಹೂಡಿಕೆ 
ಸ್ವೀಕರಿಸಿದೆ. ಕಳೆದ ವರ್ಷ ಬ್ಲೂ ಸ್ಟೋನ್ ನಿವ್ವಳ ಮೌಲ್ಯ ಅಂದಾಜು 440 ಮಿಲಿಯನ್ ಡಾಲರ್ ಇತ್ತು. 

ಅಮೆರಿಕದಲ್ಲಿನ ಉದ್ಯೋಗಕ್ಕೆ ಗುಡ್ ಬೈ ಹೇಳಿದ ಐಐಟಿ ಪದವೀಧರೆ ಈಗ 100 ಕೋಟಿ ಮೌಲ್ಯದ ಕಂಪನಿ ಒಡತಿ!

ಬ್ಲೂ ಸ್ಟೋನ್ ಇಂದು ಆನ್ ಲೈನ್ ಜ್ಯುವೆಲ್ಲರಿ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದೆ. ಗ್ರಾಹಕರಿಗೆ ವಿವಿಧ ವಿನ್ಯಾಸದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಒದಗಿಸುತ್ತಿದೆ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!