ಅಪಾರ್ಟ್‌ಮೆಂಟ್‌ನಲ್ಲಿ ಆರಂಭವಾದ ಕಂಪನಿ ಮೌಲ್ಯವೀಗ 30 ಸಾವಿರ ಕೋಟಿ: ಸಿಇಒಗೆ 3 ಕೋಟಿಗೂ ಹೆಚ್ಚು ಸಂಬಳ!

By BK Ashwin  |  First Published Nov 12, 2023, 5:26 PM IST

Delhivery ಎಂಬ ಭಾರತದ ಅತಿದೊಡ್ಡ ಸಂಪೂರ್ಣ ಡಿಜಿಟಲ್ ಲಾಜಿಸ್ಟಿಕ್ಸ್ ಕಂಪನಿಯನ್ನು 2011 ರಲ್ಲಿ ಸಾಹಿಲ್ ಬರುವಾ, ಮೋಹಿತ್ ಟಂಡನ್, ಭವೇಶ್ ಮಂಗ್ಲಾನಿ ಮತ್ತು ಕಪಿಲ್ ಭಾರತಿ ಅವರು ಸ್ಥಾಪಿಸಿದರು.


ನವದೆಹಲಿ (ನವೆಂಬರ್ 12, 2023): ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಜನರು ಪ್ರಯಾಣಿಸಲು ಅನುವು ಮಾಡಿಕೊಡುವುದರ ಜೊತೆಗೆ, ಅಂತಾರಾಷ್ಟ್ರೀಯ ಗಡಿಗಳಲ್ಲಿ ಪ್ಯಾಕೇಜ್‌ಗಳನ್ನು ಕಳುಹಿಸಲು ತಂತ್ರಜ್ಞಾನವು ಕಾರ್ಯಸಾಧ್ಯವಾಗುವಂತೆ ಮಾಡಿದೆ. ನಾವು ಈ ಲೇಖನದಲ್ಲಿ ಭಾರತದ ಅತಿದೊಡ್ಡ ಸಂಪೂರ್ಣ ಡಿಜಿಟಲ್ ಲಾಜಿಸ್ಟಿಕ್ಸ್ ಕಂಪನಿಯ ಬಗ್ಗೆ ತಿಳಿದುಕೊಳ್ಳೋಣ.

Delhivery ಎಂಬ ಭಾರತದ ಅತಿದೊಡ್ಡ ಸಂಪೂರ್ಣ ಡಿಜಿಟಲ್ ಲಾಜಿಸ್ಟಿಕ್ಸ್ ಕಂಪನಿಯನ್ನು 2011 ರಲ್ಲಿ ಸಾಹಿಲ್ ಬರುವಾ, ಮೋಹಿತ್ ಟಂಡನ್, ಭವೇಶ್ ಮಂಗ್ಲಾನಿ ಮತ್ತು ಕಪಿಲ್ ಭಾರತಿ ಅವರು ಸ್ಥಾಪಿಸಿದರು. ತಂತ್ರಜ್ಞಾನವು ವಿಕಸನಗೊಳ್ಳುತ್ತಿದ್ದಂತೆ, ತ್ವರಿತ ಮತ್ತು ವೇಗದ ಡೆಲಿವರಿ ಅಗತ್ಯವೂ ಹೆಚ್ಚಾಗುತ್ತದೆ. ಪ್ರಸ್ತುತ ಸಿಇಒ, ಸಾಹಿಲ್ ಬರುವಾ, ವ್ಯವಹಾರವನ್ನು ಉಳಿಸುವಲ್ಲಿ ಮತ್ತು ಅದನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. FY 2023 ರಲ್ಲಿ 7,225 ಕೋಟಿ ವಾರ್ಷಿಕ ಆದಾಯದೊಂದಿಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಆಗಿ ಸಾಹಿಲ್ ತಿಂಗಳಿಗೆ 25 ಲಕ್ಷ ರೂ. ಅಥವಾ 3.1 ಕೋಟಿ ರೂ.ಗಿಂತ ಹೆಚ್ಚು ಗಳಿಸಿದ್ದಾರೆ ಎಂದು inc42.com ವರದಿ ಮಾಡಿದೆ.

Tap to resize

Latest Videos

ಇದನ್ನು ಓದಿ: ಇಂದು ದೀಪಾವಳಿ ಮುಹೂರ್ತ ಟ್ರೇಡಿಂಗ್: ಸಮಯ, ಹೂಡಿಕೆದಾರರು ತಿಳಿಯಲೇಬೇಕಾದ ಅಂಶ ಹೀಗಿದೆ..

ಸಾಹಿಲ್ ಬರುವಾ ಯಾರು?
ಕರ್ನಾಟಕದ ಎನ್‌ಐಟಿಯಲ್ಲಿ ಸಾಹಿಲ್‌ ಬರುವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದ್ದು, ನಂತರ ಬೆಂಗಳೂರಿನ ಐಐಎಂನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಅವರು 2005 ರಲ್ಲಿ ಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯಕ್ಕೆ ಹೋದ ನಂತರ CALCE ಲ್ಯಾಬ್ಸ್‌ನಲ್ಲಿ ಸಂಶೋಧನಾ ಇಂಟರ್ನ್ ಆಗಿ ನಾಲ್ಕು ತಿಂಗಳುಗಳನ್ನು ಕಳೆದರು. ಬಳಿಕ, ಬೆಂಗಳೂರು ಮೂಲದ ಸ್ಟೇಗ್ಲಾಡ್ ಎಂಬ ಕಂಪನಿಯಲ್ಲಿ 2007 ರಲ್ಲಿ ಕೆಲಸಕ್ಕೆ ಸೇರಿದ್ದರು. ತನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ಮೊದಲು, ಅವರು ‘ಬೈನ್ ಅಂಡ್‌ ಕಂಪನಿ’ಯಲ್ಲಿ ಸಹಾಯಕ ಸಲಹೆಗಾರರಾಗಿದ್ದರು.

ದೆಹಲಿಯ ಅಪಾರ್ಟ್‌ಮೆಂಟ್‌ವೊಂದರಿಂದ Delhivery ಇ-ಕಾಮರ್ಸ್ ಕೊರಿಯರ್ ಸೇವೆಯಾಗಿ ಪ್ರಾರಂಭವಾಯಿತು. ಕಡಿಮೆ-ವೆಚ್ಚದ ಇಂಟರ್ನೆಟ್‌ನ ವ್ಯಾಪಕ ಲಭ್ಯತೆಯಿಂದ ಗ್ರಾಹಕರ ನಡವಳಿಕೆಯ ಬದಲಾವಣೆಯ ಪರಿಣಾಮವಾಗಿ ಕಂಪನಿಯು ವೇಗವಾಗಿ ವಿಸ್ತರಿಸಿದ್ದು, ಇದು ಹೋಮ್‌ ಡೆಲಿವರಿ ಬೇಡಿಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು.

ಇದನ್ನೂ ಓದಿ: ಮೋದಿಯ ಆ ಒಂದು ಮಾತಿಗೆ ದನಿಗೂಡಿಸಿದ ಭಾರತ: ಚೀನಾಗೆ ಬರೋಬ್ಬರಿ 1 ಲಕ್ಷ ಕೋಟಿ ರೂ. ನಷ್ಟ!

ಆ ಸಮಯದಲ್ಲಿ, ಹೆಚ್ಚಿನ ವ್ಯಾಪಾರಗಳು ಇ-ಕಾಮರ್ಸ್ ವ್ಯವಹಾರಗಳಿಗೆ ವಿತರಣಾ ಸೇವೆಗಳನ್ನು ಒದಗಿಸುತ್ತಿರಲಿಲ್ಲ. ಅಲ್ಲದೆ, Delhivery ಬ್ಯುಸಿನೆಸ್‌ ಸ್ಥಾಪನೆಯಾದ 2 ವರ್ಷಗಳ ನಂತರ ಕಿರಾಣಿ ಮತ್ತು ಫ್ಯಾಷನ್ ಚಿಲ್ಲರೆ ಮಾರುಕಟ್ಟೆಗಳಲ್ಲಿ ತೊಡಗಿತು. ಅವರು ತಮ್ಮ ಸರಕುಗಳನ್ನು ಒಂದು ಅಥವಾ ಎರಡು ದಿನಗಳಲ್ಲಿ ತಲುಪಿಸಲು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಪ್ರೈಮ್‌ನೊಂದಿಗೆ ತ್ವರಿತವಾಗಿ ಕೆಲಸ ಮಾಡಿದ್ದು, ಇದು ಅವರ ಸಾಮಾನ್ಯ ವಿತರಣಾ ಸಮಯಕ್ಕಿಂತ ಹೆಚ್ಚು ವೇಗವಾಗಿತ್ತು.

ನವೆಂಬರ್ 11, 2023 ರ ಹೊತ್ತಿಗೆ Delhivery ಮಾರುಕಟ್ಟೆ ಬಂಡವಾಳವು 30,054 ಕೋಟಿ ರೂ.ಗಳಷ್ಟಿದೆ. ಇದಲ್ಲದೆ, FY 2023 ರಲ್ಲಿ, ಕಂಪನಿಯ ನಿವ್ವಳ ಆದಾಯವು 1007 ಕೋಟಿ ರೂ. ಎಂದು ತಿಳಿದುಬಂದಿದೆ. 

ಇದನ್ನು ಓದಿ: ದೀಪಾವಳಿಗೆ ಚಿನ್ನ ತಗೊಳ್ಳೋ ಪ್ಲ್ಯಾನ್‌ ಇದ್ಯಾ? ಹಾಗಾದ್ರೆ ಇಲ್ಲಿದೆ ನೋಡಿ ಮಂಗಳಕರ ಸಮಯ!

click me!